Dakshina Kannada: ಬೆಳ್ತಂಗಡಿಯ ಪ್ರತಿಷ್ಟಿತ ಅರಣ್ಯ ಕಳ್ಳರು: ಹುಲಿ ಉಗುರಿಗೆ ಇರೋ ಬೆಲೆ ಸಾವಿರಾರು ಎಕ್ರೆ ಅರಣ್ಯಕ್ಕೆ ಇಲ್ಲದಾಯಿತೇ? ಅರಣ್ಯ ಮಂತ್ರಿಗಳು ಖುದ್ದು ದಾಳಿಗೆ ಹೊರಡಬೇಕಿದೆ !

Dakshina Kannada news tiger claw case Belthangadi Prominent Forest Thieves news

Dakshina Kannada: ಇದೀಗ ರಾಜ್ಯದಲ್ಲಿ ಹುಲಿಯುಗುರಿಗೆ ವಿಪರೀತ ಬೇಡಿಕೆ. ಏಕಾಏಕಿ ಹಳೆಯ ಹುಲಿ ಉಗುರುಗಳು ಎದ್ದುಕೊಂಡು ಕಂಡಕಂಡವರಿಗೆ ಪರಚುತ್ತಿದೆ. ಆರೋಗ್ಯ ಇಲಾಖೆ ಮತ್ತು ಸಚಿವಾಲಯಕ್ಕೆ ಈಗ ಮೃಗಗಳ ಬಗ್ಗೆ ಮತ್ತು ಅರಣ್ಯಗಳ ಬಗ್ಗೆ ಎಲ್ಲಿಲ್ಲದ ಕಾಳಜಿ ಶುರುವಾಗಿದೆ. ಕಾರಣ, ಯಾರೋ, ತಮ್ಮ ಕೊರಳಲ್ಲಿ ತಮ್ಮ ಪೂರ್ವಜರಿಂದ ಬಂದ ಹುಲಿಯ ಉಗುರುಗಳನ್ನು, ಲಾಕೆಟ್ ಗಳನ್ನು ಧರಿಸಿದ್ದರೆ ಅವರನ್ನು ಬಂಧಿಸಲಾಗುತ್ತದೆ, ಅಥವಾ ಅವರ ಮೇಲೆ ತನಿಖೆ ಶುರುವಾಗುತ್ತದೆ. ಆದರೆ ಒಂದು ಜೊತೆ ಹುಲಿಯುಗುರಿಗೆ ಇರುವ ಮೌಲ್ಯವು, ಸಾವಿರಾರು ಹುಲಿಗಳು, ಚಿರತೆಗಳು ಮತ್ತಿತರ ಆಹಾರ ಸರಪಳಿಯಲ್ಲಿ ಬರುವ ಲಕ್ಷಾಂತರ ಜೀವರಾಶಿಗಳಿಗೆ ಇಲ್ಲ ಎನ್ನುವುದನ್ನು ಕರ್ನಾಟಕದ ಘನ ಸರಕಾರದ ಅರಣ್ಯ ಇಲಾಖೆ ಕಾಲದಿಂದ ಕಾಲಕ್ಕೆ ಪ್ರೂವ್ ಮಾಡಿಕೊಂಡು ಬಂದಿದೆ. ಅದು ಇವತ್ತಿಗೂ ಮುಂದುವರೆದಿದೆ.

ಹೌದು, ಹುಲಿಯುಗುರಿಗೆ ಇರುವ ಮಹತ್ವ ಅರಣ್ಯಕ್ಕೆ ಇಲ್ಲ. ಇದು ಬೇರೆಲ್ಲಿಯದೋ ಊರಿನ ಕಥೆಯಲ್ಲ. ಇದು ಬೆಳ್ತಂಗಡಿ ತಾಲೂಕಿನ ಮತ್ತು ನತದೃಷ್ಟ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಇತರ ಆಸುಪಾಸಿನ ತಾಲೂಕುಗಳ ದುರದೃಷ್ಟದ ಕಥೆ. ಇಲ್ಲಿ ಸಾವಿರಾರು ಎಕರೆ ಭೂಮಿ ‘ಭೂಕಾಸುರರ’ ಅಟ್ಟಹಾಸಕ್ಕೆ ಖಾಸಗಿ ಸೊತ್ತಾಗಿ ಪರಿಣಮಿಸಿದೆ. ಎಲ್ಲಾ ಸರ್ಕಾರಿ ಭೂಮಿ, ಅರಣ್ಯ ಭೂಮಿಗಳನ್ನು ತಾನೊಬ್ಬ ಇಲ್ಲಿನ ತಾಲೂಕಿನ ‘ಸ್ವಯಂ ಘೋಷಿತ ದೇವಮಾನವ, ದೈವಾರ್ಥ ಸಂಭೂತ’ ಎಂದು ತನ್ನನ್ನು ತಾನು ಬಿಂಬಿಸಿಕೊಂಡು, ಇಡೀ ರಾಜ್ಯದ ನಂಬರ್ ವನ್ ಭೂ ಕಳ್ಳನಾಗಿಯಾಗಿರುವ ವ್ಯಕ್ತಿಯೊಬ್ಬ ಇಡೀ ಅರಣ್ಯಕ್ಕೆ ಕಂಟಕ ಆಗಿರುವ ಸಂಗತಿ ಬಟಾ ಬಹಿರಂಗ ಆದರೂ ಆ ವಿಷಯದಲ್ಲಿ ಯಾವುದೇ ಸರ್ಕಾರ ನಿರ್ಲಿಪ್ತ ಮೌನ ವಹಿಸಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ.

ಈಗ ಅರಣ್ಯ ಮಂತ್ರಿ ಈಶ್ವರ ಖಂಡ್ರೆಯವರು ಹುಲಿಯ ಉಗುರಿನ ಬೇಟೆ ಮಾಡುತ್ತಿದ್ದಾರೆ. ಆದ್ರೆ ಹಳೆಯ ಹುಲಿ ಉಗುರಿಗೆ ನೀಡುವ ಮಹತ್ವವನ್ನು ಸಾವಿರಾರು ಹುಲಿಗಳಿಗೆ ಆಶ್ರಯ ನೀಡಬಲ್ಲ ಅರಣ್ಯಕ್ಕೆ ಅರಣ್ಯ ಇಲಾಖೆಯು ನೀಡುತ್ತಿಲ್ಲ. ಈ ಬಗ್ಗೆ ದಶಕಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿರುವ ನಾಗರೀಕ ಸೇವಾ ಟ್ರಸ್ಟ್, ವಿಸ್ತೃತವಾಗಿ ತನ್ನ ಅಧ್ಯಯನವನ್ನು ನಡೆಸಿ ಸಂಶೋಧನಾ ಲೇಖನ ಪ್ರಕಟಿಸಿದೆ. ಅದರಲ್ಲಿ ಸಾವಿರಾರು ಎಕರೆಗಳ ಅರಣ್ಯ ಕಬಳಿಕೆಯ ಮಾಹಿತಿ ಇದ್ದು, ಅದರ ಆಧಾರದ ಮೇಲೆ ತಕ್ಷಣ ತನಿಖೆ ನಡೆಸಬೇಕಿದೆ. ತಕ್ಷಣ ಅರಣ್ಯ ಭೂಮಿಯನ್ನು ಭೂಕಾಸುರನಿಂದ ವಸೂಲು ಮಾಡಬೇಕಿದೆ.

ವಾಸ್ತವ ಸ್ಥಿತಿ ಹೀಗಿದೆ, ನೋಡಿ ಒಂದು ಸ್ಯಾಂಪಲ್:

ಬೆಳ್ತಂಗಡಿ ತಹಶೀಲ್ದಾರರು, ಒಟ್ಟು 592 ಎಕ್ರೆ ಒತ್ತುವರಿ ಮಾಡಿದ 212 ಮಂದಿಗೆ ತೆರವುಗೊಳಿಸಲು ನೋಟೀಸು ಕೊಟ್ಟ ವಿವರ ಲಭ್ಯವಾಗಿದೆ. ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಕೆಲವು ಪ್ರಕರಣ ದಾಖಲಿಸಿದ್ದಾರೆ. ಆಶ್ಚರ್ಯವೆಂದರೆ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಒಂದೇ ಒಂದು ಪ್ರಕರಣ ಈ ಪಟ್ಟಿಯಲ್ಲಿ ಇಲ್ಲ. ಹಾಗಾಗಿ, ಇಲ್ಲಿ ಅರಣ್ಯ ಇಲಾಖೆ ‘ಕಾಡು ಇಲಾಖೆ ‘ ಆಗಿ ಅರಣ್ಯ ಕಳ್ಳರ ಜೊತೆ ಕೈ ಜೋಡಿಸಿದ್ದು ಸ್ಪಷ್ಟವಾಗಿದೆ.

ಧರ್ಮಸ್ಥಳ ಗ್ರಾಮದ ಕೊಳoಜಿಲೋಡಿ, ಇರ್ನಾಡಿ, ಕಟ್ಟದ ಬೈಲು ನಲ್ಲಿರುವ ಸ.ನಂ.119/2 ರಲ್ಲಿ 4.90, 119/3 ರಲ್ಲಿ 4.75,119/4 ರಲ್ಲಿ 4.80 ಜಾಗವನ್ನು ಇದೇ ಭೂಕಾಸುರರು ಖರೀದಿಸಿದ್ದಾರೆ ಜಮೀನುಗಳು. 1996-97ರಲ್ಲಿ . 112/2 ರಲ್ಲಿ ಕದಿಂ 2.30 ಎಕ್ರೆ, ಒಟ್ಟು 16.75 ಎಕ್ರೆ. ಈ ಭೂಮಿಯಲ್ಲಿ ರಬ್ಬರ್ ತೋಟ ಮಾಡಿದ್ದಾರೆ, ತೆಂಗು ಕೂಡಾ ಇದೆ. ಇಲ್ಲಿ ಬಹುತೇಕ ಒತ್ತುವರಿ ಆಗಿದ್ದು, ರಬ್ಬರ್ ತೋಟ ಮಾಡಿದ್ದಾರೆ. ಪಕ್ಕದಲ್ಲೇ ಅರಣ್ಯ ಇಲಾಖೆಯ ಭೂಮಿ ಸ.ನಂ. 120/* ರಲ್ಲಿ 109 ಎಕ್ರೆ ಇದ್ದು ಇದರಲ್ಲಿಯೂ 5 ಎಕ್ರೆ ಮೀರಿ ಒತ್ತುವರಿಯಾಗಿದೆ. ಜನಸಾಮಾನ್ಯರು ಅಲ್ಪಸ್ವಲ್ಪ ಒತ್ತುವರಿ ಮಾಡಿದ್ರೆ ಒದ್ದೋಡಿಸುವ ಇವರು ದೊಡ್ಡ ಭೂಕಾಸುರನಿಗಾಗಿ ಯಾವ ತ್ಯಾಗಕ್ಕೂ ಸಿದ್ಧ. ಇಲ್ಲೇ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅವರದೇ ಪೆಟ್ರೋಲ್ ಬಂಕ್ ಕೂಡಾ ಅರಣ್ಯ ಇಲಾಖೆ ಜಾಗದಲ್ಲಿದೆಯಾದರೂ ಕಂದಾಯ ಇಲಾಖೆ ಇದರಲ್ಲಿ 30 ಸೆಂಟ್ಸ್ ಅನುದಾನ ನೀಡಿ ಧನ್ಯವಾಗಿದೆ. ಬೆಳ್ತಂಗಡಿ ತಾಲೂಕಿನ ದಲಿತರ ಕೈಯಲ್ಲಿ ಅಂಗೈ ಅಗಲದ ಜಾಗವಿಲ್ಲ. ಎಷ್ಟೋ ಜನರು ರಸ್ತೆ ಬದಿಯಲ್ಲಿ ಸೋರುವ ಗುಡಿಸಿಲಿನಲ್ಲಿ ವಾಸವಾಗಿದ್ದಾರೆ. ಆದ್ರೆ ‘ ನಡೆದಾಡುವ ದೇವರು’ ಮಾತ್ರ ಕಾಂಡವವನ ದಹನಕ್ಕೆ ಹೊರಟಿದ್ದಾರೆ. ಇಡೀ ಭ್ರಷ್ಟ ವ್ಯವಸ್ಥೆ, ರಾಜಕೀಯ ನಾಯಕರು ಅವರ ಬೆಂಬಲಕ್ಕೆ ನಿಂತಿದೆ.

ತಮ್ಮ ಭಾಷಣಗಳಲ್ಲಿ ಲೇಖನಗಳಲ್ಲಿ ಸತ್ಯ – ಧರ್ಮ – ನ್ಯಾಯವನ್ನು ಪರರಿಗೆ ಉಪದೇಶ ಮಾಡುವ ಈ ಭೂಕಾಸುರನಿಗೆ ಕಬಳಿಸಲು ಯಾವುದೇ ಭೂಮಿ ಆದರೂ ಪರವಾಗಿಲ್ಲ. ಅದರಲ್ಲೂ ಅರಣ್ಯ ಭೂಮಿ ಅಂದರೆ ಅವರಿಗೆ ಮೃಷ್ಟಾನ್ನ ಭೋಜನ. ಹೇಳುವವರು ಕೇಳುವವರು ಯಾರೂ ಇಲ್ಲದ ಈ ಭೂಮಿಗೆ ಸರ್ಕಾರವು ಓರ್ವ ಜವಾಬ್ದಾರಿಯ ಅಪ್ಪನಾಗಿ, ಭೂಮಾಲೀಕನಾಗಿ ಕಾವಲು ಕಾಯಬೇಕಿತ್ತು. ಆದರೆ ಸರ್ಕಾರದ ಅಧಿಕಾರಿಗಳು ಇಲ್ಲಿ ಭಯದಿಂದ ಬದುಕುತ್ತಿದ್ದಾರೆ. ಈಗ ಹುಲಿಯುಗರನ್ನೂ ಕೂಡಾ ಬಿಡದ ಅರಣ್ಯ ಮಂತ್ರಿಗಳು ತಕ್ಷಣ ಇಡೀ ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಭೂ ಕಳ್ಳರ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಬೇಕಿದೆ. ಇದು ಒಂದೆರಡು ಎಕರೆಗಳ ಮಾತಲ್ಲ. ಖುದ್ದು ಅರಣ್ಯ ಮಂತ್ರಿ ಈಶ್ವರ ಖಂಡ್ರೆಯವರು ಇಲ್ಲೇ ಮೊಕ್ಕಾಂ ಹೂಡಿ ಎಲ್ಲಾ ಜಾಗಗಳನ್ನು ಸರ್ಕಾರಕ್ಕೆ ವಾಪಸ್ ಪಡೆದ ಮೇಲೆ ಮತ್ತೆ ಬೆಂಗಳೂರಿಗೆ ವಾಪಸಾಗಬೇಕು. ಕಾನೂನು ಮೀರಿ ಅರಣ್ಯವನ್ನೇ ನುಂಗಿರುವ ‘ಭೂಕಾಸುರ’ ನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಬೇಕಿದೆ. ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಇನ್ನೊಂದು ಕಾನೂನು ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಿರೂಪಿಸಬೇಕಿದೆ.

ಇದನ್ನೂ ಓದಿ: Mylara Lingeshwara Karnika 2023: ಹರಪನಹಳ್ಳಿಯ ಗೊರವಪ್ಪನಿಂದ ಬಂತು ಅಚ್ಚರಿಯ ಕಾರ್ಣಿಕ – ಏನೀ ಹೇಳಿಕೆಯ ಒಳ ಮರ್ಮ?!

Leave A Reply

Your email address will not be published.