Tiger Killed By Porcupine: ಮುಳ್ಳು ಹಂದಿ ಜೊತೆ ಗುದ್ದಾಡಿ ಜೀವ ಕಳೆದುಕೊಂಡ ʼವ್ಯಾಘ್ರʼ!!!
tiger dies after fight with prcupine rare wildlife death in tamilnadu
Tiger Killed By Porcupine: ಕಳೆದ ಒಂದು ವಾರದಿಂದ ಕೇವಲ ಹುಲಿ ನಖ ದ ಕುರಿತ ವರದಿಗಳು ಬರುತ್ತಲೇ ಇದೆ. ಹಾಗಾಗಿ ವ್ಯಾಘ್ರವೊಂದು ಈ ಬಾರಿ ಎಲ್ಲಾ ಕಡೆ ತನ್ನ ಹೆಸರ ಛಾಪು ಹೊಂದಿದೆ ಎಂದೇ ಹೇಳಬಹುದು. ಅಂತಿಪ್ಪ ಹುಲಿಯನ್ನು ಒಂದು ಮುಳ್ಳು ಹಂದಿಯೊಂದು ಸಾಯಿಸಿದೆ ಎಂದರೆ ನೀವು ನಂಬುತ್ತೀರಾ? ಇಲ್ಲ ಅಲ್ವಾ? ಆದರೆ ಇದು ನಿಜ. ಇಂತಹ ಒಂದು ಅಪರೂಪದ ಘಟನೆಯೊಂದು ತಮಿಳುನಾಡಿದ ಅಮರಾವತಿ ಅಭಯಾರಣ್ಯದಲ್ಲಿ ನಡೆದಿದೆ. ಭಾರತದ ರಾಷ್ಟ್ರ ಪ್ರಾಣಿಯಾಗಿರುವ ಹುಲಿಯೊಂದನ್ನು ತನಗಿಂತ ಕಡಿಮೆ ಶಕ್ತಿಶಾಲಿಯಾದ ಮುಳ್ಳು ಹಂದಿ ಕೈಯಲ್ಲಿ ಹೇಗೆ ಸತ್ತಿತ್ತು? ಇಲ್ಲಿದೆ ಇಂಟೆರೆಸ್ಟಿಂಗ್ ಸ್ಟೋರಿ.
ನಿಮಗೊಂದು ಮಾತು ನೆನಪಿರಬಹುದು. ಆನೆ ಎಷ್ಟೇ ಬಲಶಾಲಿಯಾದರೂ ಒಂದು ಪುಟ್ಟ ಇರುವೆ ಮೂಗಿನೊಳಗೆ ಹೋದರೆ ಅದರ ಪರಿಸ್ಥಿತಿ ಹೇಗಾಗಬೇಡ? ಹೇಳಿ? ಅದೇ ರೀತಿಯ ಘಟನೆ ನಡೆದಿತ್ತು ಈ ಹುಲಿ ವಿಚಾರದಲ್ಲಿ. ಈ ಘಟನೆ ತಿರುಪುರ ಅರಣ್ಯ ವಲಯದ ಅಮರಾವತಿ ಅರಣ್ಯದ ಕಳುದಕತ್ತಿ ತೊರೆಯ ಬಳಿ ಹುಲಿ ಸಾವು ಕಂಡಿದೆ. ಅರಣ್ಯಾಧಿಕಾರಿಗಳು ಆ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದರ ಗಂಟಲಲ್ಲಿ ಮುಳ್ಳುಹಂದಿಯ ಮುಳ್ಳು ಸಿಕ್ಕಿ ಅದು ಮೃತಪಟ್ಟಿದೆ( Tiger Killed By Porcupine) ಎಂಬ ಸಂಗತಿ ಬಯಲಾಗಿದೆ.
ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಗಂಡು ಹುಲಿಯಾಗಿದ್ದು, ಇದಕ್ಕೆ ಸುಮಾರು ಒಂಭತ್ತು ವರ್ಷ. ಇದು ಮುಳ್ಳು ಹಂದಿಯ ಜೊತೆ ಕಾಳಗ ನಡೆಸಿದೆ. ಆಗ ಹುಲಿಯ ಕಾಲು ಮತ್ತು ಮಂಡಿಗೆ ಗಾಯವಾಗಿದ್ದು, ಈ ವೇಳೆ ಮುಳ್ಳು ಹಂದಿಯನ್ನು ತಿನ್ನಲು ಹುಲಿ ಯತ್ನಿಸಿದೆ. ಆಗ ಅದರ ಗಂಟಲಲ್ಲಿ ಮುಳ್ಳುಹಂದಿಯ ಮುಳ್ಳು ಸಿಕ್ಕಿವೆ ಎಂದು ವರದಿ ಮಾಡಿದೆ.
ಅರಣ್ಯದಲ್ಲಿ ಸಿಬ್ಬಂದಿ ಗಸ್ತು ತಿರುವಾಗ ಈ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ದಹನ ಮಾಡಲಾಯಿತು. ಹುಲಿ ದೇಹದಿಂದ ಹಲವು ಮಾದರಿ ಸಂಗ್ರಹ ಮಾಡಲಾಗಿದ್ದು, ಹೆಚ್ಚಿನ ತನಿಖೆಗೆ ಮೂರು ವಿವಿಧ ವಿಧಿ ವಿಜ್ಞಾನ ಲ್ಯಾನ್‌ಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಭೀಕರ ಅಪಘಾತ: 8 ಮಹಿಳೆಯರು ಸೇರಿ 12 ಮಂದಿ ದುರ್ಮರಣ, ಟಾಟಾ ಸುಮೋ ನುಜ್ಜುಗುಜ್ಜು !