Sim Card Rules: ಸಿಮ್ ಕಾರ್ಡ್ ಖರೀದಿ ಮಾಡೋರಿಗೆ ಬಂತು ಹೊಸ ರೂಲ್ಸ್ – ಇನ್ಮುಂದೆ ಎಷ್ಟು ಸಿಮ್ ಖರೀದಿಸಬೇಕು ಗೊತ್ತಾ?!

National News new rules for buying SIM cards no more extra sim in India latest news

Sim Card Rules: ಹೆಚ್ಚುತ್ತಿರುವ ವಂಚನೆಗಳನ್ನು ತಡೆಯಲು ಸರ್ಕಾರ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಮೋಸ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆ ಸಿಮ್ ಖರೀದಿಸುವ (Sim Card Rules)ನಿಯಮಗಳನ್ನು ಬದಲಾಯಿಸಿದೆ.

ಸಿಮ್ ಖರೀದಿಸುವ ಹೊಸ ನಿಯಮಗಳು ಜಾರಿಗೆ ಬಂದ ಬಳಿಕ ದೊಡ್ಡ ಪ್ರಮಾಣದಲ್ಲಿ ಸಿಮ್ ಖರೀದಿ ಮಾಡುವ ವರಿಗೆ ಬ್ರೇಕ್ ಸಿಗಲಿದೆ. ಸೈಬರ್ ವಂಚನೆ ಮತ್ತು ಹಗರಣಗಳನ್ನು ತಡೆಗಟ್ಟಲು ಸರ್ಕಾರ ಸಿಮ್ ಕಾರ್ಡ್ಗಳ ಹೊಸ ನಿಯಮಗಳನ್ನು ಹೊರಡಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಹಿಂದೆ ಹೇಳಿದ್ದರು. ಇದರ ಜೊತೆಗೆ ವಂಚನೆ ಕರೆಗಳನ್ನು ತಡೆಗಟ್ಟಲು ಸುಮಾರು 52 ಲಕ್ಷ ಸಂಪರ್ಕಗಳನ್ನು ನಿರ್ಬಂಧಿಸಲಾಗಿದೆ.

ಡಿಸೆಂಬರ್ 1, 2023 ರಿಂದ, ಸಿಮ್ ಖರೀದಿಸಲು ಹೊಸ ನಿಯಮಗಳನ್ನು ದೇಶಾದ್ಯಂತ ಜಾರಿಗೆ ತರಲಾಗುತ್ತದೆ. ಈ ನಿಯಮಗಳ ಅನುಷ್ಠಾನದ ಬಳಿಕ, ನೀವು ಒಂದು ಐಡಿಯಲ್ಲಿ ಸೀಮಿತ ಸಿಮ್ ಖರೀದಿ ಮಾಡಬಹುದು. ಹೊಸ ನಿಯಮಗಳ ಅನುಸಾರ, ನವೆಂಬರ್ 30 ರ ನಂತರ ಟೆಲಿಕಾಂ ಕಂಪನಿಯು ನೋಂದಣಿ ಇಲ್ಲದೆ ಸಿಮ್ ಮಾರಾಟ ಮಾಡಲು ಮಾರಾಟಗಾರರಿಗೆ ಅನುವು ಮಾಡಿದರೆ, 10 ಲಕ್ಷ ರೂ.ಗಳ ದಂಡ ವಿಧಿಸಲು ಅವಕಾಶವಿದೆ. ಡಿಸೆಂಬರ್ 1 ರಿಂದ ಈ ನಿಯಮ ಜಾರಿಗೆ ತರಲು ದೂರಸಂಪರ್ಕ ಇಲಾಖೆ ಟೆಲಿಕಾಂ ಆಪರೇಟರ್ ಗಳಿಗೆ ಸೂಚನೆ ನೀಡಿದೆ.ಪ್ರಸ್ತುತ ದೇಶದಲ್ಲಿ ಸುಮಾರು 10 ಲಕ್ಷ ಸಿಮ್ ಕಾರ್ಡ್ ಮಾರಾಟಗಾರರಿದ್ದು, ನವೆಂಬರ್ ಅಂತ್ಯದ ಸಂದರ್ಭ ಎಲ್ಲಾ ವಿತರಕರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Congress Gurantee Scheme: ಮಹಿಳೆಯರಿಗೆ ಮತ್ತೊಂದು ಲಾಟ್ರಿ- ‘ಗೃಹಲಕ್ಷ್ಮೀ’ ಜೊತೆಗೆ 500ರೂ ಗೆ LPG ಸಿಲಿಂಡರ್, ಯಜಮಾನಿಗೆ 10,000 ಹಣ – ಕಾಂಗ್ರೆಸ್ ನಿಂದ ಅಚ್ಚರಿಯ ಘೋಷಣೆ!!

Leave A Reply

Your email address will not be published.