Health Tips: ಬೆಳ್ಳಂಬೆಳಗ್ಗೆಯೇ ಖಾಲಿ ಹೊಟ್ಟೆಗೆ ಟೀ, ಕಾಫಿ ಕುಡಿಯುತ್ತೀರಾ ?! ಈ ಬಗ್ಗೆ ಸೈನ್ಸ್ ಏನು ಹೇಳುತ್ತೆ ಗೊತ್ತಾ ?!

Lifestyle health news what happens drinking tea or coffee on an empty stomach here is detail

Health Tips: ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯುವ ಅಭ್ಯಾಸ ಎಷ್ಟು ಜನರಿಗೆ ಇದೆ ಎಂದರೆ ಬಹುತೇಕ ಎಲ್ಲರೂ ಹೌದು ಎನ್ನುತ್ತಾರೆ. ಏಕೆಂದರೆ ಮನುಷ್ಯ ದಿನದಲ್ಲಿ ಮೂರು ಹೊತ್ತು ಆಹಾರ ಸೇವನೆ ಮಾಡಬೇಕು ಎನ್ನುವ ಪದ್ಧತಿ (Health Tips) ಹೇಗೆ ಅಭ್ಯಾಸವಾಗಿ ಅಂದಿನಿಂದ ಇಂದಿನವರೆಗೆ ಬೆಳೆದು ಬಂದಿದೆ, ಅದೇ ರೀತಿ ಬೆಳಗಿನ ಉಪಹಾರಕ್ಕೆ ಮುಂಚೆ ಒಂದು ಲೋಟ ಕಾಫಿ ಕುಡಿಯಬೇಕು ಎನ್ನುವ ಹವ್ಯಾಸ ಕೂಡ ಅಭ್ಯಾಸವಾಗಿ ಬೆಳೆದಿದೆ.

ಕೆಲವರು ಕಾಫಿ ಬದಲು ಚಹಾ ಕೂಡ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಹಲವರು ದಿನದಲ್ಲಿ ಒಮ್ಮೆ ಕಾಫಿ ಕುಡಿದು ಹಲವು ಬಾರಿ ಚಹಾ ಕುಡಿಯುತ್ತಾರೆ. ಆದರೆ ಬೆಳ್ಳಂಬೆಳಗ್ಗೆಯೇ ಖಾಲಿ ಹೊಟ್ಟೆಗೆ ಟೀ, ಕಾಫಿ ಕುಡಿಯಬಹುದಾ? ಈ ಬಗ್ಗೆ ಸೈನ್ಸ್ ಹೇಳುತ್ತೆ ಗೊತ್ತಾ ?!

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ದೇಹದ ಮೇಲೆ ಗಂಭೀರ ಅಡ್ಡ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ ಎಂದು ಸಂಶೋಧನೆಗಳು ತೋರಿಸಿವೆ. ಪ್ರತಿದಿನ ಬೆಳಿಗ್ಗೆ ಕಾಫಿ ಕುಡಿಯುವುದರಿಂದ ಹಲವಾರು ದೀರ್ಘಕಾಲದ ಕಾಯಿಲೆಗಳು ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಪ್ರತಿದಿನ ಬೆಳಿಗ್ಗೆ ಕಾಫಿ ಕುಡಿಯುವವರು ಅದರ ಬದಲು ನೀರು ಕುಡಿಯಬೇಕು. ಪ್ರತಿದಿನ ಬೆಳಿಗ್ಗೆ ನೀರು ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಆದರೆ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಇದರಿಂದ ಹಲವಾರು ಪ್ರಯೋಜನಗಳಿವೆ. ನೀರು ಕುಡಿದ ನಂತರ ಕಾಫಿ ಕುಡಿಯಬಹುದು.

ಪ್ರತಿದಿನ ಬೆಳಿಗ್ಗೆ ಕಾಫಿ ಕುಡಿಯಲು ಬಯಸುವವರು ಕೃತಕ ಸಿಹಿಕಾರಕವನ್ನು ಬಳಸುವುದನ್ನು ತಪ್ಪಿಸಬೇಕು. ಸಾಧ್ಯವಾದರೆ ಬೆಳಿಗ್ಗೆ ಸಕ್ಕರೆ ರಹಿತ ಕಾಫಿ ಕುಡಿಯುವುದು ಉತ್ತಮ ಎಂದು ಸಂಶೋಧನೆಗಳು ತೋರಿಸುತ್ತವೆ. ಹೆಚ್ಚಿನ ಪ್ರಮಾಣದ ಸಕ್ಕರೆಯೊಂದಿಗೆ ಕಾಫಿ ಕುಡಿಯುವುದರಿಂದ ಮಧುಮೇಹ ಮತ್ತು ಸ್ಥೂಲಕಾಯದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Job Vacancy: ಲಕ್ಷ ಲಕ್ಷ ವೇತನದ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಇಲಾಖೆ – ಅರ್ಜಿ ಹಾಕಲು ಇಂದೇ ಕೊನೆ ದಿನಾಂಕ !!

Leave A Reply

Your email address will not be published.