GruhaJyoti Yojana: ದೇವಾಲಯಗಳಿಗೂ ಇನ್ಮುಂದೆ ಫ್ರೀ ಕರೆಂಟ್ !! ಸರ್ಕಾರದಿಂದ ಮಹತ್ವದ ನಿರ್ಧಾರ yojana: ದೇವಾಲಯಗಳಿಗೂ ಇನ್ಮುಂದೆ ಫ್ರೀ ಕರೆಂಟ್ !! ಸರ್ಕಾರದಿಂದ ಮಹತ್ವದ ನಿರ್ಧಾರ
Karnataka news Congress guarantees gruhajyoti Yojana free electricity for Temple
GruhaJyoti Yojana: ಗೃಹಜ್ಯೋತಿ ಯೋಜನೆಯಡಿ(Gruha Jyoti Scheme) ಮನೆಗಳಿಗೆ ಉಚಿತ ವಿದ್ಯುತ್ (Free Electricity)ನೀಡುತ್ತಿರುವುದು ಗೊತ್ತಿರುವ ಸಂಗತಿ. ಇದೀಗ, ಸರಕಾರ(State Government)ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಸಿ ಶ್ರೇಣಿ ದೇವಸ್ಥಾನಗಳಿಗೂ ಈ ಸೌಲಭ್ಯ ಕಲ್ಪಿಸಲು ಮುಂದಾಗಿದೆ.
ಗೃಹಜ್ಯೋತಿ ಯೋಜನೆಯಡಿ (GruhaJyoti Yojana) ಮನೆಗಳಿಗೆ ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತಿರುವಂತೆ ಸಿ ದರ್ಜೆ ದೇವಸ್ಥಾನಗಳಿಗೂ (Temple)ಉಚಿತ ವಿದ್ಯುತ್ ಪೂರೈಕೆ ಮಾಡಲು ಸರಕಾರ ಚಿಂತನೆ ನಡೆಸಿದೆ. ಹೀಗಾಗಿ, ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲು ಯೋಜನೆ ರೂಪಿಸಲಾಗಿದೆ. ಒಂದರಿಂದ ಐದು ಲಕ್ಷ ರೂಪಾಯಿ ಆದಾಯ ಹೊಂದಿದ ಸಿ ಶ್ರೇಣಿ ದೇವಾಲಯಗಳು ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಮಾಸಿಕ ವಿದ್ಯುತ್ ಬಿಲ್, ನೀರಿನ ವೆಚ್ಚ ಭರಿಸಲು ಕೂಡ ಸಿ ವರ್ಗದ ದೇವಾಲಯಗಳಿಗೆ ನೆರವಾಗಲು ಸರಕಾರ ಮುಂದಾಗಿದೆ. ಹೀಗಾಗಿ, ಗೃಹಜ್ಯೋತಿ ಯೋಜನೆಯಡಿ ಸಿ ವರ್ಗದ ದೇವಾಲಯಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿದ್ದು, ರಾಜ್ಯದ ಸುಮಾರು 34,700 ದೇವಾಲಯಗಳಿಗೆ ನೆರವಾಗಲಿದೆ.
ಇದನ್ನೂ ಓದಿ: Mylara Lingeshwara Prediction ಚಿಕ್ಕಮಗಳೂರಿನಲ್ಲೊಂದು ಮೈಲಾರಲಿಂಗ ಕಾರ್ಣಿಕ – ದೈವ ನುಡಿ ಕೇಳಿ ಅಚ್ಚರಿಗೊಂಡ ಜನ !!