Mailarlingeshwar prediction: ಚಿಕ್ಕಮಗಳೂರಿನಲ್ಲೊಂದು ಮೈಲಾರಲಿಂಗ ಕಾರ್ಣಿಕ – ದೈವ ನುಡಿ ಕೇಳಿ ಅಚ್ಚರಿಗೊಂಡ ಜನ !!

Karnataka news chikmagaluru mailarlingeshwar swamy karnika prediction latest news

Mailarlingeshwar prediction : ಚಿಕ್ಕಮಗಳೂರು(Chikkamagaluru) ಜಿಲ್ಲೆ ಕಡೂರು ತಾಲೂಕಿನ ಬೀರೂರಿನ ಸ್ವರಸ್ವತಿಪುರಣನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿಯ(Mailarlingeshwar prediction ) ಕಾರ್ಣಿಕವನ್ನು ಗೊರವಯ್ಯಾ ದಶರಥ ಪೂಜಾರ್ ಅವರು ಇಂದು ಮುಂಜಾನೆ 4.45ಕ್ಕೆ ನುಡಿದಿದ್ದಾರೆ.

ಬುಧವಾರ ಮುಂಜಾನೆ 4:45ಕ್ಕೆ ಚಿಕ್ಕಮಗಳೂರಿನಲ್ಲಿ (Chikkamagaluru) ಮೈಲಾರಿಗೇಶ್ವರ (Mailarlingeshwar) ಸ್ವಾಮಿಯ ಕಾರ್ಣಿಕ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದಿದ್ದು, ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನ ಏರಿದ ಗೊರವಯ್ಯಾ ದಶರಥ ಪೂಜಾರರು ಕಾರ್ಣಿಕ ನುಡಿದಿದ್ದಾರೆ. ರಾತ್ರಿಯಿಂದ ಬೆಳಗಿನ ಜಾವದವರೆಗೆ ಹೂವಿನ ಪಲಕ್ಕಿಯೊಂದಿಗೆ ಮೈಲಾರಲಿಂಗ ಸ್ವಾಮಿಯ ಮೆರವಣಿಗೆಯ ನಡುವೆ, “ಇಟ್ಟ ರಾಮನ ಬಾಣ ಹುಸಿಯಿಲ್ಲ. ಸುರರು ಅಸುರರು ಕಾದಾಡಿದರು. ಭಕ್ತ ಕೋಟಿಗೆ ಮಂಗಳವಾಯಿತು. ಶಾಂತಿಯ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದರಬೇಕು ಪರಾಕ್” ಎಂದು ಮೈಲಾರಲಿಂಗಸ್ವಾಮಿಯ ಕಾರ್ಣಿಕವನ್ನು ಗೊರವಯ್ಯಾ ದಶರಥ ಪೂಜಾರ್ ನುಡಿದಿದ್ದಾರೆ . ಸದ್ಯ, ಈ ವಿಚಾರ ಯಾವುದಕ್ಕೆ ಸಂಬಂಧಪಟ್ಟಿದೆ ಎಂಬುದು ಜನ ಸಾಮಾನ್ಯರಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ‘ಮಹಿಳಾ ಗ್ಯಾರಂಟಿ’ಗಳ ವಿರುದ್ಧ ಬಂತು ಹೊಸ ಅಸ್ತ್ರ- ಬಿಜೆಪಿ ಯಿಂದ ಶುರುವಾಯ್ತು ಮಾಸ್ಟರ್ ಗೇಮ್

Leave A Reply

Your email address will not be published.