Mysore: ಅರಮನೆ ಆರವಣದಲ್ಲಿ ಮಾವುತ- ಪೋಲೀಸ್ ನಡುವೆ ಗಲಾಟೆ- ಮಾವುತನ ಜೋರು ಧ್ವನಿ ಕೇಳಿ ಓಡಿ ಬಂದ ‘ಭೀಮ’ ಏನು ಮಾಡ್ತು ಗೊತ್ತಾ?

Mysore news Clash between the police and mahout in mysore palace courtyard latest news

Mysore: ರಾಜ್ಯದ್ಯಂತ ನಾಡಹಬ್ಬದ ದಸರಾ ಕಳೆಗಟ್ಟಿದೆ. ಮೈಸೂರು(Mysore) ಅಂತೂ ದೀಪಾಲಂಕಾರಗಳಿಂದ ವಿಜೃಂಭಿಸುತ್ತಿದೆ. ಅರಮನೆ ಸ್ವರ್ಗದ ನಗರಿಯಂತೆ ಕಾಣುತ್ತಿದೆ. ಆನೆಗಳಲೆಲ್ಲಾ ಸಿಂಗಾರಗೊಂಡು ಅಂಬಾರಿಯನ್ನು ಹೊರಲು, ಮೆರವಣಿಗೆ ಹೊರಡಲು ಸಜ್ಜಾಗಿ ನಿಂತಿವೆ. ಈ ನಡುವೆ ಅರಮನೆ ಆವರಣದಲ್ಲಿ ಪೋಲೀಸ್ ಹಾಗೂ ಮಾವುತನ ನಡುವೆ ಜಗಳ ಶುರುವಾಗಿದೆ. ಈ ವೇಳೆ ಮಾವುತನ ಧ್ವನಿ ಕೇಳಿದ ಆನೆ ಮಾಡಿದ್ದನ್ನು ನೋಡಿದ್ರೆ ನೀವೇ ಅಚ್ಚರಿ ಪಡ್ತೀರಾ !!

ಹೌದು, ಅರಮನೆ ಆವರಣದಲ್ಲಿ ಪೊಲೀಸ್ ಹಾಗೂ ಮಾವುತನಿಗೆ ಯಾವುದೋ ಕಾರಣಕ್ಕೆ ಮಾತಿನ ಚಕಮುಕಿ ಬೆಳೆದು ಅದು ಗಲಾಟೆಯಾಗಿ ಏರ್ಪಟ್ಟಿದೆ. ಈ ವೇಳೆ ಪೊಲೀಸ್ ಕಡೆಯವರು ಹಾಗೂ ಮಾವುತನ ಕಡೆಯವರೆಲ್ಲರೂ ಜೋರು ಜೋರಾಗಿ ಮಾತು ಆರಂಭಿಸಿದ್ದಾರೆ. ಆಗ ಮಾವುತನು ಕೂಡ ಅಬ್ಬರಿಸಿದ್ದಾನೆ. ಈ ವೇಳೆ ದೂರದಲ್ಲಿ ಅಲಂಕಾರಗೊಳ್ಳುತ್ತಿದ್ದಂತಹ ಭೀಮ ಆನೆ ತನ್ನ ಮಾವುತನ ಧ್ವನಿಯನ್ನು ಕೇಳುತ್ತಿದ್ದಂತೆ ಘಟನಾ ಸ್ಥಳಕ್ಕೆ ಓಡಿ ಬಂದಿದೆ. ಆನೆ ಬರುತ್ತಿದ್ದಂತೆ ಕೆಲವರು ದೂರ ಸರಿದರು. ಆಗ ಮತ್ತೆ ಪೋಲೀಸ್ ಮಾವುತನ ಜೊತೆ ಜೋರು ಜೋರಾಗಿ ಮಾತನಾಡುತ್ತಿದ್ದಂತೆ ಅನೆ ಪೋಲೀಸ್ ನನ್ನು ಅಟ್ಟಿಸಿಕೊಂಡು ಹೋಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಬಳಿಕ ಅಲ್ಲಿ ನೆರದಿದ್ದಂತಹ ಉಳಿದ ಪೊಲೀಸ್ ಗಳು ಮಾವುತನನ್ನು ಸಮಾಧಾನ ಪಡಿಸಿ, ಆನೆಯ ಮೇಲೆ ಕುಳಿತಿದ್ದಂತಹ ಮತ್ತೊಬ್ಬ ಮಾವುತನಿಗೂ ದಯವಿಟ್ಟು ಆನೆಯನ್ನು ಹಿಂದೆ ತೆಗೆದುಕೋ. ಆನೆಯನ್ನು ಮುಂದೆ ಬಿಡಬೇಡ ಎಂದು ಮನವಿ ಮಾಡಿದ್ದಾರೆ. ಆಗ ಆನೆ ಸಮಾಧಾನಗೊಂಡಿದೆ. ನಂತರ ಮಾವುತರು ಮತ್ತೆ ಪೊಲೀಸರ ವಿರುದ್ಧ ನೀವೇ ಪ್ರತಿ ಬಾರಿ ಈ ರೀತಿ ಗಲಾಟೆ ಮಾಡುತ್ತೀರಿ. ದಸರಾ ನಡೆಯಲು ನಾವೇ ಕಾರಣ. ನಾವಿಲ್ಲದಿದ್ದರೆ ಆನೆಗಳನ್ನು ಪಳಗಿಸುವುದಾಗಲಿ, ಆನೆಗಳನ್ನು ಮುನ್ನಡೆಸುವುದಾಗಲಿ ಸಾಧ್ಯವಿಲ್ಲ. ದಯವಿಟ್ಟು ಈ ರೀತಿ ಮಾಡಬೇಡಿ. ಇಲ್ಲದಿದ್ದರೆ ನೀವೇ ಮುಂದಿನ ವರ್ಷದಿಂದ ದಸರಾವನ್ನು ಮಾಡಿಕೊಂಡು ಹೋಗಿ. ನಮ್ಮಿಂದ ಈ ಗಲಾಟೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದು ಮುಂದಿನ ಕಾರ್ಯಗಳಿಗೆ ಎಲ್ಲರೂ ಅನುವಾಗಿದ್ದಾರೆ.

https://fb.watch/nTjTZep3WE/?mibextid=2Rb1fB

ಇದನ್ನೂ ಓದಿ: PM Kissan yojna: ವಿಜಯದಶಮಿ ದಿನವೇ ರೈತರಿಗೆ ಸಂತಸದ ಸುದ್ದಿ- ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ PM ಕಿಸಾನ್ 15 ನೇ ಕಂತಿನ ಹಣ

Leave A Reply

Your email address will not be published.