Murder Case: ಅಣ್ಣನ ಹೆಂಡತಿಯೊಂದಿಗೆ ತಮ್ಮನ ಸರಸ; ರೆಡ್‌ಹ್ಯಾಂಡಾಗಿ ಹಿಡಿದ ಅಣ್ಣ, ಮುಂದೆ ನಡೆದದ್ದು ಘನಘೋರ ಕೃತ್ಯ!!!

Share the Article

Illicit Relationship: ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದ ದೊಡ್ಡಮಂಕಲಾಳದಲ್ಲಿ ತಮ್ಮನೋರ್ವ ಅಣ್ಣನನ್ನು ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಗಂಗರಾಜು (35)ಎಂಬಾತನೇ ಹತ್ಯೆಯಾದ ವ್ಯಕ್ತಿ. ಈತ ಮಲಗಿದ್ದಾಗ ತಲೆ ಮೇಲೆ ಕಲ್ಲು ಹಾಕಿ ತಮ್ಮ ರವಿ ಮತ್ತು ಅತ್ತಿಗೆ ಭಾಗ್ಯಮ್ಮ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಅಣ್ಣನ ಹೆಂಡತಿ ಜೊತೆ ತಮ್ಮ ರವಿ ಅನೈತಿಕ ಸಂಬಂಧ  ಹೊಂದಿದ್ದ. ಐದು ವರ್ಷಗಳಿಂದ ಇವರಿಬ್ಬರ ಮಧ್ಯೆ ಈ ಅನೈತಿಕ ಸಂಬಂಧ (Illicit Relationship) ಇತ್ತೆನ್ನಲಾಗಿದೆ. ಈ ವಿಷಯ ತಿಳಿದ ಗಂಗರಾಜು ತನ್ನ ಮೂರೂ ಮಕ್ಕಳನ್ನು ಅನಾಥಾಶ್ರಮದಲ್ಲಿ ಬಿಟ್ಟು ಬಂದಿದ್ದ.

ಹದಿನೈದು ದಿನಗಳ ಹಿಂದೆ ಗಂಗರಾಜು ಪತ್ನಿ ಭಾಗ್ಯಮ್ಮ ಮತ್ತು ತಮ್ಮ ರವಿ ಮಧ್ಯೆ ಗಲಾಟೆ ನಡೆದಿತ್ತು. ಈ ಸಮಯದಲ್ಲಿ ಮೂವರೂ ಹೊಡೆದಾಡಿಕೊಂಡಿದ್ದು, ಬಳಿಕ ಸಿಟ್ಟಿಗೆದ್ದ ರವಿ ಸೋಮವಾರ ರಾತ್ರಿ ತನ್ನ ಅಣ್ಣ ಗಂಗರಾಜು ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.

ಘಟನೆಯ ನಂತರ ಸ್ಥಲಕ್ಕೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

 

Leave A Reply