Latest News: ಕಾರ್ಕಳದ ಧರ್ಮ ಸಂರಕ್ಷಣಾ ಸಭೆ ಬಗ್ಗೆ ತೀವ್ರ ಬೇಸರಪಟ್ಟ ವಜ್ರದೇಹಿ ಸ್ವಾಮೀಜಿ; ಅ. 29ರ ಯಾತ್ರೆಗೆ ನಾಯಕರೇ ಸಿಗ್ತಿಲ್ಲ!
Latest News Vajradehi Swamiji was very upset about Karkala's religious protection meeting
ಇತ್ತೀಚೆಗೆ ಸೌಜನ್ಯ ಹೋರಾಟವನ್ನು ಹತ್ತಿಕ್ಕಲು ನಡೆಯುತ್ತಿದೆ ಎನ್ನಲಾಗಿರುವ ಧರ್ಮ ಸಂರಕ್ಷಣೆ ಸಭೆ ಕಾರ್ಕಳದಲ್ಲಿ ನಡೆದಿತ್ತು. ಅಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ವಾಮೀಜಿಗಳು ಮತ್ತು ಮತ್ತಿತರ ವಿದ್ವಾಂಸರುಗಳು ಭಾಗವಹಿಸಿದ್ದರು. ಜೊತೆಗೆ, ಧರ್ಮ ಸಂರಕ್ಷಣಾ ಸಭೆಯ ಮುಂದಾಳತ್ವ ವಹಿಸಿರುವ ಪವರ್ ಟಿವಿ ರಾಕೇಶ್ ಶೆಟ್ಟಿ ಮತ್ತು ವಸಂತ ಗಿಳಿಯಾರ್ ವೇದಿಕೆಯಲ್ಲಿದ್ದರು. ಸಂತಸ್ಥ ಹುಡುಗಿಯ ತಾಯಿ ಮಗಳ ಸಾವಿಗೆ ನ್ಯಾಯ ಕೇಳುವ ಸೆರಗೊಡ್ಡಿ ಬೇಡುವ ಪ್ರಕ್ರಿಯೆಯನ್ನು ಅಸಹ್ಯಕ್ಕೆ ಹೋಲಿಸಿದ ಮತ್ತು ಮತ್ತೊಬ್ಬ ಹೋರಾಟಗಾರ್ತಿಯನ್ನು ‘ಕಾಮಾಟಿಪುರ ‘ ವ್ಯಭಿಚಾರಕ್ಕೆ ಹೋಲಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಇದೀಗ ಮೇಜರ್ ಅಪ್ಡೇಟ್ ಬಂದಿದೆ. ಮುಂದಿನ 29 ನೆ ತಾರೀಕು ಉಜಿರೆಯಿಂದ ಧರ್ಮಸ್ಥಳಕ್ಕೆ ಸಾಗುವ ಯಾತ್ರೆಗೆ ಸಜ್ಜನರು ಹಿಂದೇಟು ಹಾಕುತ್ತಿರುವ ಸುದ್ದಿ ಬಂದಿದೆ. ಜತೆಗೆ ಪವರ್ ಟಿವಿಯ ಎಂಡಿ ರಾಕೇಶ್ ಶೆಟ್ಟಿಗೆ ಪ್ರವೇಶ ನಿರಾಕರಿಸಲಾಗಿದೆ ಎನ್ನುವ ಮಹತ್ತರ ಮಾಹಿತಿ ಲಭ್ಯವಾಗಿದೆ. ಅದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಮೊನ್ನೆ ಸ್ತ್ರೀ ಒಬ್ಬಳಿಗೆ, ಅದರಲ್ಲೂ ಸಂತ್ರಸ್ತ ಅಮ್ಮ ಕುಸುಮಾವತಿಯನ್ನು ಯಕ್ಷಗಾನ ಕಲಾವಿದ ಅಶೋಕ್ ಭಟ್ ತೀರಾ ನಿಕೃಷ್ಟ ಮಟ್ಟಕ್ಕೆ ಇಳಿದು ಟೀಕಿಸಿದ್ದರು. ನೊಂದ ಮಹಿಳೆ ಸೆರಗು ಒಡ್ಡಿ ಕೇಳುವ ವಿಧಾನಕ್ಕೆ ಅಶ್ಲೀಲ ರೂಪ ನೀಡಿದ್ದರು. ನಂತರ ಈ ಹಿರಿಯರಿಗೆ ಸೋಶಿಯಲ್ ಮೀಡಿಯಾ ಮಂದಿ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಅಲ್ಲದೆ ಸರ್ವ ತ್ಯಾಗ ಪರಿತ್ಯಾಗಿ ಸ್ವಾಮೀಜಿಗಳು ಅಂದು ಸಭೆಯಲ್ಲಿದ್ದು ಪವರ್ ಟಿವಿ ರಾಕೇಶ್ ಶೆಟ್ಟಿ, ಅಶೋಕ್ ಭಟ್ ಹೇಳಿದ ಕೀಳು ಮಾತನ್ನು ಯಾರೂ ಖಂಡಿಸದ ಬಗ್ಗೆ ಆಕ್ರೋಶ ಕೇಳಿಬರುತ್ತಿದೆ. ಇದೀಗ ಅಂದು ವಜ್ರದೇಹಿ ಸ್ವಾಮೀಜಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ನಮ್ಮಿಂದ ತಪ್ಪಾಯ್ತು ಅಂತ ವಜ್ರದೇಹಿ ಸ್ವಾಮೀಜಿ ಹೇಳಿದ್ದಾರೆ. ಸ್ವಲ್ಪ ತಡವಾಗಿ ಆದರೂ, ವಜ್ರದೇಹಿ ಸ್ವಾಮೀಜಿಗಳು ನೇರವಾಗಿ ತಪ್ಪು ಒಪ್ಪಿಕೊಂಡಿದ್ದಾರೆ.
“ಧರ್ಮ ಸಂರಕ್ಷಣೆ ಹೆಸರಿನಲ್ಲಿ ರಾಕೇಶ್ ಶೆಟ್ಟಿ ಹೇಳಿದ್ದು ತಪ್ಪು. ಮೊದಲೇ ನಾನು ಒಳ್ಳೆಯದಾಗಿ ಮಾತನಾಡಬೇಕು ಅಂತ ಹೇಳಿದ್ದೆ. ಬೇರೆ ಏನೂ ಮಾತಾಡಬಾರದು, ಹಾಗೆ ಮಾತಾಡೋದಿದ್ರೆ ಬೇರೆ ವೇದಿಕೆಯಲ್ಲಿ ಮಾತಾಡಿ ಅಂದಿದ್ದೆ. ಆದರೆ ಆದದ್ದೇ ಬೇರೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಧರ್ಮ ಸಂರಕ್ಷಣೆ ಹೆಸರಿನಲ್ಲಿ ಪ್ರಾಯೋಜಿತ ಪ್ರತಿಭಟನೆ ಸಭೆಯಲ್ಲಿ ತಾನು ಭಾಗವಹಿಸಿದ್ದು ತಪ್ಪು ಅಂತ ಅವರು ಒಪ್ಪಿಕೊಂಡ ಹಾಗಾಗಿದೆ. ಪವರ್ ಟಿವಿ ರಾಕೇಶ್ ಶೆಟ್ಟಿಯಾಗಲೀ ವಸಂತ ಗಿಳಿಯಾರ್ ಆಗಲಿ ಯಾವುದೇ ಧಾರ್ಮಿಕ ಸಂಘಟನೆಗಳಲ್ಲಿ ಈ ತನಕ ಭಾಗವಹಿಸಿದವರು. ಏಕಾಏಕಿ ಈ ಇಬ್ಬರು ವ್ಯಕ್ತಿಗಳು ಧರ್ಮ ಸಂರಕ್ಷಣೆ ಎಂಬ ಹೆಸರಿನಲ್ಲಿ ಸಭೆ ಆಯೋಜಿಸುವ ಉದ್ದೇಶ ಧರ್ಮ ಸಂರಕ್ಷಣೆ ಅಲ್ಲ, ಅದು ವ್ಯಕ್ತಿ ಸಂರಕ್ಷಣೆ, ಅದು ಅತ್ಯಾಚಾರಿಗಳ ರಕ್ಷಣೆ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಮುಂಬರುವ ಆದಿತ್ಯವಾರ, ಅಕ್ಟೋಬರ್ 29 ರಂದು ಉಜಿರೆಯಿಂದ ಧರ್ಮಸ್ಥಳವರೆಗೆ ನಡೆಯಲಿರುವ ಧರ್ಮ ಸಂರಕ್ಷಣಾ ಯಾತ್ರೆಗೆ ಒಳ್ಳೆಯ ಹೆಸರಿರುವ ಸಜ್ಜನ ನಾಯಕರುಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಸ್ವಾಮೀಜಿಗಳು ಸುತಾರಾಮ್ ಬರಲು ಕೇಳುತ್ತಿಲ್ಲ. ಯಾಕೆಂದರೆ ಧರ್ಮ ಸಂರಕ್ಷಣೆ, ಧರ್ಮ ಸಂರಕ್ಷಣೆ ಯಾತ್ರೆ ಮುಂತಾದ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಯೋಚಿತ ಕಾರ್ಯಕ್ರಮಕ್ಕೆ ಹೋದ ಪ್ರತಿಯೊಬ್ಬರ ಇಮೇಜ್ ಕೂಡಾ ಭಸ್ಮ ಆಗಿ ಹೋಗುತ್ತಿದೆ. ಅಲೆ ವಿರುದ್ಧ ದಿಕ್ಕಿನಲ್ಲಿದೆ. ವಿನಾಕಾರಣ ಕೆಲವರು ಯಾರದೋ ಮಾತಿಗೆ ಅಥವಾ ಇನ್ಯಾವುದೋ ಆಮಿಷಕ್ಕೆ ಕಟ್ಟುಬಿದ್ದು ತಮ್ಮ ಇಮೇಜ್’ನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕವಾಗಿ ಅಧಃಪತನ ಸೇರಿದವರು ಮಾತ್ರ ಅಲ್ಲಿ ಸೇರುತ್ತಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ.
ಈಗಾಗಲೇ ಸ್ವಾಮೀಜಿಗಳು ಇಂತಹಾ ಸಮಾರಂಭಕ್ಕೆ ಹೋಗಿ ತಾವು ‘ಧರ್ಮದ್ರೋಹಿ’ ಎಂದು ಅನ್ನಿಸಿಕೊಳ್ಳಲು ತಯಾರಿಲ್ಲ. ಸಾರ್ವಜನಿಕರ ಆಕ್ರೋಶ ಆ ಮಟ್ಟಕ್ಕಿದೆ. ಹಾಗಾಗಿ, ಯಾರೇ ಎಷ್ಟೇ ದುಡ್ಡು ಖರ್ಚು ಮಾಡಲಿ, ಪ್ರತಿ ತಂತ್ರ ರೂಪಿಸಲಿ, ಸಮಾರಂಭ ಏರ್ಪಡಿಸಲಿ ಸತ್ಯ ಅನ್ನುವುದು ಇದೀಗ ಇಡೀ ಕರ್ನಾಟಕಕ್ಕೆ ಗೊತ್ತಾಗಿದೆ. ಕಾಮಂಧರು ಯಾರು ಅನ್ನೋದು ಜಾಹೀರು ಆದ ಕಾರಣ ಯಾರೂ ಮುಂದೆ ಬರ್ತಿಲ್ಲ. ವಜ್ರದೇಹಿ ಸ್ವಾಮೀಜಿ ಹೇಳಿದ ಪ್ರಕಾರ, ಈ ದಸರಾ ಮುಗಿಯುವುದರ ಒಳಗೆ ಸೌಜನ್ಯ ಹೋರಾಟದ ವಿಷಯದಲ್ಲಿ ಒಂದಷ್ಟು ಒಳ್ಳೆಯ ಬೆಳವಣಿಗೆಗಳು ನಡೆಯಲಿದೆಯಂತೆ. ಹಾಗಾಗಿ ನಾಳಿನ ದಿನ ಉಜಿರೆಯಿಂದ ಹೊರಡುವ ಧರ್ಮಸ್ಥಳದ ಕಡೆಗಿನ ಪಾದಯಾತ್ರೆ ಗಮನ ಸೆಳೆದಿದೆ. ಜನ ಸಾಮಾನ್ಯರು ತಮ್ಮ ರಾಡಾರ್ ದೃಷ್ಟಿ ಫೋಕಸ್ ಮಾಡಿಕೊಂಡು ಕಾಯುತ್ತಿದ್ದಾರೆ. ಮೊನ್ನೆ ಕಾರ್ಕಳದಲ್ಲಿ ಇಮೇಜ್ ಕಳಕೊಂಡವರ ಸಾಲಿಗೆ ಸೇರಲು ಇನ್ನೂ ಕೆಲವರು ನೂಕು ನುಗ್ಗಲು ನಡೆಸಿದರೆ, ಯಾರೂ ಏನೂ ಮಾಡಲು ಆಗಲ್ಲ. ಎಚ್ಚರಿಸುವುದಷ್ಟೇ ನಮ್ಮ ಕೆಲಸ.