Home Loan Subsidy: ಮನೆ ಖರೀದಿ ಆಸೆಯಲ್ಲಿರೋಗೆ ಕೇಂದ್ರದಿಂದ ಬಂತು ಭರ್ಜರಿ ಸಬ್ಸಿಡಿ ಸೌಲಭ್ಯ- ಮುಗಿಬಿದ್ದ ಜನ

Government subsidy scheme for savings on Home loan during festival season

Home Loan Subsidy: ಹಬ್ಬದ ಸಂಭ್ರಮದಲ್ಲಿ ನೀವೇನಾದರೂ ಮನೆ ಖರೀದಿ ಮಾಡುವ ಯೋಜನೆ ಹಾಕಿದ್ದರೆ, ಇಲ್ಲಿದೆ ನೋಡಿ ನಿಮಗೆ ಉಪಯುಕ್ತ ಮಾಹಿತಿ. ಕೇಂದ್ರ ಸರ್ಕಾರ (Central Government)ಹಬ್ಬದ ಸೀಸನ್‌ನಲ್ಲಿ ಗೃಹ ಸಾಲದ (Home Loan)ಮೇಲೆ ಸಹಾಯಧನ ಒದಗಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಹೋಮ್ ಲೋನ್( Home Loan Subsidy) ಮೂಲಕ ನಿಮಗೆ ಅನ್ವಯವಾಗುವ ಯೋಜನೆಯಡಿ ಧನಸಹಾಯ ಪಡೆದುಕೊಳ್ಳಬಹುದು.

# ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ
ಪ್ರಧಾನ ಮಂತ್ರಿ ಆವಾಸ್ (PMAY) ಯೋಜನೆಯ ಒಂದು ಭಾಗವಾಗಿದ್ದು, ಆರ್ಥಿಕ ದುಬರ್ಲ ವರ್ಗ (EWS), ಕಡಿಮೆ ಆದಾಯದ ವರ್ಗ (LIG) ಮತ್ತು ಮಧ್ಯಮ ಆದಾಯದ ವರ್ಗ (MIG) ಹೀಗೆ ಆದಾಯದ ಮಟ್ಟದ ಆಧಾರದ ಮೇರೆಗೆ ಗೃಹ ಸಾಲಗಳ ಮೇಲೆ ಬಡ್ಡಿ ಸಬ್ಸಿಡಿ ನೀಡಲಾಗುತ್ತದೆ.ಸಬ್ಸಿಡಿ ಮೊತ್ತವು ಸಾಲದ ಮೊತ್ತದ ಶೇ.6.5ರವರೆಗೆ ಇರಲಿದ್ದು, ಗರಿಷ್ಠ 20 ವರ್ಷಗಳವರೆಗೆ ದೊರೆಯಲಿದೆ.

# ಪ್ರಧಾನ ಮಂತ್ರಿ ಆವಾಸ್ ಯೋಜನೆ
ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಗೃಹ ಸಾಲ ಪಡೆಯಲು ಬಯಸುವ ಆರ್ಥಿಕವಾಗಿ ದುರ್ಬಲ ವರ್ಗ, ಕಡಿಮೆ ಆದಾಯದ ಹೊಂದಿರುವವರು ಮತ್ತು ಮಧ್ಯಮ ಆದಾಯದ ಜನರಿಗೆ ಬಡ್ಡಿ ಸಬ್ಸಿಡಿ ನೀಡಲಾಗುತ್ತದೆ. ನಿಮ್ಮ ಆದಾಯದ ಮಟ್ಟವನ್ನು ಆಧರಿಸಿಕೊಂಡು ಬಡ್ಡಿ ಸಬ್ಸಿಡಿಯನ್ನು ತೀರ್ಮಾನ ಮಾಡಲಾಗುತ್ತದೆ. ಸಾಲದ ಮೊತ್ತದ ಶೇ.6.5 ರವರೆಗೆ ಬಡ್ಡಿ ಸಬ್ಸಿಡಿ ಪಡೆಯಬಹುದಾಗಿದೆ.

# ಸಣ್ಣ ನಗರಗಳಲ್ಲಿ ವಸತಿ ನಿರ್ಮಾಣಕ್ಕೆ ಬಡ್ಡಿ ಸಹಾಯಧನ ಯೋಜನೆ
ಭಾರತ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಸಣ್ಣ ನಗರಗಳಲ್ಲಿ ವಸತಿ ನಿರ್ಮಾಣಕ್ಕೆ 600 ಶತಕೋಟಿ (Rs 7.2 ಶತಕೋಟಿ) ಸಬ್ಸಿಡಿ ಸಾಲ ನೀಡಲು ಅವಕಾಶ ಕಲ್ಪಿಸುತ್ತದೆ. ಈ ಯೋಜನೆಯಡಿ, 9 ಲಕ್ಷದವರೆಗಿನ ಸಾಲದ ಮೊತ್ತದ ಮೇಲೆ ಶೇ.3 ರಿಂದ ಶೇ.6.5 ರಷ್ಟು ಸಬ್ಸಿಡಿ ಒದಗಿಸಲಾಗುತ್ತದೆ.

# ಸ್ಟಾಂಪ್ ಮತ್ತು ನೋಂದಣಿ ಶುಲ್ಕಗಳಲ್ಲಿ ವಿನಾಯಿತಿ
ರಾಜ್ಯ ಸರ್ಕಾರಗಳು ಹಬ್ಬದ ಸೀಸನ್‌ನಲ್ಲಿ ಸ್ಟಾಂಪ್ ಮತ್ತು ನೋಂದಣಿ ಶುಲ್ಕದಲ್ಲಿ ವಿನಾಯಿತಿ ಪಡೆಯಬಹುದು. ಈಗಾಗಲೇ ನಿರ್ಮಾಣ ಮಾಡಿರುವ ಆಸ್ತಿಗಳ ಖರೀದಿ ಮೇಲಿನ ಜಿಎಸ್‌ಟಿಯಲ್ಲಿ ಸರ್ಕಾರ ವಿನಾಯಿತಿ ನೀಡುತ್ತದೆ. ಕೈಗೆಟುಕುವ ಬೆಲೆಯ ವಸತಿಗಳ ಮೇಳೆ ಜಿಎಸ್‌ಟಿಯನ್ನು ಶೇಕಡಾ 12 ರಿಂದ ಶೇಕಡಾ 5 ಕ್ಕೆ ಮತ್ತು ಇತರ ಆಸ್ತಿಗಳಿಗೆ ಶೇಕಡಾ 18 ರಿಂದ ಶೇ.5 ಕ್ಕೆ ಇಳಿಸಲಾಗಿದೆ.

 

ಇದನ್ನು ಓದಿ: ಅಯ್ಯೋ, ಮಟ ಮಟ ಪ್ರತ್ಯಕ್ಷವಾದ ಪ್ರೇತ – ಪುತ್ತೂರಿನ ಜನ ಫುಲ್ ಕಂಗಾಲು ! ಏನಿದು ವಿಷಯ ?!

Leave A Reply

Your email address will not be published.