Bigg Boss Season 10: ಬಿಗ್‌ಬಾಸ್‌ ಮನೆಯಲ್ಲೇ ವರ್ತೂರು ಸಂತೋಷ್‌ ಅರೆಸ್ಟ್‌! ರಾತ್ರೋರಾತ್ರಿ ಪೊಲೀಸರಿಂದ ಅರೆಸ್ಟ್‌, ಯಾಕಾಗಿ???

BBK Season 10: ಕನ್ನಡ ಬಿಗ್‌ಬಾಸ್‌ ನ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಗ್‌ಬಾಸ್‌ ಮನೆಯೊಳಗೆ ಪೊಲೀಸರು ಬಂದಿದ್ದು, ವರ್ತೂರ್‌ ಸಂತೋಷ್‌ (Varthur Santhosh) ಅವರನ್ನು ಭಾನುವಾರ (ಅಕ್ಟೋಬರ್‌ 22) ತಡರಾತ್ರಿ ಅರೆಸ್ಟ್‌ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ವಿಚಾರ ಚರ್ಚೆಯಲ್ಲಿದ್ದು, ವಾಹಿನಿ ಕಡೆಯಿಂದ ಯಾವುದೇ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ. ಅಷ್ಟಕ್ಕೂ ವರ್ತೂರು ಮಾಡಿದ ತಪ್ಪೇನು? ಇಲ್ಲಿದೆ ಕಾರಣ.

ವರ್ತೂರು ಸಂತೋಷ್‌ (Varthur Santhosh) ಅವರು ತಮ್ಮ ಕುತ್ತಿಗೆಯಲ್ಲಿ ಒಂದು ಚೈನ್‌ ಹಾಕಿದ್ದು, ಇದರಲ್ಲಿ ಹುಲಿಯ ಉಗುರು ಕಾಣಿಸಿದೆ. ಈ ಕಾರಣದಿಂದ ಅರೆಸ್ಟ್‌ ಮಾಡಲಾಗಿದೆ ಎನ್ನಲಾಗುತ್ತಿದೆ. ಅಧಿಕೃತ ಮಾಹಿತಿ ಇನ್ನೂ ಹೊರ ಬಂದಿಲ್ಲ, ಇನ್ನಷ್ಟೇ ತಿಳಿದು ಬರಬೇಕಿದೆ. ಬಿಗ್‌ಬಾಸ್‌ (BBK Season 10) ಮನೆಗೆ ಬರುವ ಸಂದರ್ಭದಲ್ಲಿ ವರ್ತೂರು ಅವರ ಕುತ್ತಿಗೆಯಲ್ಲಿ ಒಂದು ಬಂಗಾರದ ಚೈನ್‌ ಇದ್ದಿದ್ದು, ಇದರಲ್ಲಿ ಹುಲಿಯ ಉಗುರು ಕಾಣಿಸಿಕೊಂಡಿದೆ. ಹಾಗಾಗಿ ಅರೆಸ್ಟ್‌ ಮಾಡಲಾಗುತ್ತಿದೆ ಎನ್ನಲಾಗಿದೆ.

ವರ್ತೂರು ಸಂತೋಷ್‌ ಕತ್ತಿನಲ್ಲಿ ಉಗುರಿನ ಪೆಂಡೆಂಟ್‌ ಇರುವ ಚೈನ್‌ ಹಾಕಿದ್ದರಿಂದ ವನ್ಯಜೀವಿ ಕಾಯಿದೆ ಉಲ್ಲಂಘನೆ ಮಾಡಿದ್ದರಿಂದ ಅವರು ಬಂಧನಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ರಾಮೋಹಳ್ಳಿ ಅರಣ್ಯಾಧಿಕಾರಿಗಳು ಕೇಸು ದಾಖಲಿಸಿ ಭಾನುವಾರ ರಾತ್ರಿ ರಾಜರಾಜೇಶ್ವರಿ ನಗರದ ಬಳಿ ಇರುವ ಬಿಗ್‌ಬಾಸ್‌ ಮನೆಗೆ ಭೇಟಿ ವರ್ತೂರು ಸಂತೋಷ್‌ ಅವರನ್ನು ಬಂಧನ ಮಾಡಲಾಗಿದೆ. ಹುಲಿಯ ಉಗುರಿನ ಲಾಕೆಟ್‌ ಧರಿಸಿದ್ದನ್ನು ಗಮನಿಸಿ ಎಫ್‌ಐಆರ್‌ ಮಾಡಲಾಗಿದೆ. ಈ ಕಾರಣದಿಂದ ಬಂಧಿಸಲಾಗಿದೆ ಎನ್ನಲಾಗಿದೆ.

ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಬಿಗ್‌ಬಾಸ್‌ ವರ್ತೂರು ಸಂತೋಷ್‌ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಉಗುರಿನ ಮೂಲವನ್ನು ಅರಣ್ಯಾಧಿಕಾರಿಗಳು ಹುಡುಕುತ್ತಿದ್ದು, ಯಾರು ಕೊಟ್ಟದ್ದು, ಎಲ್ಲಿ ಸಿಕ್ಕಿತು ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave A Reply

Your email address will not be published.