Realince Jio: ಜಿಯೋ ಗ್ರಾಹಕರಿಗೆ ಬೊಂಬಾಟ್ ಆಫರ್- ಇದೊಂದು ರಿಚಾರ್ಜ್ ಮಾಡ್ಸಿ, ‘ ಅಮೆಜಾನ್ ಪ್ರೈಮ್’ ಅನ್ನು ಫ್ರೀಯಾಗಿ ಪಡೆದು ಆನಂದಿಸಿ

Technology news jio new annual recharge plan with Amazon prime subscription

Jio annual recharge Plan: ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) OTT ಪ್ರಿಯರಿಗಾಗಿ ಈಗಾಗಲೇ ಅನೇಕ ಉತ್ತಮ ಯೋಜನೆಗಳನ್ನು ಪರಿಚಯಿಸಿದೆ. ಇದೀಗ, ರಿಲಯನ್ಸ್ ಜಿಯೋ 3227 ರೂ.ಹೊಸ ಯೋಜನೆ ಪರಿಚಯಿಸಿದ್ದು, ಈ ಯೋಜನೆ ಮೂಲಕ ಒಂದು ವರ್ಷದ ವರೆಗೆ ಅಮೆಜಾನ್ ಪ್ರೈಮ್(Jio Annual recharge Plan)ವಿಡಿಯೋದ ಪ್ರಯೋಜನವನ್ನು ಪಡೆಯಬಹುದು.

ಜಿಯೋ 3227 ರೂ. ಯೋಜನೆ ವಿವರಗಳು
ರಿಲಯನ್ಸ್ ಜಿಯೋದ ಈ ಪ್ರಿಪೇಯ್ಡ್ ಪ್ಲಾನ್ ಮೂಲಕ 365 ದಿನಗಳ ದೀರ್ಘಾವಧಿಯ ವ್ಯಾಲಿಡಿಟಿ ಸೇವೆ ಪಡೆಯಬಹುದು. 365 ದಿನಗಳ ವ್ಯಾಲಿಡಿಟಿಯ ಅನುಸಾರ ಪ್ರತಿದಿನ 2 GB ಹೈ-ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯಬಹುದು. ಇದರ ಜೊತೆಗೆ, ಸ್ಥಳೀಯ ಮತ್ತು STD ಕರೆ ಮಾಡುವ ಸೌಲಭ್ಯದ ಜೊತೆಗೆ ದಿನಕ್ಕೆ 100 SMS ಸೌಲಭ್ಯ ದೊರೆಯಲಿದೆ. ನಿಮ್ಮ ಪ್ರದೇಶದಲ್ಲಿ ಜಿಯೋ 5G ಸೇವೆಯನ್ನು ಹೊಂದಿದ್ದು,ನಿಮ್ಮದು 5G ಫೋನ್ ಆಗಿದ್ದಲ್ಲಿ ಈ ಯೋಜನೆ ಮೂಲಕ ನೀವು ಅನಿಯಮಿತ ಟ್ರೂ 5G ಡೇಟಾ ಸೌಲಭ್ಯ ದೊರೆಯಲಿದೆ. ಈ 3227 ರೂ. ಯೋಜನೆಯ ಮೂಲಕ, ರಿಲಯನ್ಸ್ ಜಿಯೋ 1 ವರ್ಷಕ್ಕೆ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್, ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಕ್ಲೌಟ್ಗೆ ಉಚಿತ ಪ್ರವೇಶ ಪಡೆಯಬಹುದು

ಇದನ್ನೂ ಓದಿ: Grama Panchayath Jobs: ಗ್ರಾಮ ಪಂಚಾಯತ್‌ ನೇಮಕಾತಿ; ಭರ್ಜರಿ ಉದ್ಯೋಗ, ಯಾವುದೇ ಪರೀಕ್ಷೆ ಇಲ್ಲ!!! ಈ ಕೂಡಲೇ ಅರ್ಜಿ ಸಲ್ಲಿಸಿ!!

Leave A Reply

Your email address will not be published.