Dubai Lottery Winner: ಅಬ್ಬಬ್ಬಾ… ಇನ್ಮುಂದೆ 25 ವರ್ಷ ಪ್ರತೀ ತಿಂಗಳೂ ಈತನ ಕೈ ಸೇರುತ್ತೆ ಲಕ್ಷ ಲಕ್ಷ ಹಣ !! ಎಂತಾ ಲಾಟ್ರಿ ಮಾರ್ರೆ ಇದು !!

Tamilnadu man win Dubai lottery ticket of 5.5 lakh per month for 25 years

Dubai Lottery Winner: ಅದೃಷ್ಟ ಇದ್ದರೆ ಎಂತಹ ವ್ಯಕ್ತಿಯಾದರೂ ಯಶಸ್ವಿ ಗಳಿಸುತ್ತಾನೆ. ಕೆಲವರು ಕಷ್ಟ ಪಟ್ಟು ಹಣ ಸಂಪಾದನೆ ಮಾಡಿದರೆ, ಕೆಲವರು ಅದೃಷ್ಟದಿಂದ ಹಣ ಸಂಪಾದನೆ ಮಾಡುತ್ತಾರೆ ಅನ್ನೋದು ಕೂಡ ಅಷ್ಟೇ ಸತ್ಯ. ಹೌದು, ತಮಿಳುನಾಡು ಮೂಲದ ವ್ಯಕ್ತಿಗೆ ಭರ್ಜರಿಯಾಗಿ ದುಬೈ ಲಾಟರಿ (Dubai Lottery Winner)ಹೊಡೆದಿದ್ದು, ಅವರ ಜೀವನವೇ ಬದಲಾಗಿದೆ.

ಮಗೇಶ್‌ ಕುಮಾರ್‌ ನಟರಾಜನ್‌ ಎಂಬವರಿಗೆ ಶುಕ್ರವಾರಲಾಟರಿ ಹೊಡೆದಿದ್ದು, ಅಷ್ಟಕ್ಕೂ ಈ ಲಾಟರಿ ಮೊತ್ತ ಸಣ್ಣದೇನಲ್ಲ. ಮಾಹಿತಿ ಪ್ರಕಾರ, 49 ವರ್ಷದ ನಟರಾಜನ್ ಎಮಿರೇಟ್ಸ್ ಡ್ರಾದ FAST5 ಗ್ರ್ಯಾಂಡ್ ಪ್ರಶಸ್ತಿಯನ್ನು (FAST5 Emirates Grand Prize) ಗೆದ್ದಿದ್ದಾರೆ. ಈ ಬಂಪರ್ ಗೆಲುವಿನೊಂದಿಗೆ ಅವರು ಮುಂದಿನ 25 ವರ್ಷಗಳವರೆಗೆ ಪ್ರತಿ ತಿಂಗಳು 25 ಸಾವಿರ ದಿರ್ಹಮ್, ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಸುಮಾರು 5.6 ಲಕ್ಷ ರೂಪಾಯಿಯನ್ನು ಪಡೆಯಲಿದ್ದಾರೆ.

ಮೂಲತಃ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (UAE) ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ನಟರಾಜನ್ ತಮಿಳುನಾಡಿನ ಅಂಬೂರ್ ನಿವಾಸಿಯಾಗಿದ್ದು, 2019ರಿಂದ ಸೌದಿ ಅರೇಬಿಯಾದಲ್ಲಿ ನಾಲ್ಕು ವರ್ಷಗಳಿಂದ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಲಾಟರಿಯಲ್ಲಿ ಜಾಕ್‌ಪಾಟ್ ಗೆದ್ದ ನಂತರ ಮಾತನಾಡಿದ ನಟರಾಜನ್, “ನಾನು ನನ್ನ ಜೀವನದಲ್ಲಿ ಮತ್ತು ನನ್ನ ವಿದ್ಯಾಭ್ಯಾಸದ ಸಮಯದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ನನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಲು, ಈ ಹಂತಕ್ಕೆ ತಲುಪಲು ಸಮಾಜದ ಅನೇಕ ಜನರು ನನಗೆ ಸಹಾಯ ಮಾಡಿದ್ದಾರೆ. ಸಮಾಜಕ್ಕೆ ಮರಳಿ ಕೊಡುವ ಸಮಯ ಇದು. ಸಮಾಜಕ್ಕೆ ನನ್ನ ಕೊಡುಗೆಯನ್ನು ಅಗತ್ಯವಿರುವ ಜನರಿಗೆ ತಲುಪಿಸುತ್ತೇನೆ” ಎಂದಿದ್ದಾರೆ. ಈ ವರೆಗೂ ಯುಎಇಯಲ್ಲಿನವರಿಗೆ ಮಾತ್ರ ಜಾಕ್‌ಪಾಟ್‌ ಹೊಡೆದ ಉದಾಹರಣೆಗಳಿದ್ದವು. ಇದೀಗ ಮೊದಲ ಸಲ ತಮಿಳುನಾಡು ಮೂಲದ ಮಗೇಶ್‌ಕುಮಾರ್‌ಗೆ ಲಾಟರಿ ಒಲಿದಿದೆ.

ಇದನ್ನೂ ಓದಿ: ಪಿಂಚಣಿದಾರರಿಗೆ ಮತ್ತೊಂದು ಗುಡ್ ನ್ಯೂಸ್- ಇನ್ನು ಮನೆ ಬಾಗಿಲಿಗೆ ಬರುತ್ತೆ ಈ ಪ್ರಮಾಣ ಪತ್ರ

Leave A Reply

Your email address will not be published.