Operation kamala: ‘ಆಪರೇಷನ್ ಹಸ್ತ’ದ ನಡುವೆ ಸದ್ಧಿಲ್ಲದೆ ರೆಡಿಯಾಯ್ತು ನೋಡಿ ‘ಆಪರೇಷನ್ ಕಮಲ’ – ಕಾಂಗ್ರೆಸ್ ನಿಂದ ಬಿಜೆಪಿ ಬರಲು ಈ ನಾಯಕರು ರೆಡಿನಾ ?!
Karnataka political news Minister murugesh nirani talks over operation kamala
Operation kamala: ರಾಜ್ಯದಲ್ಲಿ ಕೆಲವು ದಿನಗಳಿಂದ ಬಹಳಷ್ಟು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಪರಮ ವೈರಿಗಳಾಗಿದಂತಹ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಲು ರೆಡಿಯಾಗಿದೆ. ಅದೇ ರೀತಿ ಕಾಂಗ್ರೆಸ್ ಹಲವು ಶಾಸಕರು, ನಾಯಕರನ್ನು ತನ್ನತ್ತ ಸೆಳೆಯುವಲ್ಲಿ ಬಹಿರಂಗವಾಗಿ ‘ಆಪರೇಷನ್ ಹಸ್ತ’ ನಡೆಸುತ್ತಿದೆ. ಆದರೆ ಈ ನಡುವೆ ಸದ್ದಿಲ್ಲದೆ ಬಿಜೆಪಿಯು ‘ಆಪರೇಷನ್ ಕಮಲವನ್ನು'(Operation kamala)ಶುರು ಹಚ್ಚಿಕೊಂಡಿದ್ದು ಈ ನಾಯಕರೆಲ್ಲರೂ ಬಿಜೆಪಿಗೆ ಗಾಳ ಹಾಕಿದ್ಯಾ ಎಂಬ ಬಹಳ ದೊಡ್ಡ ಪ್ರಶ್ನೆ ಎದುರಾಗಿದೆ.
ಹೌದು, ಸ್ವತಃ ಬಿಜೆಪಿ ನಾಯಕರಾಗಿರುವ ಮುರುಗೇಶ್ ನಿರಾಣಿಯವರು ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದ್ದು, ರಾಜ್ಯದಲ್ಲಿ ಆಪರೇಶನ್ ಹಸ್ತ ಆಗಲ್ಲ, ಆಪರೇಶನ್ ಕಮಲ ಆಗುತ್ತದೆ. ಈ ನಾಯಕರೆಲ್ಲರೂ ಬಿಜೆಪಿ ಬರುತ್ತಾರೆ ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಜೊತೆಗೆ ಕಾಂಗ್ರೆಸ್ಸಿಗರ ಹೇಳಿಕೆ ನೋಡಿದ್ರೆ ಈ ಸರ್ಕಾರ ಯಾವುದೇ ಸಮಯದಲ್ಲಿ ಹೋಗಬಹುದು, ಪಾರ್ಲಿಮೆಂಟ್ ಚುನಾವಣೆ ಒಳಗಾಗಿ ಬಹಳಷ್ಟು ಬದಲಾವಣೆ ಆಗೆ ಆಗುತ್ತೆ ಎಂದು ನಿರಾಣಿ ಹೇಳಿದ್ದಾರೆ.
ಅಲ್ಲದೆ ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ನಡೆಯಲಿದ್ದು, ರಾಜ್ಯದಲ್ಲಿ ಐದು ವರ್ಷ ಸರ್ಕಾರ ಇರಬೇಕು ಎನ್ನುವುದು ಬಿಜೆಪಿ ಇಚ್ಛೆಯಾಗಿದೆ. ಆದರೆ, ಅವರ ಹೇಳಿಕೆಗಳು ಐವರು ಡಿಸಿಎಂ ಅಂತಾರೆ, ಇಬ್ಬರು ಸಿಎಂ ಅಂತಾರೆ, ಹೀಗಾಗಿ ಯಾವುದೇ ಸಮಯದಲ್ಲಿ ಸರ್ಕಾರ ಹೋಗಬಹುದು. ಪಾರ್ಲಿಮೆಂಟ್ ಚುನಾವಣೆಗೂ ಮುನ್ನವೆ ಬಹಳಷ್ಟು ಬದಲಾವಣೆ ಆಗುತ್ತೆ, ಬದಲಾವಣೆ ಕಾಯ್ದು ನೋಡಿ, ಸಮಯ ಬಂದಾಗ ನಾನು ಹೇಳ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Congress Government : ಸಿದ್ದು ಸರ್ಕಾರದ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ – ಯಾರು ಒಳಕ್ಕೆ, ಯಾರು ಹೊರಕ್ಕೆ ?