Pratibha Nandakumar: ಏನೂ ಮಾಡಿದ್ರೂ ಮಕ್ಕಳಾಗುತ್ತಿಲ್ಲ – ಕನ್ನಡದ ಖ್ಯಾತ ಲೇಖಕಿಯಿಂದ ಬಂತು ವಿಶೇಷ ಪರಿಹಾರ

Health news Kannada woman poet Pratibha Nandakumar says about fertility problem in her Facebook post

Share the Article

Pratibha Nandakumar: ಕನ್ನಡದ ಖ್ಯಾತ ಕವಯಿತ್ರಿಯರಲ್ಲಿ ಒಬ್ಬರಾದ ಪ್ರತಿಭಾ ನಂದಕುಮಾರ್‌ ಅವರು ನಮಗೆಲ್ಲರಿಗೂ ಚಿರ ಪರಿಚಿತರು. ಇದೀಗ ಇವರು ʼʼಎಷ್ಟು ಪ್ರಯತ್ನಿಸಿದರೂ ಮಕ್ಕಳಾಗಿಲ್ಲʼʼ ಅಂದುಕೊಂಡು ಬಂದ ಮಹಿಳೆಯೊಬ್ಬರಿಗೆ ಪ್ರತಿಭಾ ನಂದಕುಮಾರ್‌ (Pratibha Nandakumar) ಕೊಟ್ಟ ಪರಿಹಾರ ಎಲ್ಲೆಡೆ ವೈರಲ್ ಆಗಿದೆ.

ಹೌದು, ಪ್ರತಿಭಾ ಫೇಸ್‌ಬುಕ್‌ನಲ್ಲಿ ಬರೆದ ಪೋಸ್ಟ್ ಹೀಗಿತ್ತು. ದೇವಸ್ಥಾನದಲ್ಲಿ ಕೂತಿದ್ದಾಗ ಒಬ್ಬಳು ಬಂದು ನಮಸ್ಕಾರ ಮಾಡಿ ‘ಅಮ್ಮ, ಮಗು ಆಗಲಿ ಅಂತ ಆಶೀರ್ವಾದ ಮಾಡಿ’ (How To Have Kids)ಅಂದ್ಲು. ಮಗು ಇಲ್ಲದೇ ಬಹಳ ಚಿಂತೆಯಲ್ಲಿದ್ದಳು ಅಂತ ಗೊತ್ತಾಗ್ತಾ ಇತ್ತು. ನಾನಂದೆ ‘ಒಂದು ಮಾತು… ಸೆಕ್ಸ್ ಆದ ಮೇಲೆ ತಕ್ಷಣ ಎದ್ದು ಬಚ್ಚಲು ಮನೆಗೆ ಕ್ಲೀನ್ ಮಾಡ್ಕೊಳಕ್ಕೆ ಹೋಗ್ತಿಯಾ?’ ಅಂತ ಕೇಳಿದೆ. ಹೌದು ಅಂದ್ಲು. “ಹಾಗೆ ಮಾಡಬೇಡಾ, ಕಾಲು ಸೇರಿಸಿ ಮಂಡಿ ಮಡಚಿ ಎಡಗಡೆಗೆ ಪಕ್ಕಕ್ಕೆ ತಿರುಗಿ ಫೀಟಸ್ ಪೊಸಿಷನ್‌ನಲ್ಲಿ ಮಲಕ್ಕೋ, ಬೆಳಗ್ಗೆ ಎದ್ದು ಸ್ನಾನ ಮಾಡು” ಸರಿ ಅಂತ ಹೋದಳು. ಅದಾಗಿ ಸುಮಾರು ದಿನ ಕಾಣಲಿಲ್ಲ. ಇವತ್ತು ದೇವಸ್ಥಾನಕ್ಕೆ ಬಂದು ನಮಸ್ಕಾರ ಮಾಡಿ ಐದು ತಿಂಗಳು ಅಂದ್ಲು!!ʼʼ

ಇದನ್ನು ತುಂಬಾ ಮಂದಿ ಅವರ ವಾಲ್‌ನಲ್ಲಿ ತಮಾಷೆಯಾಗಿ ತೆಗೆದುಕೊಂಡು ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನವರು ನಗುವ ಇಮೋಜಿ ಹಾಕಿದ್ದಾರೆ. ಆದರೆ ಪ್ರತಿಭಾ ಅವರು ಇದನ್ನು ಸೀರಿಯಸ್ಸಾಗಿಯೇ ಬರೆದಂತಿದೆ. ಅವರೇನೂ ತಮಾಷೆ ಮಾಡಿದ ಹಾಗಿಲ್ಲ. ಹಾಗಾದರೆ ಅವರು ಬರೆದುದು ಸತ್ಯವಾ? ಸರಿ, ಇದರ ಬಗೆಗೆ ವೈದ್ಯರೇನು ಹೇಳ್ತಾರೆ?

ಒಟ್ಟಿನಲ್ಲಿ ಪ್ರತಿಭಾ ನಂದಕುಮಾರ್‌ ಅವರು ಯಾವ ಆಧಾರದ ಮೇಲೆ ಮೇಲಿನ ಮಾತನ್ನು ಬರೆದರೋ ಗೊತ್ತಿಲ್ಲ. ತಮ್ಮ ಮಾತಿಗೆ ಆಧಾರವಾಗಿ ಅವರು ಯಾವ ವೈಜ್ಞಾನಿಕ ಆಧಾರವನ್ನೂ ಒದಗಿಸಿಲ್ಲ. ಸದ್ಯಕ್ಕೆ ಇದೊಂದು ತಮಾಷೆ ಪೋಸ್ಟ್‌ ಎಂದು ಭಾವಿಸಿ ನಾವು ಸುಮ್ಮನಾಗಬಹುದೇನೋ!

https://www.facebook.com/711452772/posts/pfbid023cAkXLeRWBbWnzPJD7Es9ua6qibqv4Dsq9FrJySknaCckYptX9ysw7KiZ6TV9HSMl/?app=fbl

ಆದರೆ ವೈದ್ಯರ ಪ್ರಕಾರ, ಸಂಭೋಗದ ವೇಳೆಯೇ ಹೆಚ್ಚಿನ ಪ್ರಮಾಣದ ವೀರ್ಯಾಣುಗಳು ಯೋನಿಯೊಳಗೆ ಹೋಗಿರುತ್ತವೆ. ಇದು ಕೇವಲ ಸೆಕೆಂಡ್‌ ಮಾತ್ರದಲ್ಲಿ ನಡೆದುಹೋಗುವ ಘಟನೆ. ಶಿಶ್ನದಿಂದ ಚಿಮ್ಮುವ ವೀರ್ಯ, ಕೂಡಲೇ ಗರ್ಭನಾಳದಲ್ಲಿ ಹೋಗುತ್ತದೆ. ಇದರಲ್ಲಿ ಅದೃಷ್ಟವಂತ ವೀರ್ಯಾಣುವೊಂದು, ಅಂಡದೊಂದಿಗೆ ಸೇರಿಕೊಂಡುಬಿಡುತ್ತದೆ. ಇದೆಲ್ಲವೂ ಕ್ಷಣಮಾತ್ರದಲ್ಲಿ ನಡೆಯುವ ಘಟನೆ. ಹೀಗಾಗಿ, ಮಕ್ಕಳಾಗೋಕೆ ಅಂತ ಸಂಭೋಗ ನಡೆದ ನಂತರ ಗಂಟೆಗಟ್ಟಲೆ ಅಂಗಾತ ಮಲಗುವುದು, ಅಥವಾ ಫೀಟಸ್‌ ಪೊಸಿಷನ್‌ನಲ್ಲಿ ಮಲಗುವುದು ಮಾಡಬೇಕಿಲ್ಲ. ಕ್ಲೀನ್‌ ಮಾಡದೆಯೂ ಇರಬೇಕಿಲ್ಲ. ಕ್ಲೀನ್‌ ಮಾಡಿದರೂ ಯಾವ ತೊಂದರೆಯೂ ಇಲ್ಲ. ಅದಕ್ಕೂ ಗರ್ಭ ನಿಲ್ಲುವುದಕ್ಕೂ ಸಂಬಂಧವಿಲ್ಲʼʼ ಎಂದು ಪರಿಣತ ವೈದ್ಯರು, ಗೈನಕಾಲಜಿಸ್ಟ್‌ಗಳು ಹೇಳುತ್ತಾರೆ.

ಇದನ್ನೂ ಓದಿ: ಟೀ ಮಾಡಿದ ಮೇಲೆ ಅದರ ವೇಸ್ಟ್ ಅನ್ನು ಎಸೆಯುತ್ತೀರಾ?! ಹಾಗಿದ್ರೆ ನೀವು ಎಂತಾ ತಪ್ಪು ಮಾಡುತ್ತಿದ್ದೀರಿ ಗೊತ್ತಾ ?!

Leave A Reply

Your email address will not be published.