ಸೌಜನ್ಯ ಕೊಲೆ ಪ್ರಕರಣ: ಕೊನೆಗೂ ಮೌನ ಮುರಿದ ನಿರ್ದೋಷಿ ಸಂತೋಷ್ ರಾವ್- ಕಾಮಾಂಧರಲ್ಲಿ ಶುರುವಾಯ್ತು ನಡುಕ !!

Dharmastala Sowjanya murder case Santosh Rao talks about Sowjanya case

Santosh Rao: ಬರೀ ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾಗುತ್ತಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇನ್ನು ಮುಂದೆ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ಯಾರೂ ಊಹಿಸದ ತಿರುವುಗಳು ದೊರೆಯಲಿವೆ. ‘ ಇನ್ನು ಏನೂ ಆಗದು, ಇಲ್ಲಿಗೆ ಮುಗಿಯಿತು’ ಎಂದು ಕೊಂಚ ನೆಮ್ಮದಿಯಿಂದಿದ್ದ ಕಾಮಾಂಧರು, ಜೀವನ ಪರ್ಯಂತ ಅದೂ ತಮ್ಮ ವೃದ್ಧಾಪ್ಯದ ದಿನಗಳಲ್ಲಿ ನಿದ್ದೆಮಾಡದ ದಿನಗಳು ಎದುರಾಗಲು ಸಮಯ ಕೂಡಿಬಂದಿದೆ. ಯಾಕೆಂದರೆ ಸೌಜನ್ಯ ಕೊಲೆ ಪ್ರಕರಣದಲ್ಲಿ ತಪ್ಪುಮಾಡದಿದ್ದರೂ ಜೈಲು ಪಾಲಾಗಿ, ನಿರ್ದೋಷಿ ಎಂದು ಹೊರಬಂದಿರುವ ಸಂತೋಷ್ ರಾವ್ ಅವರ ತಾಳ್ಮೆಯ ಕಟ್ಟೆ ಒಡೆದಿದೆ. ಸುಮಾರು 10 ವರುಷಗಳ ದುಃಖ ಕೋಡಿಯಾಗಿ ಹರಿದಿದೆ. ಈ ಪ್ರಕರಣದ ಕುರಿತು ಸಂತೋಷ್ ರಾವ್ (Santosh Rao) ಕೊನೆಗೂ ಮೌನ ಮುರಿದಿದ್ದಾರೆ.

ಕರ್ನಾಟಕದಾದ್ಯಂತ ಸದ್ದು ಮಾಡುತ್ತಿದ್ದಂತಹ ಧರ್ಮಸ್ಥಳ ಸೌಜನ್ಯ ಪ್ರಕರಣ ಇದೀಗ ದೇಶಾದ್ಯಂತ ಮಾರ್ಧನಿಸಲು ರೆಡಿಯಾಗುತ್ತಿದೆ. ಇತ್ತೀಚಿಗಷ್ಟೇ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ನಿರ್ಭಯಾ ಪ್ರಕರಣದ ಸಂತ್ರಸ್ತೆಯ ತಾಯಿ ಸೌಜನ್ಯ ಪರ ಧ್ವನಿ ಎತ್ತಿ ಪ್ರಕರಣದ ಮರು ತನಿಖೆಯ ಹೋರಾಟಗಳಿಗೆ ಆನೆ ಬಲ ತಂದುಕೊಟ್ಟಿದ್ದರು. ಇದೀಗ ಈ ಬೆನ್ನಲ್ಲೇ ಸೌಜನ್ಯಳ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಕಾಮಾಂಧರು ಹಿಡಿದುಕೊಟ್ಟ, ಅನ್ಯಾಯವಾಗಿ ಹತ್ತಾರು ವರ್ಷಗಳ ಜೈಲುಪಾಲಾಗಿ, ಇಡೀ ತನ್ನ ಹಾಗೂ ತನ್ನ ಕುಟುಂಬದವರ ಬದುಕೇ ನಾಶವಾಗಿ ಯಾರೂ ಪಡದ ನರಕ ಯಾತನೆಯನ್ನು ಅನುಭವಿಸಿರುವ ಸಂತೋಷ್ ರಾವ್ ಕೊನೆಗೂ ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಮೌನಮುರಿದಿದ್ದಾರೆ. ಮನ ಬಿಚ್ಚಿ ಮಾತನಾಡಿದ್ದಾರೆ. ಬಲವಂತವಾಗಿ ಅದುಮಿ, ಮುಚ್ಚಿ ಹಿಡಿದಿದ್ದ ನ್ಯಾಯದ ಪರ ಹೋರಾಟಕ್ಕೆ ಮತ್ತೊಂದು ಬಲವಾದ ಪೂರಕ ಬೆಳವಣಿಗೆ ನಡೆದಿದೆ.

ಹೌದು, ನಾಡಿನ ಜನ ಬಹಳಷ್ಟು ದಿನಗಳಿಂದ ಕಾದು ಕುಳಿತಿದ್ದ, ಬಹಳ ಕುತೂಹಲದಿಂದ ನಿರೀಕ್ಷಿಸಿದ್ದ ಗಳಿಗೆ ಇದೀಗ ಬಂದೊದಗಿದೆ. ಆರೋಪಿಯಾಗಿ ಜೈಲುಪಾಲಾಗಿ, ಸದ್ಯ ನಿರಪರಾಧಿಯಾಗಿ ಹೊರಬಂದಿರುವ ಸಂತೋಷ್ ರಾವ್ ಕೊನೆಗೂ ಮನ ಬಿಚ್ಚಿ ಮಾತನಾಡಿದ್ದಾರೆ. ತಮ್ಮ ದುಃಖದ ಕಟ್ಟೆಯನ್ನು ಒಡೆದು ಮೌನ ಮುರಿದಿದ್ದಾರೆ. ಬಹುಶಃ ಸುಮಾರು 11 ವರುಷಗಳ ಈ ನರಕ ಯಾತನೆಯಲ್ಲಿ ಸಂತೋಷ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಬೇಕಾಬಿಟ್ಟಿ ಗುಲ್ಲೆಬ್ಬಿಸಿದವರಿಗೆ, ಊಹಾಪೂಹಗಳಿಗೆ ಈ ಮಾತುಗಳು ನಡುಕು ಹುಟ್ಟಿಸಿವೆ.

ಏನು ಹೇಳಿದ್ರು ಸಂತೋಷ್?
ಮೊನ್ನೆ, ಶುಕ್ರವಾರ ಮೈಸೂರಿನಲ್ಲಿ ಒಡನಾಡಿ ಸೇವಾ ಸಂಸ್ಥೆ ಏರ್ಪಡಿಸಿದ್ದ ಸೌಜನ್ಯ ಪ್ರಕರಣದ ಬಗ್ಗೆ ನಡೆಸಿದ ಕಾನೂನು ಸಂವಾದ ಸಂದರ್ಭ ಸಂತೋಶ್ ರಾವ್ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಹಾಗಾದ್ರೆ ಬನ್ನಿ ಸಂತೋಷ್ ರಾವ್ ಏನಂದ್ರು ಅಂತ ನೋಡೋಣ.

“ನಮಸ್ಕಾರ. ನನ್ನ ಹೆಸರು ಸಂತೋಷ್ ರಾವ್” ಎಂದು ಮಾತು ಆರಂಭಿಸುವ ಆತ ತಾನು ಘಟನೆ ಆದ ದಿನ ಎಲ್ಲಿದ್ದೆ ಎಂದು ಹೇಳಿದ್ದಾರೆ. “ನಾನು 11ನೇ ತಾರೀಖಿನಂದು ಧರ್ಮಸ್ಥಳ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಅಲ್ಲಿಂದ ನೇರವಾಗಿ ಗುಮ್ಮಟ ಬಿಟ್ಟಕ್ಕೆ ಹೋದೆ. ಅಲ್ಲಿ ಸ್ಥಳೀಯರು ನನಗೆ ಹೊಡೆದು, ಪೊಲೀಸರಿಗೆ ಹಿಡಿದು ಕೊಟ್ಟರು. ಬಳಿಕ ಪೊಲೀಸರು ನನ್ನನ್ನು ಎಳೆದೊಯ್ದು ಚಿತ್ರಹಿಂಸೆ ನೀಡಿದರು. ಕಾಲಿಗೆ ಮಂಡಿಗೆ ಎಲ್ಲಾ ಕಡೆಗೂ ಚೆನ್ನಾಗಿ ಥಳಿಸಿ, ಹಲ್ಲು ದವಡೆಗಳಲ್ಲಿ ರಕ್ತ ಒಸರುವಂತೆ ಹಿಂಸಿಸಿದರು. ಎಲ್ಲವನ್ನೂ ನಾನೇ ಮಾಡಿದ್ದೆಂದು ಒಪ್ಪಿಗೆಯನ್ನು ಪಡೆಯಲು ನೋಡಿದರು. ಆದರೆ ಈ ಪ್ರಕರಣಕ್ಕೂ ನನಗೂ ಯಾವದೇ ಸಂಬಂಧವಿಲ್ಲ. ಈ ಪ್ರಕರಣ ನಡೆದಾಗ, ಅಂದರೆ 9, 10ನೇ ತಾರೀಖು ನಾನು ಶೃಂಗೇರಿ ಮಠದಲ್ಲಿದ್ದೆ. ಬಳಿಕ 11ನೇ ತಾರೀಖಿನಂದು ಧರ್ಮಸ್ಥಳಕ್ಕೆ ಪೂಜೆಗೆಂದು ಬಂದೆ. ಆದರೆ ಅಲ್ಲಿನ ಸ್ಥಳೀಯರು ನನ್ನನ್ನು ಈ ರೀತಿಯಾಗಿ ಸಿಕ್ಕಿಹಾಕಿಸಿಬಿಟ್ಟರು. ನಾನು ಆರು ವರ್ಷಗಳ ಕಾಲ ಜೈಲಲಿದ್ದೆ. ಇದೀಗ ಕೋರ್ಟ್ ನಿಂದ ನಿರಪರಾಧಿ ಎಂದು ಸಾಬೀತಾಗಿ ಹೊರಗಡೆ ಬಂದಿದ್ದೇನೆ. ಆದರೆ ಎಲ್ಲರೂ ಹೇಳುವಂತೆ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಯಾವುದೇ ತಪ್ಪುಗಳನ್ನು ಮಾಡಿಲ್ಲ” ಎಂದಿದ್ದಾರೆ ಕ್ಲೀನ್ ಚಿಟ್ ಪಡೆದು ಬಿಡುಗಡೆಯಾದ ಸಂತೋಷ್ ರಾವ್.

ಅಲ್ಲದೆ ಮುಂದುವರೆದು ಮಾತನಾಡಿದ ಅವರು, ‘ಬ್ರೈನ್ ಮ್ಯಾಪಿಂಗ್ ಬಗ್ಗೆ ನನಗೇನು ಗೊತ್ತಿಲ್ಲ. ಈ ಬಗ್ಗೆ ಯಾರೂ ಕೂಡ ನನ್ನಲ್ಲಿ ಕೇಳಲಿಲ್ಲ. ಹಾಗಾಗಿ ಅದರ ವಿಚಾರ ಏನು ಎಂದು ನನಗೆ ತಿಳಿದಿಲ್ಲ. ಈ ಪ್ರಕರಣದ ಕುರಿತು ನನಗೆ ಯಾವುದೇ ಸಂಬಂಧವಿಲ್ಲ. ನನಗೇನೂ ಗೊತ್ತಿಲ್ಲ. ಸುಖ-ಸುಮ್ಮ ನಿನ್ನನ್ನು ಸಿಕ್ಕಿಹಾಕಿಸಿದ್ದಾರೆ’ ಎಂದು ಮನಮಿಡಿಯುವಂತೆ ಮಾತನಾಡಿದ್ದಾರೆ.

ಈ ಮೂಲಕ, ಇಲ್ಲಿಯ ತನಕ ಹಿಂಸೆ, ಆಪಾದನೆ, ಜೈಲು ಶಿಕ್ಷೆ, ತನಿಖೆ ಮುಂತಾದುವುಗಳಿಂದ ಜರ್ಜರಿತ ಆಗಿರುವ ಸಂತೋಷ್ ರಾವ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇಲ್ಲಿಯ ತನಕ ಬಲವಾಗಿ ಅದುಮಿ ಹಿಡಿದು ಬಿಟ್ಟಿದ್ದ ಸಂತೋಷ್ ರಾವ್ ಮೊದಲ ಬಾರಿಗೆ ಬಾಯಿ ಬಿಟ್ಟಿದ್ದಾರೆ. ಮುಂದೆ ಈ ಬೆಳವಣಿಗೆ ಸೌಜನ್ಯಾಯ ಕಾನೂನು ಪರ ಹೋರಾಟಕ್ಕೆ ದೊಡ್ಡ ಬಲ ಆಗುತ್ತೆ ಎಂದು ವಿಶ್ಲೇಿಶಿಸಲಾಗುತ್ತಿದೆ.

ಇದನ್ನೂ ಓದಿ: ರೈತರೇ ಗಮನಿಸಿ, ಬೆಳೆ ನಷ್ಟ ಪರಿಹಾರ ಬೇಕಂದ್ರೆ ಕೂಡಲೇ ಈ ಕೆಲಸ ಮಾಡಿ

Leave A Reply

Your email address will not be published.