Indian Railways: ಅಬ್ಬಬ್ಬಾ.. ರೈಲಿನಲ್ಲಿ ‘ಮದ್ಯ’ ಸಾಗಿಸಿ ಸಿಕ್ಕಿಬಿದ್ರೆ ಇಂತಾ ಶಿಕ್ಷೆನಾ ಸಿಗೋದು ?!!

Indian Railways : ಭಾರತದಲ್ಲಿ ಲಕ್ಷಾಂತರ ಪ್ರಯಾಣಿಕರು(Railway Passengers) ರೈಲ್ವೇ ಮೂಲಕ ಪ್ರಯಾಣಿಸುವುದು ಗೊತ್ತಿರುವ ವಿಚಾರವೇ! ಈಗಾಗಲೇ ಭಾರತೀಯ ರೈಲ್ವೆ( Indian Railway)ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. ಆದರೆ, ರೈಲ್ವೆಯಲ್ಲಿ (Railway)ಪ್ರಯಾಣಿಸುವಾಗ ಮದ್ಯ ಇಲ್ಲವೇ ಆಲ್ಕೊಹಾಲ್(Alchol)ಒಯ್ಯಬಹುದೇ ಎಂಬ ಗೊಂದಲ ಹೆಚ್ಚಿನವರಿಗೆ ಕಾಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ!!

ರೈಲಿನಲ್ಲಿ ಆಲ್ಕೋಹಾಲ್(Alchol)ಸಾಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನೀವು ಯಾವುದೇ ರೀತಿಯ ಆಲೋಹಾಲ್ ಅನ್ನು ಒಯ್ಯಲು ಅವಕಾಶವಿಲ್ಲ. ಭಾರತದಲ್ಲಿ ಬಿಹಾರ, ಗುಜರಾತ್, ಮಿಜೋರಾಂ ಮತ್ತು ನಾಗಾಲ್ಯಾಂಡ್ ನಂತಹ ರಾಜ್ಯಗಳಲ್ಲಿ ಮದ್ಯವನ್ನು(Liquor)ನಿಷೇಧಿಸಲಾಗಿದೆ. ಒಂದು ವೇಳೆ ಯಾವುದೇ ವ್ಯಕ್ತಿ ಆಲ್ಕೊಹಾಲ್ ತೆಗೆದುಕೊಂಡು ಹೋಗಿದ್ದು ತಿಳಿದರೆ ರೈಲ್ವೆ ಕಾಯ್ದೆ 1989 ರ ಸೆಕ್ಷನ್ 165 ರ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ರೈಲಿನಲ್ಲಿ ಮದ್ಯ ಸಾಗಾಟ ಮಾಡಿ ತಗಾಲಕಿಕೊಂಡರೆ ಮೇಲೆ ತಿಳಿಸಿದ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಜೊತೆಗೆ ಆ ವ್ಯಕ್ತಿಗೆ 500 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ, 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಕೂಡ ಇದೆ. ಇದಲ್ಲದೆ, ಪ್ರಯಾಣಿಕರ ಟಿಕೆಟ್ ಕೂಡ ರದ್ದುಗೊಳಿಸಬಹುದು. ಅದೇ ರೀತಿ, ನಿಷೇಧಿತ ಸರಕುಗಳನ್ನು ಸಾಗಿಸುವ ಸಂದರ್ಭ ಯಾವುದೇ ಘಟನೆ ಸಂಭವಿಸಿದರೆ ಮತ್ತು ಯಾವುದೇ ಹಾನಿ ಉಂಟಾದರೆ ಆ ಪರಿಹಾರವನ್ನು ಕೂಡ ಅಪರಾಧಿಯಿಂದ ವಸೂಲಿ ಮಾಡಲಾಗುತ್ತದೆ.

 

ಇದನ್ನು ಓದಿ: ಕಾಡುತ್ತಿದೆಯೇ ಮಲಬದ್ಧತೆಯ ಸಮಸ್ಯೆ ?! ಹಾಗಿದ್ರೆ ಇಲ್ಲಿದೆ ನೋಡಿ ನಿವಾರಣಾ ಸೂತ್ರ

Leave A Reply

Your email address will not be published.