DV Sadananda Gowda: ಸದಾನಂದಗೌಡರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ – ಮಾಜಿ ಸಿಎಂಗೆ ಕಾದಿದೆಯಾ ಬಿಗ್ ಶಾಕ್ ?!

Political news lok sabha election 2024 BJP High command call for former CM DV Sadananda Gowda latest news

DV Sadananda Gowda: ಮಾಜಿ ಸಿಎಂ ಡಿವಿ ಸದಾನಂದ ಗೌಡರು (Former CM DV Sadananda Gowda)ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಫುಲ್ ಆಕ್ಟೀವ್ ಆಗಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ, ಬಿಜೆಪಿ – ಜೆಡಿಎಸ್ (BJP – JDS) ಮೈತ್ರಿ ವಿಚಾರದಲ್ಲಿ ಕರ್ನಾಟಕದ ಯಾವುದೇ ಬಿಜೆಪಿ ನಾಯಕರ ಜೊತೆಗೂ ಹೈ ಕಮಾಂಡ್(BJP High Command) ನಾಯಕರು ಚರ್ಚೆ ಮಾಡಿಲ್ಲ ಎಂದು ಸದಾನಂದ ಗೌಡರು ಹೈಕಮಾಂಡ್ ವಿರುದ್ದ ಆರೋಪಿಸಿದ್ದರು. ಅಷ್ಟೆ ಅಲ್ಲದೇ, ಬಿಜೆಪಿ ನಾಯಕರನ್ನು ಹೊರಗಿರಿಸಿ ವರಿಷ್ಟರು ತೀರ್ಮಾನ ಕೈಗೊಂಡಿದ್ದಾರೆ ಎಂದು ಡಿ.ವಿ. ಸದಾನಂದ ಗೌಡರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಹೀಗೆ ಡಿ.ವಿ ಸದಾನಂದ ಗೌಡರು ಅಸಮಾಧಾನ ಹೊರ ಹಾಕಿದ್ದೇ ತಡ!!ರಾಜ್ಯ ರಾಜಕಾರಣದಲ್ಲಿ ಡಿವಿಎಸ್ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರುತ್ತಾರಾ ಎನ್ನುವ ಚರ್ಚೆ ಕೂಡ ಜೋರಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಡಿವಿ ಸದಾನಂದ ಗೌಡರಿಗೆ ಬಿಜೆಪಿ ಹೈಕಮಾಂಡ್ BJP High Command ಬುಲಾವ್ ನೀಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (BJP President JP Nadda) ಈ ಅಕ್ಟೋಬರ್ 25ರಿಂದ ಅವರನ್ನು ಬಂದು ಭೇಟಿಯಾಗುವಂತೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ,ಡಿವಿ ಸದಾನಂದಗೌಡರು ಅಕ್ಟೋಬರ್ 25ರಂದು ದೆಹಲಿಗೆ ತೆರಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Cyclone Tej: ಕರಾವಳಿಗರೇ ಎಚ್ಚರ, ಅರಬ್ಬಿಯಲ್ಲಿ ಅಬ್ಬರಿಸಲಿದೆ ‘ತೇಜ್’ ಚಂಡಮಾರುತ !!

Leave A Reply

Your email address will not be published.