Cyclone Tej: ಕರಾವಳಿಗರೇ ಎಚ್ಚರ, ಅರಬ್ಬಿಯಲ್ಲಿ ಅಬ್ಬರಿಸಲಿದೆ ‘ತೇಜ್’ ಚಂಡಮಾರುತ !!

National news IMD warns cyclone tej farming in Arabian sea may effect Mumbai and konkan

Cyclone Tej In Arabian Sea: ಅರಬ್ಬಿ ಸಮುದ್ರದ ನಡು ಮಧ್ಯ ಭಾಗದಲ್ಲಿ ವಾಯು ಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಚಂಡಮಾರುತ (Cyclone Tej In Arabian Sea)ಸೃಷ್ಟಿಯಾಗಿದೆ. ಹಿಂದೂ ಮಹಾಸಾಗರ (Indian Ocean region) ಪ್ರದೇಶದಲ್ಲಿ ಚಂಡಮಾರುತಗಳನ್ನು ಹೆಸರಿಸಲು ಅನುಸರಿಸಿದ ಸೂತ್ರದ ಅನುಸಾರ, ಈ ಚಂಡ ಮಾರುತಕ್ಕೆ ‘ತೇಜ್'(Cyclone Tej)ಎಂದು ಹೆಸರಿಡಲಾಗಿದೆ . ಕೆಲ ಬಲ್ಲ ಮೂಲಗಳ ಪ್ರಕಾರ, ಈ ಚಂಡಮಾರುತ ಯೆಮನ್ ಹಾಗೂ ಒಮನ್ ದೇಶಗಳ ಕರಾವಳಿಗೆ ಅಪ್ಪಳಿಸುವ ಸಂಭವವಿದ್ದು, ಚಂಡಮಾರುತ ಭೀಕರ ಪ್ರಭಾವ ಬೀರುವ ಸಾಧ್ಯತೆ ಕುರಿತು ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ಮಾಹಿತಿ ನೀಡಿದೆ.

ಒಂದು ವೇಳೆ ಈ ತೇಜ್ ಚಂಡಮಾರುತ ವಿರುದ್ದ ದಿಕ್ಕಿನಲ್ಲಿ ಸಾಗಿದರೆ ಗುಜರಾತ್ ಹಾಗೂ ಪಾಕಿಸ್ತಾನದ ಕರಾಚಿ ಕರಾವಳಿಗೆ ಅಪ್ಪಳಿಸಲಿದೆ. ಬಹುತೇಕ ಅರಬ್ ರಾಷ್ಟ್ರಗಳ ಕಡೆಗೆ ಸಾಗುವ ಸಾಧ್ಯತೆ ದಟ್ಟವಾಗಿದೆ. ಇದು ಈ ವರ್ಷದಲ್ಲಿ ಅರಬ್ಬಿ ಸಮುದ್ರದಲ್ಲಿ (Arabian Sea) ಉಂಟಾಗುತ್ತಿರುವ 2ನೇ ಚಂಡಮಾರುತವಾಗಿದೆ. ಸದ್ಯ ಒಮಾನ್ ಮತ್ತು ಪಕ್ಕದ ಯೆಮೆನ್‌ನ (Yemen) ದಕ್ಷಿಣ ಕರಾವಳಿಯ ಕಡೆಗೆ ಈ ಚಂಡ ಮಾರುತ ಚಲಿಸುತ್ತದೆ. ಆದರೆ ಈ ನಡುವೆ ಭಾರತದ ಗುಜರಾತ್‌ ಕರಾವಳಿಯಲ್ಲಿ ಬಿಪೊರ್‌ಜೊಯ್‌ ಚಂಡಮಾರುತ ಮಾಡಿದ ಹಾನಿ ಎಲ್ಲರಿಗೂ ಗೊತ್ತಿರುವಂತದ್ದೇ. ಅದೇ ರೀತಿ ಈ ಚಂಡಮಾರುತ ಕೂಡ ಪಥ ಬದಲಿಸಿ ಸಾಗುವ ಸಾಧ್ಯತೆ ಕುರಿತು ಭಾರತದ ಕರಾವಳಿಗೂ ಅಪಾಯ ಉಂಟುಮಾಡುವ ಸಂಭವದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ

ಇದನ್ನೂ ಓದಿ: Ration Card Updates: ರೇಷನ್ ಕಾರ್ಡ್’ದಾರರಿಗೆ ಭಾರೀ ದೊಡ್ಡ ಆಘಾತ – ತಿದ್ದುಪಡಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

Leave A Reply

Your email address will not be published.