Home Karnataka State Politics Updates New Scheme For Women: ಡೈಲಿ 7 ರೂಪಾಯಿ ಉಳಿಸಿದ್ರೆ, ತಿಂಗಳಿಗೆ 5,000 ರೂಪಾಯಿ ನಿಮಗೆ...

New Scheme For Women: ಡೈಲಿ 7 ರೂಪಾಯಿ ಉಳಿಸಿದ್ರೆ, ತಿಂಗಳಿಗೆ 5,000 ರೂಪಾಯಿ ನಿಮಗೆ ಸಿಗೋದು ಪಕ್ಕಾ -ಮಹಿಳೆಯರಿಗೆ ಹೊಸ ಯೋಜನೆ !

New Scheme For Women

Hindu neighbor gifts plot of land

Hindu neighbour gifts land to Muslim journalist

New Scheme For Women: ಹಣ ಅಂದರೆ ಹೆಣಾನು ಬಾಯಿ ಬಿಡುತ್ತೆ ಎಂಬ ಮಾತೇ ಇದೆ. ಹಣ ಎಲ್ಲರಿಗೂ ಬೇಕು, ಆದರೆ ಅದನ್ನು ಎಷ್ಟು ಜನ ಸೇವಿಂಗ್ಸ್ ಮಾಡ್ತಾರೆ ಹೇಳಿ? ಇವತ್ತು ನಿಮಗೆ ಸಿಂಪಲ್ ಆಗಿ ಹಣವನ್ನು ಹೇಗೆ ಸೇವ್ ಮಾಡಬೇಕು ಅಂತ ಹೇಳುತ್ತೇವೆ.

ಪ್ರತಿ ದಿನ ನೀವು 7 ರೂಪಾಯಿ ಉಳಿಸಿದ್ರೆ, ತಿಂಗಳಿಗೆ 5 ಸಾವಿರ ರೂಪಾಯಿ ಗಳಿಸೋ ಥರ ಉಳಿತಾಯ ಮಾಡಬಹುದು. ಮಹಿಳೆಯರೇ (New Scheme For Women) ನಿಮಗೆ ಇದು ಬೆಸ್ಟ್! ತಿಂಗಳಿಗೆ 5,000 ರೂಪಾಯಿಗಳ ಪಿಂಚಣಿಯನ್ನು ಪಡೆಯುವ ಸರ್ಕಾರದ ಯೋಜನೆಯ ಮಾಹಿತಿ ಇಲ್ಲಿದೆ ನೋಡಿ. 7 ರೂಪಾಯಿಗಳ ದೈನಂದಿನ ಹೂಡಿಕೆಯು ನಿವೃತ್ತಿಯ ನಂತರ ರೂ 5,000 ಪಿಂಚಣಿ ಪಡೆಯಬಹುದು.

ಮಾಸಿಕ 5,000 ರೂಪಾಯಿಗಳ ಪಿಂಚಣಿಯನ್ನು ಪಡೆಯಲು ಸರ್ಕಾರದ ಅಟಲ್ ಪಿಂಚಣಿ ಯೋಜನೆಯನ್ನು ತರುತ್ತಿದೆ.
ನೀವು 18ನೇ ವಯಸ್ಸಿನಿದ್ದಾಗಿಂದ ನೀವು ಪ್ರತಿ ದಿನ 7 ರೂಪಾಯಿ ಉಳಿಸಿದ್ರೆ, ನೀವು ನಿವೃತ್ತರಾದಾಗ ಪ್ರತಿ ತಿಂಗಳು 5,000 ರೂಪಾಯಿ ಪಿಂಚಣಿ ದೊರೆಯುತ್ತದೆ. ಕಷ್ಟದ ಕಾಲದಲ್ಲಿ ಮತ್ತು ನಮಗೆ ವಯಸ್ಸಾದ ಕಾಲದಲ್ಲಿ ನಾವು ಫ್ಯಾಷನ್ ಮತ್ತಿತರ ದುಬಾರಿ ವಿಷಯಗಳಲ್ಲಿ ಖರ್ಚು ಮಾಡುವುದು ಕಮ್ಮಿ. ಆಗ ನಮಗೆ ಬೇಕಾಗಿರುವುದು ದೈನಂದಿನ ಬದುಕು ಮತ್ತು ಆರೋಗ್ಯ ನೋಡಿಕೊಳ್ಳಲು ಬೇಕಾಗುವ ಔಷಧ ವೆಚ್ಚಗಳು ಅಧಿಕ. ಹಾಗಾಗಿ ವಯಸ್ಸಾದ ದಿನಗಳಿಗೆ ಈ ಪಿಂಚಣಿ ಯೋಜನೆ ಉತ್ತಮವಾದ ಆಯ್ಕೆಯಾಗಬಲ್ಲದು.

18 ರಿಂದ ಈ ಯೋಜನೆಯನ್ನು ಪ್ರಾರಂಭಿಸಿದರೆ, ಪ್ರತಿ ತಿಂಗಳು ಕನಿಷ್ಠ 210 ರೂಪಾಯಿಗಳನ್ನು ಉಳಿತಾಯ ಮಾಡಬೇಕಾಗುತ್ತದೆ. 60ನೇ ವಯಸ್ಸನ್ನು ತಲುಪಿದಾಗ, ನಿಮ್ಮ ಮಾಸಿಕ ಪಿಂಚಣಿ 5,000 ರೂಪಾಯಿ ಸಿಗುತ್ತೆ.
25 ವರ್ಷದಲ್ಲಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಮಾಸಿಕ 375 ರೂಪಾಯಿ ಉಳಿತಾಯ ಮಾಡಬೇಕು.

30ರಲ್ಲಿ ಆರಂಭಿಸುವುದಾದರೆ 577 ರೂಪಾಯಿ ಹೂಡಿಕೆ ಮಾಡಬೇಕು. ಹೀಗೆ ಮಾಡಿದಾಗ ನಿವೃತ್ತಿಯಾದಾಗ 5000 ಸಿಗುತ್ತೆ. ವ್ಹಾವ್, ಎಷ್ಟು ಸೂಪರ್ ಆಗಿದೆ ಅಲ್ವಾ ಈ ಪ್ಲಾನ್. ನೀವು ಯಾಕೆ ಇಂದಿನಿಂದ ಈ ಯೋಜನೆ ಆರಂಭ ಮಾಡಬಾರದು?

 

ಇದನ್ನು ಓದಿ: Gift to weavers: ರಾಜ್ಯ ಸರಕಾರದಿಂದ ನೇಕಾರರಿಗೆ ಭರ್ಜರಿ ಗಿಫ್ಟ್‌! 250 ಯುನಿಟ್‌ ವಿದ್ಯುತ್‌ ಫ್ರೀ!!