Gift to weavers: ರಾಜ್ಯ ಸರಕಾರದಿಂದ ನೇಕಾರರಿಗೆ ಭರ್ಜರಿ ಗಿಫ್ಟ್‌! 250 ಯುನಿಟ್‌ ವಿದ್ಯುತ್‌ ಫ್ರೀ!!

karnataka bengaluru news weavers get 250 free units

Gift to Weavers: ಅರ್ಥಿಕವಾಗಿ ಸಂಕಷ್ಟದಲ್ಲಿರುವ ನೇಕಾರರಿಗೆ ರಾಜ್ಯ ಸರಕಾರ (Karnataka Government) ದಸರಾ ಗಿಫ್ಟ್‌ (Gift to weavers) ನೀಡಿದೆ. 10 ಎಚ್‌.ಪಿ. ಒಳಗಿನ ವಿದ್ಯುತ್‌ ಮಗ್ಗಗಳಿಗೆ 250 ಯುನಿಟ್‌ವರೆಗೂ ಉಚಿತ ವಿದ್ಯುತ್‌ (Free Electricity upto 250 units) ನೀಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಆದೇಶ ನೀಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಅಭಿನಂದನೆಯನ್ನು ಜವಳಿ ಸಚಿವ ಶಿವಾನಂದ ಪಾಟೀಲ್‌ (Shivananda patil) ಹೇಳಿದ್ದಾರೆ.

ತಿಂಗಳಿಗೆ ಗರಿಷ್ಠ 250 ಯೂನಿಟ್‌ ಉಚಿತ ವಿದ್ಯುತ್‌ ನೀಡಲು ಸರಕಾರ ಆದೇಶ ನೀಡಿದೆ. 10 ಎಚ್‌ಪಿವರೆಗಿನ ಮಗ್ಗ ಮತ್ತು ಮಗ್ಗಪೂರ್ವ ಘಟಕದವರಿಗೆ ಈ ಬಂಪರ್‌ ಆಫರ್‌ ನೀಡಲಾಗಿದೆ. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೇಕಾರರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ನೀಡಿದ ಭರವಸೆಯನ್ನು ಈ ಬಾರಿ ದಸರಾ, ದೀಪಾವಳಿಗೆ ನೀಡಿದೆ ಎಂದು ಶಿವಾನಂದ ಪಾಟೀಲ್‌ ಹೇಳಿದರು. 10ಎಚ್‌ಪಿ ವರೆಗಿನ ಮಗ್ಗ ಹೊಂದಿರುವ ಶೇ.80ರಷ್ಟು ನೇಕಾರರಿಗೆ ಈ ಯೋಜನೆ ಸಾಕಷ್ಟು ಅನುಕೂಲವಾಗಿದೆ ಎಂದು ಸಚಿವರು ಹೇಳಿದರು.

ಉಚಿತ ವಿದ್ಯುತ್‌ ಪೂರೈಸುವುದರಿಂದ ಮಾಸಿಕ ಅಂದಾಜು 150ಕೋಟಿ ರೂ.ವೆಚ್ಚವಾಗಲಿದೆ. ಈ ಯೋಜನೆ ಅನುಷ್ಠಾನದಿಂದ 40 ಸಾವಿರ ನೇಕಾರರಿಗೆ ಉಪಯೋಗವಾಗಲಿದೆ. ಕೈಮಗ್ಗ ಮತ್ತು ಜವಳಿ ಇಲಾಖೆಯು ಈ ವೆಚ್ಚವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಭರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇಷ್ಟು ಮಾತ್ರವಲ್ಲದೇ ಶಿವಾನಂದ ಪಾಟೀಲ್‌ ಅವರು 10 ಎಚ್‌ಪಿ ವರೆಗಿನ ವಿದ್ಯುತ್‌ ಮಗ್ಗಳಿಗೆ ಉಚಿತ ವಿದ್ಯುತ್‌ ನೀಡುವುದರ ಜೊತೆಗೆ 10-20 ಎಚ್‌ಪಿ ವರೆಗಿನ ವಿದ್ಯುತ್‌ ಮಗ್ಗ ಹಾಗೂ ಮಗ್ಗಪೂರ್ವ ಘಟಕಗಳಿಗೆ ಪ್ರತಿ ಯೂನಿಟ್‌ ಗೆ 1.25ರೂ. ನಂತೆ ಮಾಸಿಕ ಗರಿಷ್ಠ 500 ಯುನಿಟ್‌ವರೆಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ನೀಡಲಾಗುವುದು ಎಂದು ಹೇಳಿದರು.

 

ಇದನ್ನು ಓದಿ: Job Fair: ನ.19 ರಂದು ಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳ! ಹೆಚ್ಚಿನ ಮಾಹಿತಿ ಇಲ್ಲಿದೆ!

Leave A Reply

Your email address will not be published.