No Death: ಸಾಯುವುದೇ ಅಪರಾಧವಾದ್ದರಿಂದ ಇಲ್ಲಿ 70 ವರ್ಷಗಳಿಂದ ಯಾರೂ ಸತ್ತಿಲ್ಲ !! ಅರೆ.. ಇದು ಹೇಗೆ ಸಾಧ್ಯ?

World news no death in this city death is banned and people did not die since last 70 year

No Death: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂಬ ಮಾತು ಎಲ್ಲರಿಗೂ ಗೊತ್ತಿರುವಂತದ್ದೇ!! ಆದರೆ, ಇಲ್ಲೊಂದು ಕಡೆ ಸಾಯವುದು ಕೂಡ ಅಪರಾಧವಂತೆ. ಆದರೆ,ಇಲ್ಲಿ ಮತ್ತೊಂದು ಅಚ್ಚರಿಯ ಸಂಗತಿಯೇನೆಂದರೆ 70 ವರ್ಷಗಳಿಂದ ಇಲ್ಲಿಯವರೆಗೆ ಇಲ್ಲಿ ಯಾರೂ ಸತ್ತಿಲ್ಲವಂತೆ(No Death)!! ಇದು ಹೇಗೆ ಸಾಧ್ಯ?? ಎಂದು ನೀವು ಕೇಳಬಹುದು!! ಇದಕ್ಕೆ ಕಾರಣ ನಾವು ಹೇಳ್ತೀವಿ ಕೇಳಿ!!

ಹುಟ್ಟಿದ ಪ್ರತಿಯೊಂದು ಜೀವಿ ಕೂಡ ಒಂದಲ್ಲ ಒಂದು ದಿನ ಸಾಯಲೇಬೇಕು ಇದು ಪ್ರಕೃತಿ ನಿಯಮ. ಸಾವು ಬಂದಾಗ ಯಮ ಧರ್ಮರಾಯನನ್ನು (God yama) ಕೂಡ ಸತ್ತವರನ್ನು ಕರೆದೊಯ್ಯಲು ಬರುತ್ತಾನೆ ಎಂಬ ನಂಬಿಕೆ ಹೆಚ್ಚಿನವರಿಗಿದೆ. ಸಾವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತು ಅಕ್ಷರಶಃ ಸತ್ಯ!! ಆದರೆ ನಾರ್ವೆಯ ಒಂದು ಪ್ರಾಂತ್ಯದಲ್ಲಿ ಕಳೆದ 70 ವರ್ಷಗಳಿಂದ ಇಲ್ಲಿಯವರೆಗೆ ಯಾರೂ ಕೂಡ ಸಾವಿಗೀಡಾಗಿಲ್ಲವಂತೆ (death) ಕೇಳುವಾಗಲೆ ಅಚ್ಚರಿ ಎನಿಸಿದರು ಕೂಡ ಇದು ನಿಜ ಕಣ್ರೀ!!

No Death

ನಾರ್ವೇಯ (Norway) ಉತ್ತರ ಧ್ರುವದಲ್ಲಿರುವ ಲಾಂಗ್‌ಇಯರ್‌ಬೈನ್ (Loganiterben) ಎಂಬ ನಗರವು ವರ್ಷವಿಡೀ ತುಂಬಾ ತಂಪಾಗಿರುವ ಹಿನ್ನೆಲೆ ಇಲ್ಲಿನ ಜನರು(People) ಚಳಿಗೆ(Cold)ರಕ್ಷಣೆ ಪಡೆಯಲು ಯಾವಾಗಲೂ ಸ್ವೆಟರ್ ಧರಿಸುತ್ತಾರೆ.ಇದರ ಜೊತೆಗೆ, ಈ ನಗರವು ತುಂಬಾ ಚಿಕ್ಕದಾಗಿದ್ದು, ಇಲ್ಲಿನ ಒಟ್ಟು ಜನಸಂಖ್ಯೆ ಕೇವಲ 2,000 ಆಗಿದ್ದು,ಹೀಗಾಗಿ ಇಲ್ಲಿಯವರೆಗೂ ಇಲ್ಲಿ ಯಾವುದೇ ಸಾವು(Death)ಸಂಭವಿಸಿಲ್ಲ ಎನ್ನಬಹುದೇನೋ!!

ಇಲ್ಲಿನ ಮತ್ತೊಂದು ವಿಶೇಷವೇನೆಂದರೆ ಮೇ ನಿಂದ ಜುಲೈವರೆಗೆ ಇಲ್ಲಿ ಸೂರ್ಯ ಮುಳುಗುವುದು ಕೂಡ ಇಲ್ಲವಂತೆ !!ಇಲ್ಲಿ ಸತತವಾಗಿ 76 ದಿನಗಳವರೆಗೆ ಸೂರ್ಯ ಬೆಳಗುತ್ತಲೇ ಇರುತ್ತಾನೆ. ಹೀಗಾಗಿ, ನಾರ್ವೆಯನ್ನು ಸೂರ್ಯ ಅಸ್ತಮಾನವಾಗದ ನಗರ ಎನ್ನಲಾಗುತ್ತದೆ. ಕೆಲವು ತಿಂಗಳುಗಳಿಂದ ಇಲ್ಲಿ ಚಳಿ ಹೆಚ್ಚಾಗಿರುವ ಹಿನ್ನೆಲೆ ಇಲ್ಲಿನ ಜನರ ರಕ್ತ ಗಡ್ಡೆಕಟ್ಟಿದೆಯಂತೆ. ಇದೆಲ್ಲದರ ನಡುವೆ, ಲಾಂಗ್ ಇಯರ್ ಬೈನ್ ನಗರದಲ್ಲಿ 1917 ರಲ್ಲಿ ಕೊನೆಯದಾಗಿ ಸಾವು ಸಂಭವಿಸಿದೆಯಂತೆ. ಅಂದಿನಿಂದ ಇಲ್ಲಿಯ ತನಕ ಯಾವುದೇ ಸಾವು ಸಂಭವಿಸಿಲ್ಲವಂತೆ.

1917 ರಲ್ಲಿ ಇನ್ಫ್ಲುಯೆನ್ಜಾ ಉಂಟಾಗಿ ಸಾವಿಗೀಡಾಗಿದ್ದಾರೆ. ಆಗ ಇಲ್ಲಿ ಒಂದು ಶವವನ್ನು ಹೂಳಲಾಗಿದ್ದು, ಆದರೆ ಆ ಮೃತದೇಹ ಇನ್ನೂ ಕೂಡ ಕೊಳೆತಿಲ್ಲವೆಂದು ಹೇಳಲಾಗುತ್ತದೆ. ಆ ಮೃತ ದೇಹದಲ್ಲಿರುವ ಬ್ಯಾಕ್ಟೀರಿಯಾಗಳು ಇನ್ನೂ ಕೂಡ ಜೀವಂತವಾಗಿವೆ ಎಂದು ಕೂಡ ಹೇಳಲಾಗುತ್ತದೆ. ಇದರಿಂದ ಇತರರಿಗೆ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಇಲ್ಲಿನ ಜನರು ಸಾವಿನ ವಿಚಾರದಲ್ಲಿ ಭಯಭೀತರಾಗಿದ್ದಾರೆ.

ಈ ಪ್ರದೇಶ ಡೀಪ್ ಫ್ರೀಜರ್‌ನಂತಹ ನಗರವಾಗಿರುವ ಹಿನ್ನೆಲೆ ಮನುಷ್ಯನ ಸಾವಿನ ನಂತರ ಮೃತ ದೇಹಗಳು ಇಲ್ಲಿ ಕೊಳೆತುಹೋಗುವುದು ಅನುಮಾನ. ಹೀಗಾಗಿ, ಇಲ್ಲಿನ ಸರ್ಕಾರ ಇಲ್ಲಿ ಮನುಷ್ಯರು ಸಾಯುವುದಕ್ಕೆ ಸಂಪೂರ್ಣವಾಗಿ ನಿಷೇಧ ಹೇರಿದೆ. ಅಂದರೆ ಇಲ್ಲಿ ಸತ್ತವರನ್ನು ತಕ್ಷಣ ಇಲ್ಲಿಂದ ಬೇರೆಡೆಗೆ ಸಾಗಿಸಬಹುದು. ಆದರೆ, ಇಲ್ಲಿ ಮೃತದೇಹವನ್ನು ಇರಿಸಿಕೊಳ್ಳಲು ಅವಕಾಶವಿಲ್ಲ. ಇಲ್ಲಿ ಮೃತದೇಹ ಇಡುವುದನ್ನು ನಿಷೇಧಿಸಲಾಗಿದೆ. ಇಲ್ಲಿ ಸರ್ಕಾರ ಸಾಯುತ್ತಿರುವವರಿಗಾಗಿ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯ ಅನುಸಾರ, ಯಾರಾದರೂ ತೀರಿಕೊಂಡರೆ ಅಥವಾ ಸಾಯುವ ಸ್ಥಿತಿಯಲ್ಲಿ ಕಂಡುಬಂದರೆ, ಅವರನ್ನು ಹೆಲಿಕಾಪ್ಟರ್‌ ಮೂಲಕ ಮತ್ತೊಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ

ಇದನ್ನೂ ಓದಿ: RapidX: ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – ನೀವಿನ್ನು ಇದರಲ್ಲಿ ಅತೀ ಕಡಿಮೆಬೆಲೆಯಲ್ಲೇ ಪ್ರಯಾಣಿಸ್ಬೋದು

Leave A Reply

Your email address will not be published.