Aadhaar Card: ಆಧಾರ್ ಕಾರ್ಡ್ ಇರೋರಿಗೆ ಸರ್ಕಾರದಿಂದ ಬಂತೊಂದು ಹೊಸ ಸೂಚನೆ !!

new notification from the government for Aadhaar card holders

Aadhaar Card : ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಆಧಾರ್ ಕಾರ್ಡ್​ ಅನ್ನು ವ್ಯಕ್ತಿಯ ಗುರುತನ್ನು ಸಂಕೇತಿಸುವ ಮೂಲ ದಾಖಲೆಯಾಗಿ ಕೂಡ ಪರಿಗಣಿಸಲಾಗುತ್ತದೆ. ಇದೀಗ ಆಧಾರ್ ಕಾರ್ಡ್ ಇರೋರಿಗೆ ಸರ್ಕಾರದಿಂದ ಹೊಸ ಸೂಚನೆ ಬಂದಿದೆ.

ಸದ್ಯ ಆಧಾರ್ ಕಾರ್ಡ್ (Aadhaar Card) ನಮ್ಮ ಬ್ಯಾಂಕ್ ಖಾತೆಗಳಿಗೂ ಲಿಂಕ್ ಆಗಿ ಇರುತ್ತದೆ. ಹಾಗಾಗಿ ನಮ್ಮ ಆಧಾರ್ ಮಾಹಿತಿಯನ್ನು ನೀಡುವಾಗ ಜಾಗೂರುಕರಾಗಿರಬೇಕು‌. ಇತ್ತೀಚೆಗೆ ಆಧಾರ್ ಕಾರ್ಡ್ ಮೂಲಕ ಮೋಸ ವಂಚನೆಗಳು ಸಹ ಹೆಚ್ಚಾಗಿದೆ. ‌ಕಿಡಿಗೇಡಿಗಳು ನಿಮ್ಮ ವೈಯಕ್ತಿಕ ವಿಚಾರ, ಬ್ಯಾಂಕ್ ಮಾಹಿತಿ ಇತ್ಯಾದಿಗಳನ್ನು ಸಹ ಪಡೆದುಕೊಂಡು ಆದಾರ್ ಕಾರ್ಡ್ ಆಪ್ಡೇಟ್ ಹೆಸರಿನಲ್ಲಿ ಓಟಿಪಿ ನಂ ಕೇಳಿ ಹಣ ವಂಚನೆ ಮಾಡಿದ ಪ್ರಕರಣಗಳು ಹೆಚ್ಚಾಗಿವೆ.

ಅಂದಹಾಗೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಸೇಫ್ ಆಗಿ ಇರಿಸಲು ಗೂಗಲ್ ಪ್ಲೇ ಸ್ಟೋರ್ ನಿಂದ mAadhaar ಅಪ್ಲಿಕೇಶನ್ ಅನ್ನು ಓಪನ್ ಮಾಡಿ mAadhaar ಅಪ್ಲಿಕೇಶನ್ ಮೂಲಕ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡಿಸಬಹುದು‌. ಇದರ ಮೂಲಕ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ,ಬಯೋಮೆಟ್ರಿಕ್ ಸೆಟ್ಟಿಂಗ್ ಗಳ ಮೇಲೆ ಕ್ಲಿಕ್ ಮಾಡಿ, ಆಪ್ಲೀಕೇಷನ್ ಲಾಕ್ ಮೇಲೆ ಕ್ಲಿಕ್ ಮಾಡಿ, ಆಧಾರ್ ನಲ್ಲಿ ನೀಡಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ, ಒಟಿಪಿಯನ್ನು ಹಾಕಿದರೆ ನಿಮ್ಮ ಬಯೋಮೆಟ್ರಿಕ್ ವಿವರಗಳು ಲಾಕ್ ಆಗುತ್ತವೆ. ಇದರಿಂದ ನಿಮ್ಮ ಆಧಾರ್ ಕಾರ್ಡ್ ಅನ್ನು ಸಹ ಸೇಫ್ ಆಗಿ ಇರಿಸಬಹುದಾಗಿದೆ.

 

ಇದನ್ನು ಓದಿ: ನಾಯಿಯನ್ನು ಗೇಟ್’ಗೆ ನೇತುಹಾಕಿ ಕೊಂದೇ ಬಿಟ್ರು ಪಾಪಿಗಳು – ಮನಕಲುಕೋ ವಿಡಿಯೋ ವೈರಲ್

Leave A Reply

Your email address will not be published.