

RapidX: ಶುಕ್ರವಾರ ಗಾಜಿಯಾಬಾದ್‌ನ ಸಾಹಿಬಾಬಾದ್‌ನಲ್ಲಿ RapidX ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದ್ದಾರೆ. ದೇಶದ ಮೊದಲ ಕ್ಷಿಪ್ರ ರೈಲು ಸೇವೆಯಾಗಿರುವ ದೆಹಲಿ ಮತ್ತು ಮೀರತ್ (ದೆಹಲಿ ಮೀರತ್ RRTS) ಸಂಪರ್ಕಿಸಲು ಇದನ್ನು ನಿರ್ಮಿಸಲಾಗಿದೆ.
ಇಂದು ಪ್ರಧಾನಿ ಮೋದಿ ಸಾಹಿಬಾಬಾದ್‌ನಿಂದ ದುಹೈ ಡಿಪೋವರೆಗೆ ಸಾಗುವ ವಿಭಾಗವನ್ನು ಉದ್ಘಾಟಿಸಿದ್ದು, 17 ಕಿ.ಮೀ ದೂರದ ಈ ಪ್ರಯಾಣಕ್ಕೆ ಪ್ರಯಾಣಿಕರು 50 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ ಪ್ರೀಮಿಯಂ ಕ್ಲಾಸ್ ನಲ್ಲಿ ಅದೇ 17 ಕಿ.ಮೀ ಪ್ರಯಾಣ ದರವನ್ನು 100 ರೂಪಾಯಿಗೆ ನಿಗದಿಪಡಿಸಲಾಗಿದೆ.
ರಾಪಿಡ್ಎಕ್ಸ್ನ ಸ್ಟ್ಯಾಂಡರ್ಡ್ ಕ್ಲಾಸ್ನಲ್ಲಿ ಸಾಹಿಬಾಬಾದ್ನಿಂದ ದುಹೈ ಡಿಪೋಗೆ ಪ್ರಯಾಣಿಸಲು ನೀವು 50 ರೂಪಾಯಿ ವ್ಯಯಿಸಬೇಕಾಗುತ್ತದೆ. ಆದರೆ ನಿಲ್ದಾಣವನ್ನು ನೋಡಲು ಪ್ಲಾಟ್ಫಾರ್ಮ್ಗೆ ಹೋಗಲು ಟಿಕೆಟ್ ಚಾರ್ಜ್ 20 ರೂಪಾಯಿ ಆಗಲಿದೆ. ಪ್ರೀಮಿಯಂ ವರ್ಗದ ಟಿಕೆಟ್ ದರವನ್ನು 100 ರೂಪಾಯಿಗೆ ನಿಗದಿ ಮಾಡಲಾಗಿದ್ದು, RapidX ದೆಹಲಿಯಿಂದ ಮೀರತ್ಗೆ ಸಂಪೂರ್ಣ ಮಾರ್ಗದಲ್ಲಿ 82 ಕಿ.ಮೀ.ಗೆ ಚಲಿಸಲು ಇರುವ ದರ ವಿಭಿನ್ನವಾಗಿದೆ.RapidX ರೈಲು ಮತ್ತು ಅದರ ನಿಲ್ದಾಣಗಳಲ್ಲಿ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಸಾಹಿಬಾಬಾದ್ನಿಂದ ದುಹೈಗೆ ಸಾಮಾನ್ಯ ಬಸ್ನಲ್ಲಿ ಪ್ರಯಾಣಿಸಲು ನೀವು ಹೆಚ್ಚು ಖರ್ಚು ಇಲ್ಲದೇ ಹೋದರು ಕೂಡ ಈ 17 ಕಿ.ಮೀ. ದೂರವನ್ನು ಕ್ರಮಿಸಲು ನಿಮಗೆ 30ರಿಂದ 50 ನಿಮಿಷಗಳು ಬೇಕಾಗುತ್ತದೆ. ಆದರೆ RapidX ನಲ್ಲಿ ಅದೇ ದೂರವನ್ನು 12ರಿಂದ 15 ನಿಮಿಷಗಳಲ್ಲಿ ತಲುಪಬಹುದಾಗಿದ್ದು, ಸಮಯ ಉಳಿತಾಯದ ಜೊತೆಗೆ ಉಲ್ಲಾಸಕರ ಪ್ರಯಾಣ ಕೂಡ ನಿಮ್ಮದಾಗಲಿವೆ.
ಉತ್ತರ ಪ್ರದೇಶ ರೋಡ್‌ವೇಸ್‌ನ ಸಾಮಾನ್ಯ ಬಸ್‌ನಲ್ಲಿ ನೀವು ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಹೋದರೆ ನೀವು 30- ರಿಂದ 35 ರೂಪಾಯಿಗಳ ಟಿಕೆಟ್ ಪಾವತಿ ಮಾಡಬೇಕಾಗುತ್ತದೆ . ಆದರೆ, ಪ್ರೀಮಿಯಂ ಬಸ್‌ಗಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಬಹುದು. ಇನ್ನು ಉಬರ್ ಬೈಕ್ ಬುಕ್ ಮಾಡಿದರೆ ಸಾಹಿಬಾಬಾದ್ ನಿಂದ ದುಹೈ ಡಿಪೋಗೆ 130 ರೂಪಾಯಿ ಖರ್ಚಾಗುತ್ತದೆ. ಆದರೆ, RapidX ನ ಪ್ರೀಮಿಯಂ ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸಿದರೆ ಹಣ ಕೊಂಚ ಕಡಿಮೆ ಖರ್ಚಾಗಲಿದೆ.
ನೀವು ಆಟೋ ರಿಕ್ಷಾದಲ್ಲಿ ಹೋದರೆ, ಗಾಜಿಯಾಬಾದ್ನಲ್ಲಿ ಮೊದಲ 2 ಕಿ.ಮೀ.ಗೆ 25 ರೂಪಾಯಿಗೆ ದರವನ್ನು ನಿಗದಿ ಮಾಡಲಾಗಿದ್ದು, ನಂತರ ನೀವು ಪ್ರತಿ ಕಿ.ಮೀ.ಗೆ ಹೆಚ್ಚುವರಿಯಾಗಿ 8 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಈ ರೀತಿ ಸಾಹಿಬಾಬಾದ್ ನಿಂದ ದುಹೈ ಡಿಪೋಗೆ 17 ಕಿ.ಮೀ. ಪ್ರಯಾಣಕ್ಕೆ 145 ರೂಪಾಯಿ ಆಗಲಿದೆ. ಆದರೆ, ನೀವು ಆಟೋ ರಿಕ್ಷಾಕ್ಕಿಂತ ಕಡಿಮೆ ದರದಲ್ಲಿ RapidX ನ ಪ್ರೀಮಿಯಂ ಕ್ಲಾಸ್ ನಲ್ಲಿ ಪ್ರಯಾಣಿಸಬಹುದು.
ಇದನ್ನೂ ಓದಿ: Beauty Tips: ಮುಖದ ಸೌಂದರ್ಯ ಹೆಚ್ಚಿಸಲು ಇದೊಂದು ವಸ್ತುವಿದ್ರೆ ಸಾಕು – ಒಮ್ಮೆ ಹಚ್ಚಿ ಆಗೋ ಚಮತ್ಕಾರ ನೋಡಿ













