Senior Citizens: ವಿಶೇಷವಾದ FD ಆರಂಭಿಸಿದೆ ಈ ಬ್ಯಾಂಕ್ – ಈ ವರ್ಗದ ಜನರಿಗಂತೂ ಹೊಡೀತು ಬಂಪರ್ ಲಾಟ್ರಿ

Federal Bank: ಖಾಸಗಿ ವಲಯದ ಬ್ಯಾಂಕ್ ಆದ ಫೆಡರಲ್ ಬ್ಯಾಂಕ್ (Federal Bank)ಹಿರಿಯ ನಾಗರಿಕರಿಗೆ (Senior Citizens)ಬೊಂಬಾಟ್ ಖುಷಿಯ(Good News)ಸುದ್ದಿ ನೀಡಿದೆ.

60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮೆಚ್ಯೂರಿಟಿಗೂ ಮೊದಲು ವಿತ್‌ಡ್ರಾ ಮಾಡಬಹುದಾದ ಡೆಪಾಸಿಟ್‌ಗಳ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದಾಗಿದೆ. ಮೆಚ್ಯೂರಿಟಿಗೂ( Maturity Period)ಮೊದಲೇ 400 ದಿನಗಳ ಎಫ್‌ಡಿಯನ್ನು (Fixed Deposit)ವಿತ್‌ಡ್ರಾ ಮಾಡಿದರೆ ಶೇಕಡ 7.90 ಬಡ್ಡಿದರ ಸಿಗಲಿದೆ.

Senior Citizens

ಫೆಡರಲ್ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಮೌಲ್ಯದ ವಿಶೇಷ ಫಿಕ್ಸಿಡ್ ಡೆಪಾಸಿಟ್‌ಗಳನ್ನು ಬಿಡುಗಡೆ ಮಾಡಿದೆ. ಇದು ಸುಮಾರು 400 ದಿನಗಳ ಅವಧಿಯ ಎಫ್‌ಡಿಯಾಗಿದ್ದು(FD), ಶೇಕಡ 8.15 ರಷ್ಟು ದರವನ್ನು ಈ ಎಫ್‌ಡಿಗೆ ನಿಗದಿಪಡಿಸಲಾಗಿದೆ. 400-ದಿನಗಳ ಅವಧಿಯ ಎಫ್‌ಡಿಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇಕಡ 7.65 ರಷ್ಟು ಬಡ್ಡಿದರವನ್ನು ಬ್ಯಾಂಕ್ ನೀಡಲಿದೆ. ಈ ನಡುವೆ, ಹಿರಿಯ ನಾಗರಿಕರಿಗೆ ಫೆಡರಲ್ ಬ್ಯಾಂಕ್ ಸುಮಾರು ಶೇಕಡ 8.15 ರಷ್ಟು ಬಡ್ಡಿದರವನ್ನು ನೀಡುತ್ತದೆ.

ಹಿರಿಯ ನಾಗರಿಕರು ಮೆಚ್ಯೂರಿಟಿ ಗಿಂತ ಮೊದಲೇ 13 ತಿಂಗಳ ಮತ್ತು 21 ತಿಂಗಳ ನಡುವಿನ ಅವಧಿ ಫಿಕ್ಸೆಡ್ ಡೆಪಾಸಿಟ್ ಅನ್ನು ವಿತ್‌ಡ್ರಾ ಮಾಡಲು ಇಚ್ಛಿಸಿದರೆ ಇಲ್ಲವೇ ವಿತ್‌ಡ್ರಾ ಮಾಡಿದರೆ ಶೇಕಡ 7.80 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದ್ದು, ಈ ಬಡ್ಡಿ ದರಗಳು ಅಕ್ಟೋಬರ್ 19, 2023 ರಿಂದ ಜಾರಿಗೆ ಬರಲಿವೆ. ಇದರ ಜೊತೆಗೆ, 13 ತಿಂಗಳ ಮತ್ತು 21 ತಿಂಗಳ ನಡುವಿನ ಅವಧಿಯ (400 ದಿನಗಳನ್ನು ಹೊರತುಪಡಿಸಿ) ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ಫೆಡರಲ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡ 8.05 ಬಡ್ಡಿದರ ಅದೇ ರೀತಿ ಸಾಮಾನ್ಯ ನಾಗರಿಕರಿಗೆ ಶೇಕಡ 7.55 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.

ಇದನ್ನು ಓದಿ: PMMVY Scheme: ಗರ್ಭಿಣಿ, ಬಾಣಂತಿಯರೇ ನಿಮಗೆ ಸಂತಸದ ಸುದ್ದಿ – ಈ ಯೋಜನೆಯಡಿ ನಿಮ್ಮ ಕೈ ಸೇರುತ್ತೆ 11,000 !

Leave A Reply

Your email address will not be published.