Mangaluru: ಶರಣ್ ಪಂಪ್ವೆಲ್ ವಿರುದ್ಧ ಪೊಲೀಸರ ಸ್ವಯಂ ಪ್ರೇರಿತ ದೂರಿಗೆ ಹೈಕೋರ್ಟ್ ತಡೆ !
Mangaluru: ಮಂಗಳಾದೇವಿ ದೇವಸ್ಥಾನದ ಸಂತೆ ವಿಷಯದ ಅಂಗಡಿ ವಿಚಾರದಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಕೇಸನ್ನು ದಾಖಲು ಮಾಡಿದ್ದರು. ಆದರೆ ಹೈಕೋರ್ಟ್ ಎಫ್ ಐಆರ್ ಗೆ ತಡೆಯಾಜ್ಞೆ ನೀಡಿದೆ. ಎಫ್ ಐಆರ್ ಆದ 24 ಗಂಟೆಯಲ್ಲೇ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ವರದಿಯಾಗಿದೆ.
ಅ.16ರಂದು ಮಂಗಳಾದೇವಿ ದೇವಸ್ಥಾನ ಆವರಣದಲ್ಲಿ ಹಿಂದು ವ್ಯಾಪಾರಿಗಳ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟಿದ್ದ ಶರಣ್ ಕಾರ್ಯಕರ್ತರು, ಹಿಂದೂಗಳ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವಂತೆ ಹೇಳಿದ್ದರು. ಈ ಹೇಳಿಕೆಯನ್ನು ಮಾಧ್ಯಮದ ಮುಂದೆ ಕೂಡಾ ನೀಡಿದ್ದರು.
ಮುಜರಾಯಿ ಇಲಾಖೆಯ ದೇವಸ್ಥಾನ ಪರಿಸರದಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲವೆಂಬ ನಿಯಮ ಇರುವುದರಿಂದ ಅದೇ ನೀತಿ ಅನುಸರಿಸಿ ಬಜರಂಗದಳ ನಾಯಕರು ಈ ಹೇಳಿಕೆ ನೀಡಿದ್ದರು.
ಕೇಸು ದಾಖಲಾದ ಕೂಡಲೇ, ವಕೀಲ ಅರುಣ್ ಶ್ಯಾಮ್ ಅವರು ಹೈಕೋರ್ಟಿನಲ್ಲಿ ಅಪೀಲು ಮಾಡಿದ್ದು, ನ್ಯಾಯಮೂರ್ತಿ ಟಿಜಿ ಶಿವಶಂಕರೇಗೌಡ ಅವರಿದ್ದ ಏಕಸದಸ್ಯ ಪೀಠ ಪೊಲೀಸರು ಹಾಕಿದ್ದ ಎಫ್ ಐಆರ್ ಗೆ ತಡೆ ವಿಧಿಸಿದೆ.
153 ಎ ಸೆಕ್ಷನ್ ಹಾಕುವ ಅನಿವಾರ್ಯತೆ ಕುರಿತು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡುವಂತೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.