Karnataka government: ಆಯುಧ ಪೂಜೆಯಲ್ಲಿ ಕುಂಕುಮ ಅರಶಿಣ ಬಳಸುವಂತಿಲ್ಲ- ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
Karnataka government issues notification prohibiting Hindu cultural ritual during aayudha pooja
Karnataka government: ಮೊಲಿಂದಲೂ ಕೂಡ ಕಾಂಗ್ರೆಸ್ ಸರ್ಕಾರಕ್ಕೆ ‘ಹಿಂದೂ ವಿರೋಧಿ ಸರ್ಕಾರ’ ಎಂಬ ಪಣೆಪಟ್ಟಿಯನ್ನು ಜನರು ಕಟ್ಟಿದ್ದಾರೆ. ಅಲ್ಲದೆ ಕೆಲವೊಮ್ಮೆ ಕಾಂಗ್ರೆಸ್ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳು, ಅವರ ಪ್ರಣಾಳಿಕೆಗಳು ಕೂಡ ಹಾಗೇ ಇರುತ್ತವೆ. ಅಂತೆಯೇ ಇದೀಗ ನಮ್ಮ ರಾಜ್ಯ ಸರ್ಕಾರ(Karnataka government) ಅಂತದ್ದೇ ಆದಂತಹ, ಹಿಂದೂ ಆಚರಣೆಗಳಿಗೆ ಧಕ್ಕೆ ಉಂಟುಮಾಡುವಂತಹ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದು ಹಿಂದೂ ವಿರೋಧಿ ಎಂಬ ಹಣೆಪಟ್ಟಿಗೆ, ಕೋಮುವಾದಿಗಳ ಬಾಯಿಗೆ ತುತ್ತಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಬಿಡಿ.
ನಾಡ ಹಬ್ಬ ದಸರಾವನ್ನು ಇಡೀ ರಾಜ್ಯವೇ ಸಂಭ್ರಮಿಸುತ್ತಿದೆ. ಎಲ್ಲೆಲ್ಲೂ ಸಡಗರ – ಸಂಭ್ರಮ ಮನೆಮಾಡಿದೆ. ವಿಜಯದಶಮಿಯನ್ನು ಜನ ಎದುರುನೋಡುತ್ತಿದ್ದು, ಈ ನಡುವೆ ಆಯುಧಪೂಜೆ(Ayudha pooja) ಆಚರಣೆಗೂ ಭರದ ಸಿದ್ಧತೆ ನಡೆಸಿದ್ದಾರೆ. ಆದರೆ ಈ ನಡುವೆ ಸರ್ಕಾರ ಹೊರಡಿಸಿರುವ ಆ ಒಂದು ಸುತ್ತೋಲೆ ಇಡೀ ನಾಡಿನ ಹಿಂದೂ ಬಾಂಧವರಿಗೆ ಬೇಸರವನ್ನುಂಟುಮಾಡಿದೆ. ಜೊತೆಗೆ ಆಕ್ರೋಶವನ್ನೂ ಎಬ್ಬಿಸಿದೆ.
ಹೌದು, ನಾಡಹಬ್ಬ ದಸರಾದ(Dasara) ಸಂಭ್ರಮದ ವೇಳೆ ನಡೆಯುವ ಆಯುಧ ಪೂಜೆಯ ಸಮಯದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಒಡೆಯುವ ಕುಂಬಳಕಾಯಿ ಮತ್ತು ಬಿಡಿಸುವ ರಂಗೋಲಿಗಳಲ್ಲಿ ಯಾವುದೇ ರಾಸಾಯನಿಕ ಮಿಶ್ರಿತ ಕುಂಕುಮ/ಬಣ್ಣ/ಅರಿಶಿನ/ಸುಣ್ಣವನ್ನು ಬಳಸದಂತೆ ಸರ್ಕಾರ ಆದೇಶ ನೀಡಿದೆ. ಇದು ಸದ್ಯ ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಅನೇಕರು ಹಿಂದೂ ದ್ವೇಷಿ ಸುತ್ತೋಲೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಅದರೆ ಇನ್ನೂ ವಿಚಿತ್ರ ಅಂದರೆ ಇದೇ ರೀತಿಯ, ಭಾಗಶಹ ಸಾಮಾನ್ಯವಾಗಿ ಇರುವಂತಹ ಸುತ್ತೋಲೆಯನ್ನೇ ನಮ್ಮ ಪಕ್ಕದ ತಮಿಳುನಾಡು ಸರ್ಕಾರ ಹೊರಡಿಸಿದೆ. ಇದು ಕಾಕತಾಳಿಯವೋ, ಫೂರ್ವ ಯೋಜಿತವೋ ತಿಳಿಯದು. ಆದರೆ ಸದಾ ಹಿಂದೂಭಾವನೆಗಳಿಗೆ ಧಕ್ಕೆ ತರುವ, ಹಿಂದೂಗಳ ವಿರುದ್ಧ ಮಾತನಾಡುವ ಸ್ಟ್ಯಾಲಿನ್ ಸರ್ಕಾರವು ಅದೂ ಕೂಡ ಆಯುಧ ಪೂಜೆಯ ಸಮಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹೂವುಗಳು, ಕುಂಕುಮ, ಅರಿಶಿನ ಮತ್ತು ಇತರ ಪೂಜೆ ಅಗತ್ಯ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಿ ಇಂಡಿಯಾ ಮೈತ್ರಿ ಕೂಟದ ಎರಡು ಮಿತ್ರಪಕ್ಷಗಳು ತಮಿಳುನಾಡಿನಲ್ಲಿ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಒಂದೇ ರೀತಿಯ ಸರ್ಕಾರಿ ಸುತ್ತೋಲೆಯನ್ನು ಹೊರಡಿಸಿರವುದು ವಿಚಿತ್ರ ಹಾಗೂ ಆಶ್ಚರ್ಯವಾದುದು.
ಇನ್ನು ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕೂಡ ಟ್ವೀಟ್ ಮಾಡಿದ್ದು, ‘ಎರಡು ರಾಜ್ಯ, ಎರಡು ರಾಜ್ಯ ಸರ್ಕಾರಗಳು. ಆದರೆ ಒಂದೇ ಗುರಿ ಅದು ಆಯುಧ ಪೂಜೆ. ಇಂಡಿ ಮೈತ್ರಿ ಪಕ್ಷಗಳ ನಡುವೆ ನೂರು ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅವರು ಈ ನೆಲದ ಸ್ಥಳೀಯ ಸಂಸ್ಕೃತಿಯ ಮೇಲಿನ ದ್ವೇಷ ಮತ್ತು ತಿರಸ್ಕಾರದ ವಿಚಾರದಲ್ಲಿ ಮಾತ್ರ ಖಂಡಿತವಾಗಿ ಒಂದಾಗುತ್ತಾರೆ. ಆಯುಧ ಪೂಜೆಯ ಸಮಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹೂವುಗಳು, ಕುಂಕುಮ, ಅರಿಶಿನ ಮತ್ತು ಇತರ ಪೂಜೆ ಅಗತ್ಯ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಿ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಎರಡೂ ಇಂದು ಸರ್ಕಾರಿ ಸುತ್ತೋಲೆಯನ್ನು ಹೊರಡಿಸಿದೆ. ವರ್ಷಗಳಿಂದ, ದಕ್ಷಿಣ ಭಾರತದ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಉದ್ಯೋಗಿಗಳು ಆಯುಧ ಪೂಜೆಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ಮಹತ್ವದ ಸಾಂಸ್ಕೃತಿಕ ಆಚರಣೆಗೆ ಇದೀಗ ಇಂಡಿ ಒಕ್ಕೂಟ ತನ್ನ ಟಾರ್ಗೆಟ್‌ಅನ್ನಾಗಿ ಮಾಡಿಕೊಂಡಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಸಾಕಷ್ಟು ವಿರೋಧಗಳು ಕೇಳಿಬರುತ್ತಿವೆ.
ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು,… pic.twitter.com/nsv95rMME3
— CM of Karnataka (@CMofKarnataka) October 18, 2023
ತಮ್ಮ ಸರ್ಕಾರ ಹೊರಡಿಸಿದ ಸುತ್ತೋಲೆ ರಾಜ್ಯದಲ್ಲಿ ಬೇರೆ ರೀತಿಯಲ್ಲೇ ಪ್ರಚಾರಪಡೆದುಕೊಳ್ಳುತ್ತಿದೆ ಎಂಬುದನ್ನು ಅರಿತ ಸಿಎಂ ಸಿದ್ದರಾಮಯ್ಯನವರು ‘ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಜನತೆಯಲ್ಲಿ ಮನವಿ ಮಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Ration Card: ‘ರೇಷನ್ ಕಾರ್ಡ್’ನಲ್ಲಿ ಕುಳಿತಲ್ಲೇ ಹೀಗ್ ಮಾಡಿ ಹೆಂಡ್ತಿ, ಮಕ್ಕಳ ಹೆಸರು ಸೇರಿಸಿ – ಮತ್ತೆ ಸಿಗೋದಿಲ್ಲ ಈ ಚಾನ್ಸ್