Ration Card: ‘ರೇಷನ್ ಕಾರ್ಡ್’ನಲ್ಲಿ ಕುಳಿತಲ್ಲೇ ಹೀಗ್ ಮಾಡಿ ಹೆಂಡ್ತಿ, ಮಕ್ಕಳ ಹೆಸರು ಸೇರಿಸಿ – ಮತ್ತೆ ಸಿಗೋದಿಲ್ಲ ಈ ಚಾನ್ಸ್

Ration card update add family members name in ration card in this easy way

Ration Card: ಪಡಿತರ ಚೀಟಿಯಲ್ಲಿನ(Ration Card)ಫಲಾನುಭವಿಗಳ ಮಾಹಿತಿ ತಿದ್ದುಪಡಿ ಮತ್ತು ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರಿಸಲು ಆಹಾರ ಇಲಾಖೆ ಮತ್ತೊಮ್ಮೆ ಅನುವು ಮಾಡಿಕೊಟ್ಟಿದೆ. ‘Ration Card’ ನಲ್ಲಿ ಹೆಂಡತಿ, ಮಕ್ಕಳ ಹೆಸರು ಸೇರಿಸುವುದು ಹೇಗೆ ಗೊತ್ತಾ? ಇಲ್ಲಿದೆ ಡೀಟೈಲ್ಸ್!!ಪಡಿತರ ಚೀಟಿಗಳಲ್ಲಿ ಹೆಸರುಗಳನ್ನು ಆನ್ಲೈನ್ ಮತ್ತು ಆಫ್ಲೈನ್ ನೋಂದಾಯಿಸಲು ಅವಕಾಶವಿದೆ.

ಆನ್ ಲೈನ್ ನಲ್ಲಿ ಪಡಿತರ ಚೀಟಿದಾರರ ಹೆಸರು ಬದಲಾವಣೆ ಹೀಗೆ ಮಾಡಿ:
# ಮೊದಲಿಗೆ, ನೀವು https ಗೆ ಭೇಟಿ ನೀಡಿ: https//fcs.up.gov.in/FoodPortal.aspx ವೆಬ್ಸೈಟ್ ಗೆ ಭೇಟಿ ನೀಡಿ.
# ಈ ವೆಬ್ಸೈಟ್ಗೆ ಲಾಗಿನ್ ಆದ ಬಳಿಕ ನೀವು ಈಗಾಗಲೇ ಲಾಗಿನ್ ಐಡಿ ಹೊಂದಿದ್ದರೆ, ಇದರ ಮೂಲಕ ನೀವು ಲಾಗಿನ್ ಮಾಡಿ ಕೊಳ್ಳಿ.
# ಮುಖಪುಟದಲ್ಲಿ ನಿಮಗೆ ಹೊಸ ಸದಸ್ಯರ ಹೆಸರನ್ನು ನೋಂದಾಯಿಸುವ ಆಯ್ಕೆ ಕಾಣಲಿದೆ. ಇದನ್ನು ಕ್ಲಿಕ್ ಮಾಡಿಕೊಳ್ಳಿ.
# ಇದರ ಬಳಿಕ ನಿಮಗೊಂದು ಫಾರ್ಮ್ ಓಪನ್ ಆಗಲಿದ್ದು, ಹೊಸ ಸದಸ್ಯರ ಬಗ್ಗೆ ಕೇಳಿರುವ ಎಲ್ಲಾ ದಾಖಲೆಗಳನ್ನು ಸಹ ಅಪ್ಲೋಡ್ ಮಾಡಿದ ಬಳಿಕ SUBMIT ಆಯ್ಕೆಯನ್ನು ಕ್ಲಿಕ್ ಮಾಡಿ.
# ಈ ಫಾರ್ಮ್ ಅನ್ನು ಸಲ್ಲಿಸಿದ ಬಳಿಕ ನೋಂದಣಿ ಸಂಖ್ಯೆ ಬರಲಿದ್ದು, ಈ ನೋಂದಣಿ ಸಂಖ್ಯೆಯಿಂದ ನೀವು ಈ ಫಾರ್ಮ್ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಟ್ರ್ಯಾಕ್ ಮಾಡಬಹುದಾಗಿದೆ. ಎಲ್ಲಾ ಮಾಹಿತಿಗಳು ಸರಿಯಿದ್ದರೆ ಅಂಚೆ ಮೂಲಕ ಹೊಸ ರೇಷನ್ ಕಾರ್ಡ್ ರವಾನೆಯಾಗುತ್ತದೆ.

ರೇಷನ್ ಕಾರ್ಡ್ ಅಪ್ ಡೇಟ್ ಮಾಡಲು ಬೇಕಾದ ದಾಖಲೆಗಳು ಹೀಗಿವೆ:
ಕಾರ್ಡ್ ನಲ್ಲಿ ಹೆಸರು ಸೇರ್ಪಡೆಗೆ ಆಧಾರ್ ನೊಂದಿಗೆ ಆದಾಯ ಪ್ರಮಾಣ ಪತ್ರ ನೀಡಬೇಕಿದ್ದು, ಆರು ವರ್ಷದೊಳಗಿನ ಮಕ್ಕಳ ಸೇರ್ಪಡೆಗೆ ಮೊಬೈಲ್ ನಂಬರ್ ಜೊತೆಗೆ ಜೋಡಣೆಯಾಗಿರುವ ಆಧಾರ ಸಂಖ್ಯೆ ಮತ್ತು ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ. ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರದೊಂದಿಗೆ ಮಗುವಿನ ಪೋಷಕರ ಆಧಾರ್ ಕಾರ್ಡ್ ಬೇಕಾಗುತ್ತದೆ. ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವ ಸಂದರ್ಭ ಆ ಮಹಿಳೆಯ ಆಧಾರ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ.

ಆಫ್ ಲೈನ್ ಮೂಲಕ ಹೆಸರು ಸೇರಿಸುವುದು ಹೇಗೆ..?

# ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಹೆಸರು ನೋಂದಾಯಿಸಲು ಆಹಾರ ಇಲಾಖೆಯ ಕಚೇರಿಗೆ ತೆರಳಿ ಫಾರ್ಮ್ ಪಡೆಯಬೇಕಾಗುತ್ತದೆ.
# ಈ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿಸಬೇಕು. ಅಗತ್ಯ ದಾಖಲೆಗಳ ಜೊತೆಗೆ ಆಹಾರ ಇಲಾಖೆ ಕೇಂದ್ರಕ್ಕೆ ಸಲ್ಲಿಸಿ, ರಸೀದಿಯನ್ನು ಪಡೆದುಕೊಳ್ಳಿ.
# ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹೊಸ ಪಡಿತರ ಚೀಟಿಯನ್ನು ಪಡೆಯಬಹುದು.

ಇದನ್ನೂ ಓದಿ: Ration Card Holder: ರೇಷನ್ ಕಾರ್ಡ್’ನಲ್ಲಿ ನಿಮ್ಮ ಹೆಸರು ಸೇರಿದೆಯಾ ಎಂದು ಈಗಲೇ ಚೆಕ್ ಮಾಡಿ !! ತಿದ್ದುಪಡಿ ಸಮಯ ಮುಗಿಯಲು ಶುರುವಾಗಿದೆ ಕ್ಷಣಗಣನೆ

Leave A Reply

Your email address will not be published.