Karnataka government: ರಾಜ್ಯದ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ – ರಾಜ್ಯ ಸರ್ಕಾರ ಮಾಡ್ತು ಮಹತ್ವದ ನಿರ್ಧಾರ

good news for the motorists of the state

Karnataka government: ಇಂದು ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಪರ್ವ ಶುರುವಾಗಿದೆ ಅಂದರೆ ಎಲೆಕ್ಟ್ರಿಕ್ ಕಾರುಗಳು, ಎಲೆಕ್ಟ್ರಿಕ್ ಬೈಕುಗಳು, ಎಲೆಕ್ಟ್ರಿಕ್ ಸ್ಕೂಟರ್ ಗಳು ರಸ್ತೆಗೆ ಭಾರೀ ಹವಾ ಕ್ರಿಯೆಟ್ ಮಾಡುತ್ತಿದ್ದಾರೆ. ಜನರೆಲ್ಲರೂ ಅವುಗಳ ಹಿಂದೆ ಮುಗಿಬೀಳುತ್ತಿದ್ದಾರೆ. ಇದೀಗ ಈ ಕುರಿತು ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರ(Karnataka government)ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಹೌದು, ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಸಮರ್ಪಕ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಬಹಳ ಒತ್ತು ನೀಡುತ್ತಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ರಾಜ್ಯವು ಈಗಾಗಲೇ ಈ ಕ್ಷೇತ್ರದಲ್ಲಿ 25 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಆಕರ್ಷಿಸಿದೆ. ಮುಂದೊಂದು ದಿನ ಎಲ್ಲವೂ ಎಲೆಕ್ಟ್ರಿಕ್ ಮಯವಾದರೂ ಆಶ್ಚರ್ಯವೇನಿಲ್ಲ. ಇದೀಗ ಈ ವಿಚಾರವಾಗಿ ರಾಜ್ಯದ ಜನತೆಗೆ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್‌ ಸಂತಸದ ಸುದ್ದಿ ನೀಡಿದ್ದಾರೆ.

ಅಂದಹಾಗೆ ಕೆಂಗೇರಿ ಸಮೀಪದ ಮೈಲಸಂದ್ರದಲ್ಲಿರುವ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿ ಸ್ಥಾಪಿಸಿರುವ ಜಾಗತಿಕ ಮಟ್ಟದ ವಿದ್ಯುತ್ ಚಾಲಿತ ವಾಹನಗಳ ಉತ್ಕೃಷ್ಟತಾ ಮತ್ತು ನಾವೀನ್ಯತಾ ಕೇಂದ್ರವನ್ನು ಅಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು ಕರ್ನಾಟಕ ಇ.ವಿ. ಕ್ಷೇತ್ರದಲ್ಲಿ ದೇಶಕ್ಕೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ರಾಜ್ಯವು 2017ರಲ್ಲಿ ಇಡೀ ದೇಶದಲ್ಲಿ ಮೊದಲ ಬಾರಿಗೆ ವಿದ್ಯುತ್‌ ಚಾಲಿತ ವಾಹನಗಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮರ್ಪಕ ನೀತಿಯನ್ನು ಜಾರಿಗೊಳಿಸಿತು. 2021ರಲ್ಲಿ ಆ ನೀತಿಯನ್ನು ಜಾಗತಿಕ ಮಟ್ಟದ ಅಗತ್ಯಕ್ಕೆ ಅನುಸಾರ ಪರಿಷ್ಕರಿಸಲಾಯಿತು ಎಂದು ಹೇಳಿದ್ದಾರೆ.

ಅಲ್ಲದೆ ರಾಜ್ಯದ ನೀತಿಯು ಇ.ವಿ. ಬ್ಯಾಟರಿ ಉತ್ಪಾದನೆ, ಬಿಡಿಭಾಗಗಳ ತಯಾರಿಕೆ, ಒಇಎಂ (ಒರಿಜನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್ಸ್), ಚಾರ್ಜಿಂಗ್ ಮತ್ತು ಪರೀಕ್ಷಾರ್ಥ ಮೂಲ ಸೌಲಭ್ಯ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಯಾಗುತ್ತಿದೆ. ಈಗಾಗಲೇ 25 ಸಾವಿರ ಕೋಟಿ ರು. ಹೂಡಿಕೆಯನ್ನು ಈ ಕ್ಷೇತ್ರ ಆಕರ್ಷಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ 15 ಸಾವಿರ ಕೋಟಿ ರು. ಹೂಡಿಕೆಯಾಗುವ ಸಾಧ್ಯವಿದೆ ಎಂದು ಗುಡ್ ನ್ಯೂಸ್ ನೀಡಿದ್ದಾರೆ.

 

ಇದನ್ನು ಓದಿ: ಸಿನಿಮಾ ನಟಿಯಿಂದ ಬಂತೊಂದು ಸ್ಪೆಷಲ್ ಟ್ವೀಟ್- ತಮಿಳು ನಾಡು ‘ಕಮಲ’ ಪಾಳಯದಲ್ಲಿ ಶುರುವಾಯ್ತು ಹೊಸ ಸಂಚಲನ

Leave A Reply

Your email address will not be published.