Congress Government: ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್, ಈ ಸಮುದಾಯದವರಿಗೆ 12 ಲಕ್ಷ ನೆರವು – ಮತ್ತೆ ಬಂಪರ್ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್

Assembly election 2023 Congress announced guarantee of scooter for girl students and 12 lakhs for SCST

Congress guarantee: ಪಂಚ ಗ್ಯಾರಂಟೀ ಸೂತ್ರದ ಮೂಲಕ ಚುನಾವಣೆಯಲ್ಲಿ ಗೆದ್ದು ಜಯಭೇರಿ ಬಾರಿಸಿದ ಕಾಂಗ್ರೆಸ್ ಇದೇ ಮಾದರಿಯನ್ನು ಕಾಂಗ್ರೆಸ್(Congress)ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಳವಡಿಸುವ ಯೋಜನೆ ಹಾಕಿಕೊಂಡಿದೆ.

ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪ್ರಚಾರ ಕಾರ್ಯ ಆರಂಭ ಮಾಡಿದ್ದು, ಈ ನಡುವೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyankha Gandhi) ‘ಅಂಬೇಡ್ಕರ್‌ ಅಭಯ ಹಸ್ತ ಯೋಜನೆ ಅಡಿಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 12 ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವು ನೀಡುವ ಮೂಲಕ ಎಸ್‌ಸಿ ಸಮುದಾಯಕ್ಕೆ ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ.18ಕ್ಕೆ ಅದೇ ರೀತಿ, ಎಸ್‌ಟಿ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಲಾಗುವ ಕುರಿತು ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ,18 ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ (Electric Scooter)ನೀಡುವುದಾಗಿ ಕಾಂಗ್ರೆಸ್ ಸರ್ಕಾರ(Congress Government)ಮಹತ್ವದ ಘೋಷಣೆ ಮಾಡಿದೆ.

ಪ್ರತಿಯೊಂದು ಅಡವಿ ಗ್ರಾಮ ಪಂಚಾಯತ್‌ಗಳಿಗೆ 25 ಲಕ್ಷ ರು. ಆರ್ಥಿಕ ನೆರವು ಕಲ್ಪಿಸುವ,1 ವರ್ಷದಲ್ಲಿ 2 ಲಕ್ಷ ನೇಮಕಾತಿ ಪ್ರಕ್ರಿಯೆ ನಡೆಸಲಾಗುವ ಕುರಿತು ಕಾಂಗ್ರೆಸ್ (Congress guarantee)ಮಾಹಿತಿ ನೀಡಿದೆ. ಇದಲ್ಲದೇ, ನಿರುದ್ಯೋಗಿಗಳಿಗೆ 4 ಸಾವಿರ ರು. ಮಾಸಿಕ ಭತ್ಯೆ, ಹುತಾತ್ಮರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ, ಗಲ್ಫ್‌ (Galf) ದೇಶಗಳಲ್ಲಿ ಯುವಕರಿಗೆ ಕೆಲಸ ಒದಗಿಸಿಕೊಡುವ ಆಶ್ವಾಸನೆ, ಅದೇ ರೀತಿ ಗಲ್ಫ್‌ ಸೆಂಟರ್‌ ಸ್ಥಾಪನೆ ಮಾಡುವುದಾಗಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Fashion Brand: ಯಾವಾಗ್ಲೂ ಬ್ರಾಂಡೆಡ್ ಆದ, ತುಂಬಾ ಬೆಲೆಬಾಳೋ ವಸ್ತುಗಳನ್ನು ಕೊಂಡುಕೊಳ್ತೀರಾ ?! ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ

Leave A Reply

Your email address will not be published.