7th Pay Commission: ಸರ್ಕಾರಿ ನೌಕರರ ಗಮನಕ್ಕೆ- ಮನೆ ಬಾಡಿಗೆ ಮತ್ತು ಇತರ ಭತ್ಯೆ ಏರಿಕೆ ಬಗ್ಗೆ ಇಲ್ಲಿದೆ ನೋಡಿ ಬಿಗ್ ಅಪ್ಡೇಟ್

7th Pay Commission latest updates KSGEA Demand For House Rent Allowance news

7th Pay Commission: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ(7th Pay Commission) ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವರದಿಯನ್ನು ಸಲ್ಲಿಸಿದ್ದು, ಈ ವರದಿಯಲ್ಲಿ ವಿವಿಧ ಭತ್ಯೆಗಳನ್ನು ಕಾಲಕ್ಕೆ ಅನುಗುಣವಾಗಿ ಪರಿಷ್ಕರಣೆ ಮಾಡಬೇಕೆಂದು ಬೇಡಿಕೆ ಇಡಲಾಗಿದೆ.

7ನೇ ರಾಜ್ಯ ವೇತನ ಆಯೋಗ ನವೆಂಬರ್‌ ತಿಂಗಳಿನಲ್ಲಿ ಕರ್ನಾಟಕ ಸರ್ಕಾರಕ್ಕೆ ವರದಿ ನೀಡುವ ನಿರೀಕ್ಷೆಯಿದ್ದು, ಮನೆ ಬಾಡಿಗೆ ಸೇರಿ ಇತರೆ ಭತ್ಯೆಗಳ ಹೆಚ್ಚಳಕ್ಕೆ (7th Pay Commission KSGEA Demand For House Rent Allowance)ಸಂಘ ಮುಂದಿಟ್ಟಿರುವ ಬೇಡಿಕೆಗಳ ವಿವರ ಹೀಗಿದೆ:

ಉಪ ಕಾರ್ಯದರ್ಶಿ ವೃಂದಗಳಿಗೆ ಅಲ್ಪ ಉಪಹಾರ ಭತ್ಯೆ (Sumputuary Allowance)ಪ್ರಸ್ತುತ ವಾರ್ಷಿಕ ರೂ. 10000 ಗಳಿದ್ದು, ಜಂಟಿ ಕಾರ್ಯದರ್ಶಿ ಮೇಲ್ಪಟ್ಟ ವೃಂದದ ಅಧಿಕಾರಿಗಳಿಗೆ ಪ್ರಸ್ತುತ ವಾರ್ಷಿಕ ರೂ. 12,500 ಗಳಿದ್ದು ಅದನ್ನು ಮಾಸಿಕ ರೂ. 3000 ಗಳಿಗೆ ನಿಗದಿ ಮಾಡಲು ಮನವಿ ಸಲ್ಲಿಸಲಾಗಿದೆ. ಸದ್ಯ, ಸರ್ಕಾರವು ಎಲ್ಲಾ ಗ್ರೂಪ್ ‘ಎ’ ವೃಂದಕ್ಕೆ ರೂ. 40 ಲಕ್ಷಗಳು, ಗ್ರೂಪ್ ‘ಬಿ’ & ಕೆಳಮಟ್ಟದ ನೌಕರರಿಗೆ ಗರಿಷ್ಠ ರೂ. 25 ಲಕ್ಷಗಳ ಗೃಹ ನಿರ್ಮಾಣ ಮುಂಗಡವನ್ನು ಮಂಜೂರು ಮಾಡುತ್ತಿದೆ. ಗೃಹ ನಿರ್ಮಾಣ ಮುಂಗಡವನ್ನು ಹೆಚ್ಚಿಸುವುದರಿಂದ ಸರ್ಕಾರಕ್ಕೆ ಸರ್ಕಾರಿ ವಸತಿ ಗೃಹ (Government Quarters)ಗಳ ನಿರ್ವಹಣಾ ವೆಚ್ಚದಲ್ಲಿ ಉಳಿತಾಯವಾಗಲಿದೆ.

ಕೇಂದ್ರ ಸರ್ಕಾರದ ಮಾದರಿಯಲ್ಲಿ Leave Travel Concession ರಜೆ ಪ್ರಯಾಣ ರಿಯಾಯಿತಿಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು ಎಂದು ವರದಿಯಲ್ಲಿ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಮಕ್ಕಳ ಶಿಕ್ಷಣ ಭತ್ಯೆ (Children’s Education Allowance)ತಿಂಗಳಿಗೆ ರೂ.2,250 + ಹಾಸ್ಟೆಲ್ ಸಬ್ಸಿಡಿ ರೂ. 6,750 (ಎರಡು ಮಕ್ಕಳಿಗೆ) ನೀಡುತ್ತಿರುವ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.ಕರ್ನಾಟಕ ಆರೋಗ್ಯ ಜ್ಯೋತಿ ಸಂಜೀವಿನಿ ಯೋಜನೆಯನ್ನು (Cash less Treatment) ನೌಕರರ ಹಿತದೃಷ್ಟಿಯಿಂದ ಶೀಘ್ರವಾಗಿ ಜಾರಿ ಮಾಡಬೇಕೆಂದು ಬೇಡಿಕೆ ಸಲ್ಲಿಸಲಾಗಿದೆ.

Home Rent Allowance (ಮನೆ ಬಾಡಿಗೆ ಭತ್ಯೆ) ತುಟ್ಟಿ ಭತ್ಯೆ ಶೇ.50% ಮೀರಿದ ಬಳಿಕ ಸ್ವಯಂ ಚಾಲಿತವಾಗಿ ನಗರ ಶ್ರೇಣಿಗೆ ಅನುಸಾರವಾಗಿ ಶೇ.3%, ಶೇ.2% ಹಾಗೂ ಶೇ.1% ಕೇಂದ್ರ ಸರ್ಕಾರಿ ನೌಕರರಿಗೂ ಹೆಚ್ಚಳವಾಗುವಂತೆ ಪರಿಷ್ಕರಣೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ವಾಹನ ತೆರಿಗೆ ವಿನಾಯಿತಿ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವಾಹನ ತೆರಿಗೆ ವಿನಾಯಿತಿ ನೀಡಬೇಕು. ಉಪ ಕಾರ್ಯದರ್ಶಿ ಮೇಲ್ಪಟ್ಟ ವೃಂದದ ಅಧಿಕಾರಿಗಳಿಗೆ ಗೃಹ ಪರಿಚಾರಕ ಭತ್ಯೆಯನ್ನು ಕನಿಷ್ಠ ರೂ.11,000ಗಳಿಗೆ ನಿಗದಿಪಡಿಸಲು ಮನವಿ ಮಾಡಲಾಗಿದೆ.

ಸರ್ಕಾರವು ಪ್ರಸ್ತುತ Market Borrowings ಮೂಲಕ ಸುಮಾರು ಶೇ.8ರ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಲು ಗೃಹ ನಿರ್ಮಾಣ ಮುಂಗಡದ ಬಡ್ಡಿ ದರವು ಶೇ.8.5 ಇರುವುದರಿಂದ ಹೆಚ್ಚಿಸಿದ ಗೃಹ ನಿರ್ಮಾಣ ಮುಂಗಡದಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯದ ಮೂಲವಾಗುತ್ತದೆ ಎಂದು ವಿವರಣೆ ನೀಡಲಾಗುತ್ತದೆ. ಪ್ರಸ್ತುತ ನಿಗದಿಪಡಿಸಿರುವ ಗೃಹ ನಿರ್ಮಾಣ ಮುಂಗಡವನ್ನು ಪರಿಷ್ಕರಿಸಿ ಅಖಿಲ ಭಾರತೀಯ ಸೇವೆಯ ಅಧಿಕಾರಿಗಳಿಗೆ ರೂ. 1 ಕೋಟಿ, ರಾಜ್ಯ ಆಡಳಿತ ಸೇವೆಗಳು ಮತ್ತು ರಾಜ್ಯದ ಎಲ್ಲಾ ಗ್ರೂಪ್ -ಎ ವೃಂದದ ಅಧಿಕಾರಿಗಳಿಗೆ ರೂ. 75 ಲಕ್ಷಗಳು ಮತ್ತು ಗ್ರೂಪ್ ಬಿ & ಸಿ ವೃಂದದ ನೌಕರರಿಗೆ ರೂ.50 ಲಕ್ಷಗಳವರೆಗೆ ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದಾರೆ.

 

ಇದನ್ನು ಓದಿ: Dakshina Kannada: ಶರಣ್ ಪಂಪ್‌ವೆಲ್ ವಿರುದ್ಧ ದಾಖಲಾದ FIR : ಬಜರಂಗದಳ ಖಂಡನೆ

Leave A Reply

Your email address will not be published.