Question Paper: ‘ಅಳಲು ಅನುಮತಿ ಇದೆ, ಆದರೆ ಸದ್ದು ಬಾರದಂತೆ ಅಳಬೇಕು’ !! ಅರೆ.. ಏನಿದು ವಿಚಿತ್ರ ಪ್ರಶ್ನೆ ಪತ್ರಿಕೆ ?!
Viral photo news Crying is allowed but do it quietly exam instruction goes viral
Exam instruction Viral photo: ಸಾಮಾನ್ಯವಾಗಿ ನಾವೆಲ್ಲ ಪ್ರಶ್ನೆ ಪತ್ರಿಕೆಗಳನ್ನು ನೋಡಿರುತ್ತೇವೆ. ಶಾಲಾ ಕಾಲೇಜು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (Exams) ವಿದ್ಯಾರ್ಥಿಗಳಿಗೆ (Students)ನೀಡಲಾಗುವ ಪ್ರಶ್ನೆ ಪತ್ರಿಕೆಯ ಮೊದಲ ಪುಟ ನೀವು ಗಮನಿಸಿದರೆ, ಕೆಲವೊಂದು ಅಗತ್ಯ ಸೂಚನೆಗಳನ್ನು ಇಲ್ಲವೇ ಮಾರ್ಗದರ್ಶಿಗಳನ್ನು( Exam instruction ) ನೀಡಿರುವುದು ಸಹಜ. ಆದರೆ ಸದ್ಯ, ಪ್ರಶ್ನೆ ಪತ್ರಿಕೆಯೊಂದು(Question Paper Viral Photo) ವೈರಲ್ ಆಗಿದ್ದು, ಇದರಲ್ಲಿ ಅಡಕವಾಗಿರುವ ಸಂಗತಿಗಳು ಭಾರೀ ಕುತೂಹಲ ಮೂಡಿಸಿದೆ.
ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಉತ್ತರ ಬರೆಯಲು, ಅದೇ ರೀತಿ ಪ್ರಶ್ನೆ ಪತ್ರಿಕೆಯು ಮೂರು ವಿಭಾಗಗಳನ್ನು ಒಳಗೊಂಡಿದೆ. ಪ್ರತಿ ಪ್ರಶ್ನೆಗೆ ನಮೂದಿಸಲಾದ ಅಂಕಗಳನ್ನು ಪ್ರಶ್ನೆ ಪತ್ರಿಕೆಯ ಕೊನೆಯಲ್ಲಿ ಒದಗಿಸಲಾಗಿದೆ . ಹೀಗೆ ಪ್ರಶ್ನೆ ಪತ್ರಿಕೆಯ ಮೇಲೆ ಕೆಲ ಅಗತ್ಯ ಮಾರ್ಗದರ್ಶಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಆದರೆ, ಇಲ್ಲೊಂದು ಪ್ರಶ್ನೆ ಪತ್ರಿಕೆಯಲ್ಲಿ ಅಳುವುದಕ್ಕೆ ಅನುಮತಿಯಿದೆ, ಆದರೆ ಸದ್ದಿಲ್ಲದೆ ಅಳಬೇಕು ಎಂಬ ಸೂಚನೆಯನ್ನು ನೀಡಲಾಗಿದೆ. ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ಬ್ಯಾಚ್ ಪ್ರಶ್ನೆ ಪತ್ರಿಕೆಯಲ್ಲಿ ಈ ಮಾರ್ಗದರ್ಶಿಯನ್ನು ನೀಡಲಾಗಿದೆ ಎನ್ನಲಾಗಿದ್ದು, ಅಳುವುದಕ್ಕೆ ಅವಕಾಶವಿದೆ. ಆದರೆ ದಯವಿಟ್ಟು ಸದ್ದಿಲ್ಲದೆ ಅಳಬೇಕಾಗಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಕಣ್ಣೀರು ಒರೆಸಬಾರದೆಂದು” ಸೂಚನೆ ನೀಡಲಾಗಿದೆ.ಈ ಮಾರ್ಗದರ್ಶಿಯನ್ನು ಒಳಗೊಂಡಿರುವ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ, ವೈರಲ್ ಪೋಸ್ಟ್ ಗೆ ತರಹೇವಾರಿ ಕಾಮೆಂಟ್ಸ್ ಗಳು ಹರಿದು ಬರುತ್ತಿದ್ದು, ಕೆಲವರು ಇದನ್ನು ಕಂಡು ನಕ್ಕರೆ, ಮತ್ತೆ ಕೆಲವರು ಪ್ರಶ್ನೆ ಪತ್ರಿಕೆ ಬಹಳ ಕಷ್ಟವಿರಬೇಕು ಎಂದು ಅಂದಾಜಿಸಿದ್ದಾರೆ.