Signature Analysis: ನಿಮ್ಮ ‘ಸಹಿ’ ಈ ರೀತಿ ಇದೆಯಾ?! ಹಾಗಿದ್ರೆ ಸಮಾಜದಲ್ಲಿ ನೀವು ಎತ್ತರಕ್ಕೇರುವುದು ಪಕ್ಕಾ !!
Astrology news signature analysis if those who people sign like this they get high position in society
Signature Analysis: ಪ್ರತಿಯೊಬ್ಬ ಮನುಷ್ಯನ ಗುಣ ವಿಭಿನ್ನವಾಗಿರುತ್ತದೆ. ಆತನ ಮಾತಿರಬಹುದು ಅಥವಾ ಬರವಣಿಗೆ ಇರಬಹುದು. ಹೀಗೆ ನಾನಾ ವಿಧಗಳಲ್ಲಿ ಆತನ ವ್ಯಕ್ತಿತ್ವ ಅಡಗಿರುತ್ತವೆ. ಇನ್ನು ಸಹಿಯ ಮೂಲಕ ಸಹ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥ (Signature Analysis)ಮಾಡಿಕೊಳ್ಳಬಹುದು. ಇಬ್ಬರು ವ್ಯಕ್ತಿಗಳ ಹೆಸರು ಒಂದೇ ಇದ್ದರೂ ಸಹ, ಒಬ್ಬರು ಸಹಿ ಹಾಕಿದಂತೆ, ಇನ್ನೊಬ್ಬರು ಸಹಿ ಹಾಕುವುದಿಲ್ಲ. ಅವರು ಬರೆಯುವ ಅಕ್ಷರದ ವಿಧಾನ ಹಾಗೂ ಬರವಣಿಗೆ ಬಹಳ ವಿಭಿನ್ನವಾಗಿರುತ್ತದೆ. ಹಾಗಾದ್ರೆ ನಿಮ್ಮ ಸಹಿ ಯಾವ ರೀತಿ ಇದೆ ಹಾಗೂ ಅದರ ರಹಸ್ಯವೇನು ಎಂಬುದು ಇಲ್ಲಿದೆ.
ಸಹಿ ಹಾಕುವಾಗ ಅಕ್ಷರವು ದೊಡ್ಡದಾಗಿ ಬರೆದು, ಉಳಿದ ಅಕ್ಷರಗಳನ್ನು ಚಿಕ್ಕದಾಗಿ ಬರೆದರೆ ಅವರು ಶ್ರಮವಹಿಸಿ ದುಡಿದರೆ ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂದರ್ಥ. ಹಾಗೆಯೇ, ಸಹಿ ಹಾಕುವಾಗ ಪೆನ್ ಮೇಲೆ ಜಾಸ್ತಿ ಒತ್ತಡ ಹಾಕಿದರೆ ಹೆಚ್ಚು ಹಣ ಸಂಪಾದಿಸಬಹುದು ಎಂದರ್ಥ.
ಇನ್ನು ತಮ್ಮ ಹೆಸರಿನಿಂದ ಭಿನ್ನವಾಗಿ ಸಹಿ ಮಾಡುವವರು ತಮ್ಮ ಬಗ್ಗೆ ಅನೇಕ ಸಂಗತಿಗಳನ್ನು ಮರೆಮಾಚುತ್ತಾರೆ. ಈ ರೀತಿಯ ಜನರು ಇತರರಿಗಿಂತ ವೇಗವಾಗಿ ಮತ್ತು ಚುರುಕಾಗಿ ಇರಲು ಬಯಸುತ್ತಾರೆ. ಯಾರೊಂದಿಗೂ ಸರಿಯಾಗಿ ಮಾತನಾಡುವುದಿಲ್ಲ ಮತ್ತು ಇತರರು ಏನು ಹೇಳುತ್ತಾರೆಂದು ಸಹ ಗಮನಿಸುವುದಿಲ್ಲ.
ಮುದ್ರಿತ ಪತ್ರಗಳಂತೆ ಸಹಿ ಮಾಡುವ ಜನರು ತುಂಬಾ ಸಹಾನುಭೂತಿ ಹೊಂದಿರುತ್ತಾರೆ. ಇವರು ಹೆಚ್ಚು ಯೋಚಿಸುತ್ತಾರೆ ಮತ್ತು ಬೇಗನೆ ಕೋಪಗೊಳ್ಳುತ್ತಾರೆ. ತಮ್ಮ ಕುಟುಂಬ ಸದಸ್ಯರನ್ನು ಉಳಿಸಲು ತಮ್ಮನ್ನು ತಾವು ತ್ಯಾಗಮಾಡಲು ಸಹ ಸಿದ್ಧರಾಗಿರುತ್ತಾರೆ.
ಇನ್ನು ಹೆಸರಿನ ಮೊದಲ ಅಕ್ಷರವನ್ನು ಸಾಂಕೇತಿಕ ರೂಪದಲ್ಲಿ ಮತ್ತು ಉಪನಾಮವನ್ನು ಪೂರ್ಣವಾಗಿ ಬರೆಯುವವರು ದೇವರನ್ನು ನಂಬುತ್ತಾರೆ. ತಮ್ಮ ಗುರುತನ್ನು ಮರೆಮಾಡಲು ಬಯಸುತ್ತಾರೆ ಮತ್ತು ಯಾವಾಗಲೂ ಇತರರಿಗಿಂತ ತಮ್ಮನ್ನು ತಾವು ಉತ್ತಮವೆಂದು ಪರಿಗಣಿಸುತ್ತಾರೆ.
ಸ್ಪಷ್ಟವಾಗಿ ಸಹಿ ಮಾಡಿ ಅದರ ಕೆಳಗೆ ರೇಖೆಯನ್ನು ಎಳೆಯುವ ಮತ್ತು ಕೊನೆಯಲ್ಲಿ ಚುಕ್ಕೆ ಹಾಕುವ ಜನರು ಸಾಮಾಜಿಕವಾಗಿ ಗೌರವಾನ್ವಿತ ಮತ್ತು ಶುದ್ಧ ಹೃದಯವಂತರಾಗಿರುತ್ತಾರೆ. ಇಂತಹ ಜನರು ಶಿಕ್ಷಕರು, ವಿಜ್ಞಾನಿಗಳು, ಸಂಪಾದಕರು ಇತ್ಯಾದಿ.
ಸಹಿಯ ಕೆಳಗೆ ಒಂದು ಗೆರೆ ಮತ್ತು 2 ಚುಕ್ಕೆಗಳನ್ನು ಎಳೆಯುವವರು ತಮ್ಮ ಕುಟುಂಬ ಜೀವನದಲ್ಲಿ ಅತೃಪ್ತಿ ಹೊಂದಿರುತ್ತಾರೆ. ಅವರು ಅನೇಕ ರೀತಿಯ ವ್ಯಾಪಾರ ಮತ್ತು ಉದ್ಯೋಗಗಳನ್ನು ಮಾಡುತ್ತಾರೆ ಮತ್ತು ಒಂದೇ ಸ್ಥಳದಲ್ಲಿ ಉಳಿಯಲು ಬಯಸುವುದಿಲ್ಲ.
ಮುಖ್ಯವಾಗಿ ಮಧ್ಯದಲ್ಲಿ ಬ್ರೇಕ್ ಮಾಡಿದ ಸಹಿಯು ವ್ಯಕ್ತಿಯ ವಿಫಲ ಜೀವನವನ್ನು ಸೂಚಿಸುತ್ತದೆ, ಆದ್ದರಿಂದ ಸಹಿಯನ್ನು ಎಂದಿಗೂ ಬ್ರೇಕ್ ಮಾಡಬಾರದು. ಇನ್ನು ಕೆಲವರು ಸಹಿ ಹಾಕುವ ಹೆಚ್ಚು ಚಿಂತೆ ಮಾಡುವುದಿಲ್ಲ. ಒಟ್ಟಾರೆ ಹಾಕಬೇಕು ಎಂದು ಹಾಕುತ್ತಾರೆ. ಈ ರೀತಿಯ ವ್ಯಕ್ತಿಗಳು ಹಣದ ವಿಚಾರದಲ್ಲಿ ಮಿಶ್ರಫಲವನ್ನು ಅನುಭವಿಸುತ್ತಾರೆ. ಆದರೆ ಆರೋಗ್ಯ ಮಾತ್ರ ಪದೇ ಪದೇ ಹಾಳಾಗುತ್ತದೆ.