SBI Sukanya Samriddhi Yojana: ಮನೆ ಮಗಳ ಹೆಸರಲ್ಲಿ ಈಗಲೇ ಇದೊಂದು ಖಾತೆ ತೆರೆಯಿರಿ – ಭವಿಷ್ಯದಲ್ಲಿ ಯಾವುದೇ ಕಷ್ಟ ಅನುಭವಿಸದಿರಿ !!

SBI Sukanya Samriddhi Yojana helps to get money for daughters future

SBI Sukanya Samriddhi Yojana: ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು(Sukanya Samriddhi Yojana) ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಮಗಳ ವಿದ್ಯಾಭ್ಯಾಸ ಮತ್ತು ಮದುವೆಯ ಖರ್ಚು ವೆಚ್ಚಗಳ ಕುರಿತು ನೀವು ಚಿಂತಿತರಾಗಿದ್ದರೆ, ನಿಮಗೆ ಬಿಗ್ ರಿಲೀಫ್ ನೀಡುವ ಸುದ್ದಿ ಇಲ್ಲಿದೆ ನೋಡಿ!! ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಗ್ರಾಹಕರಿಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿ(SBI Sukanya Samriddhi Yojana)ಖಾತೆ ತೆರೆಯುವ ಅವಕಾಶ ಕಲ್ಪಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ತನ್ನ ಅಧಿಕೃತ ಟ್ವೀಟ್‌ನಲ್ಲಿ ಇಂದಿನ ಕಾಲದಲ್ಲಿ ನಿಮ್ಮ ಮಗಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಸುಲಭದ ಮಾತಲ್ಲ!! ಆದರೆ, ಇಂದೇ ನಿಮ್ಮ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಎಸ್‌ಬಿಐ ಮೂಲಕ ಸುಲಭವಾಗಿ ಮಾಡಬಹುದು ಎಂದು ಟ್ವೀಟ್ ಮಾಡಿದೆ.

* ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು.
* ಪೋಷಕರು ಗರಿಷ್ಠ 2 ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಅವಕಾಶವಿದೆ.
* ಅವಳಿ ಇಲ್ಲವೇ ತ್ರಿವಳಿ ಮಕ್ಕಳು ಒಟ್ಟಿಗೆ ಜನಿಸಿದರೆ, ಮೂರನೇ ಮಗುವೂ ಪ್ರಯೋಜನವನ್ನು ಪಡೆಯಬಹುದು.
* ಈ ಸರ್ಕಾರಿ ಯೋಜನೆಯಲ್ಲಿ ಕನಿಷ್ಠ 250 ರೂಪಾಯಿಯಿಂದ ಗರಿಷ್ಠ 1.5 ಲಕ್ಷದವರೆಗೆ ವಾರ್ಷಿಕವಾಗಿ ಹೂಡಿಕೆ ಮಾಡಬಹುದು.
* ನಿಮ್ಮ ಮಗಳಿಗೆ 10 ವರ್ಷ ತುಂಬುವ ಮೊದಲಿಗೆ ಈ ಖಾತೆಯನ್ನು ತೆರೆಯಬಹುದು.
* ಖಾತೆಯನ್ನು ತೆರೆಯುವ ಆರಂಭಿಕ ವರ್ಷಗಳಲ್ಲಿ ಖಾತೆಗೆ ಹಣವನ್ನು ಠೇವಣಿ ಮಾಡಬೇಕಾಗಿದ್ದು, ನಿಮ್ಮ ಮಗಳಿಗೆ 21 ವರ್ಷವಾದ ಸಂದರ್ಭ ಮೆಚ್ಯುರಿಟಿ ಮೊತ್ತ ಸಿಗಲಿದೆ.
* 18 ವರ್ಷದ ಬಳಿಕ ಮಗಳ ಮದುವೆಗೆ ಹಣವನ್ನು ಹಿಂಪಡೆಯಲು ಅವಕಾಶವಿದೆ. ಇದಲ್ಲದೆ, 18 ವರ್ಷ ವಯಸ್ಸಿನ ಬಳಿಕ, ನಿಮ್ಮ ಮಗಳ ಶಿಕ್ಷಣಕ್ಕಾಗಿ ಕೂಡಾ ಶೇಕಡಾ 50 ರಷ್ಟು ಹಣವನ್ನು ಹಿಂಪಡೆಯಬಹುದು.

ಎಸ್‌ಬಿಐನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ ?
ನೀವು ಮೊದಲಿಗೆ, ಎಸ್‌ಬಿಐನ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿಕೊಳ್ಳಿ. ಆ ಬಳಿಕ ಸರ್ವಿಸ್ ಟ್ಯಾಬ್ ಅನ್ನು ಕ್ಲಿಕ್ ಮಾಡಿಕೊಂಡು ಸುಕನ್ಯಾ ಸಮೃದ್ಧಿ ಓಪನಿಂಗ್ (By Visiting Branch)ಮೇಲೆ ಕ್ಲಿಕ್ ಮಾಡಿ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯಲು ಅರ್ಜಿದಾರರು ತಮ್ಮ ಮಗಳ ಜನನ ಪ್ರಮಾಣಪತ್ರವನ್ನು ಅಂಚೆ ಕಚೇರಿ ಇಲ್ಲವೇ ಬ್ಯಾಂಕ್‌ಗೆ ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. ಮಗು ಮತ್ತು ಪೋಷಕರ ಗುರುತಿನ ಚೀಟಿ (ಪ್ಯಾನ್ ಕಾರ್ಡ್, ಪಡಿತರ ಚೀಟಿ, ಚಾಲನಾ ಪರವಾನಗಿ, ಪಾಸ್‌ಪೋರ್ಟ್) ಮತ್ತು ನಿವಾಸದ ಪುರಾವೆ (ಪಾಸ್‌ಪೋರ್ಟ್, ಪಡಿತರ ಚೀಟಿ, ವಿದ್ಯುತ್ ಬಿಲ್, ದೂರವಾಣಿ ಬಿಲ್, ನೀರಿನ ಬಿಲ್) ಸಲ್ಲಿಸಬೇಕಾಗುತ್ತದೆ.

 

ಇದನ್ನು ಓದಿ: ದಸರಾ ರಜೆಯಲ್ಲಿ ಕಡಿತ ?! ಸಿಎಂ ಮೊರೆ ಹೋದ ಶಿಕ್ಷಕರು- ಬಳಿಕ ನಡೆದದ್ದೇನು?!

Leave A Reply

Your email address will not be published.