Ration card: ಈಗಲೇ ರದ್ದಾಗಲಿದೆ ಇಂತವರ ರೇಷನ್ ಕಾರ್ಡ್ !! ಕೂಡಲೇ ಜಾರಿಯಾಗುವಂತೆ ಆದೇಶ ಹೊರಡಿಸಿದ ಸರ್ಕಾರ

Notice has been given to cancel Such people ration card

Ration card: ರಾಜ್ಯ ಸರ್ಕಾರವು ಜನತೆಗೆ ರೇಷನ್ ಕಾರ್ಡ್ ತಿದ್ದುಪಡಿಯ ಸಮಯವನ್ನು ವಿಸ್ತರಿಸುವ ಮೂಲಕ ರಾಜ್ಯದ ಜನತೆಗೆ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಈ ಬೆನ್ನಲ್ಲೇ ಇದೀಗ ಪಡಿತರ ಚೀಟಿ(Ration Card) ಹೊಂದಿರುವ ರಾಜ್ಯದ ಎಲ್ಲರಿಗೂ ಬಿಗ್ ಶಾಕ್ ನೀಡಿದೆ.

ಹೌದು, ರಾಜ್ಯದಲ್ಲಿ ಕಾಂಗ್ರೆಸ್-ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡ್ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಸರ್ಕಾರದ ‘ಅನ್ನ ಭಾಗ್ಯ’ ಮತ್ತು ‘ಗೃಹ ಲಕ್ಷ್ಮಿ’ ಯೋಜನೆಗಳ ಲಾಭ ಪಡೆಯಲು ಇದು ಉಪಯೋಗವಾಗುತ್ತಿದೆ. ಅಲ್ಲದೆ. ಒಟ್ಟಿನಲ್ಲಿ ಮುಖ್ಯವಾಗಿ ರೇಷನ್ ಪಡೆಯಲು ಇದು ತುಂಬಾ ಮುಖ್ಯ. ಆದರೀಗ ಸರ್ಕಾರ ಇಷ್ಟೆಲ್ಲಾ ಸವಲತ್ತು ಕಲ್ಪಿಸಾದರೂ ಕೂಡ ರೇಷನ್ ಕಾರ್ಡ್ ಇರುವ ಹಲವರು 6 ತಿಂಗಳಿನಿಂದ ರೇಷನ್ ಅನ್ನೇ ಪಡೆದಿಲ್ಲ !! ಹೀಗಾಗಿ ಸರ್ಕಾರ ಇಂತವರಿಗೆ ಬಿಗ್ ಶಾಕ್ ನೀಡುತ್ತಿದ್ದು, ಇವರ ರೇಷನ್ ಕಾರ್ಡ್ ರದ್ದುಮಾಡಲು ಖಡಕ್ ಸೂಚನೆ ನೀಡಿದೆ.

ಅಂದಹಾಗೆ ಒಟ್ಟು 3.26 ಲಕ್ಷದಷ್ಟು ಫಲಾನುಭವಿಗಳು ಆರು ತಿಂಗಳಿನಿಂದ ರೇಷನ್ ಪಡೆಯುತ್ತಿಲ್ಲ. ಹೀಗೆ 6 ತಿಂಗಳಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ಅಮಾನತು ಮಾಡಲು ಇದೀಗ ಆಹಾರ ಇಲಾಖೆ ಮುಂದಾಗಿದೆ. ಈ ನಿಯಮ ಅಂತ್ಯೋದಯ, ಬಿಪಿಎಲ್​, ಪಿಹೆಚ್​​ಹೆಚ್​​​​​​​ ಕಾರ್ಡ್​ಗೆ ಅನ್ವಯಿಸುತ್ತದೆ. ಹೀಗಾಗಿ ಅಕ್ಕಿ ಪಡೆದಿಲ್ಲದೇ ಇರುವ ಬಗ್ಗೆ ಆಹಾರ ಇಲಾಖೆ ಡೇಟಾ ಕಲೆಕ್ಟ್ ಮಾಡಿಕೊಂಡಿದ್ದು ಈ ಕಾರ್ಡ್​ಗಳ ಅಮಾನತಿಗೆ ಆದೇಶಿಸಿದೆ.

ಇನ್ನು ಸದ್ಯ ಅಂತ್ಯೋದಯ, ಪಿಹೆಚ್​​ಹೆಚ್ ಹಾಗೂ NPHH ನಲ್ಲಿ ಒಟ್ಟು 1,52,79,343 ರಷ್ಟು ಕಾರ್ಡ್​ಗಳಿದ್ದು ಒಟ್ಟು 52,34,148 ರಷ್ಟು ಫಲಾನುಭವಿಗಳಿದ್ದಾರೆ. ಇನ್ನು ಬಿಪಿಎಲ್​ನಲ್ಲಿ 1,27,82,893 ಕಾರ್ಡ್​ಗಳಿದ್ದು ಒಟ್ಟು 4,37,65,128 ರಷ್ಟು ಫಲಾನುಭವಿಗಳಿದ್ದಾರೆ. ಇದರಲ್ಲಿ ಒಟ್ಟು 3 ಲಕ್ಷದ 26 ಸಾವಿರ ಕಾರ್ಡ್ ಗಳನ್ನ ಸಸ್ಪೆಂಡ್ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ.

ಇನ್ನು ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಬಡತನ ರೇಖೆಗಿಂತ ಕೆಳಗಿನವರಿಗೆ (BPL ಕಾರ್ಡುದಾರರು) ಮಾರ್ಪಾಡು ಮಾಡಲು, ಹೊಸ ಹೆಸರುಗಳ ಸೇರ್ಪಡೆ, ತೆಗೆಯುವುದು ಸೇರಿದಂತೆ ಪಡಿತರ ಕಾರ್ಡುಗಳ ತಿದ್ದುಪಡಿಗೆ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದ ಈ ತಿದ್ದುಪಡಿ ಇರುವ ಅವಕಾಶದ ಸೌಲಭ್ಯವನ್ನು ಇನ್ನೂ 03 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ಕಳೆದ ಎರಡು ತಿಂಗಳಲ್ಲಿ ಮೂರು ದಿನ ಎಲ್ಲಾ ಜಿಲ್ಲೆಗಳಲ್ಲಿ ತಿದ್ದಪಡಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ಸರ್ವಾರ್ ಬ್ಯುಸಿ ಬಂದ ಕಾರಣ ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.‌ ಹೀಗಾಗಿ ಮತ್ತೆ ದಿನಗಳನ್ನು ವಿಸ್ತರಿಸಿ ಜನರ ಕಷ್ಟಕ್ಕೆ ನೆರವಾಗಿದೆ.

Leave A Reply

Your email address will not be published.