Lemon Health Benefits: ಎಂದಿಗೂ ಈ ಪದಾರ್ಥಗಳಿಗೆ ನಿಂಬೆ ರಸ ಸೇರಿಸಬೇಡಿ, ಹೆಚ್ಚು ಕಡಿಮೆ ಆದ್ರೆ ಹಾರುತ್ತೆ ಪ್ರಾಣ

Lemon Health Benefits: ಭಾರತೀಯ ಅಡುಗೆ ಮನೆಯಲ್ಲಿ ನಿಂಬೆಹಣ್ಣಿಗೆ ಮಹತ್ವದ ಸ್ಥಾನವಿದೆ. ಯಾಕೆಂದರೆ ಎಲ್ಲಾ ಅಡುಗೆಗಳಲ್ಲಿ ನಿಂಬೆ ಹಣ್ಣಿನ ಬಳಕೆ ಸಾಮಾನ್ಯ. ಲಿಂಬೆ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಸಾಕಷ್ಟು ಔಷಧೀಯ ಗುಣಗಳನ್ನು (Lemon Health Benefits) ಹೊಂದಿದೆ. ಸಲಾಡ್, ಜ್ಯೂಸ್, ಉಪ್ಪಿನಕಾಯಿ, ಚಿತ್ರಾನ್ನದಿಂದ ತೊಡಗಿ ಹಲವು ರೆಸಿಪಿಗಳಿಗೆ ನಿಂಬೆ ರಸವನ್ನು ಬಳಸಲಾಗುತ್ತದೆ. ನಾನ್‌ವೆಜ್‌ ಅಡುಗೆ ಮಾಡಿದಾಗಲಂತೂ ಪಕ್ಕದಲ್ಲಿ ಕತ್ತರಿಸಿದ ನಿಂಬೆಹಣ್ಣು ಇರಲೇಬೇಕು.
ನಿಂಬೆ ಒಂದು ಸೂಪರ್ ಫುಡ್ ಆಗಿದ್ದು ಇದನ್ನು ಎಲ್ಲಾ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಆದರೆ ಈ ನಿಂಬೆಯನ್ನು ಕೆಲವು ವಸ್ತುಗಳ ಜೊತೆ ಸೇರಿಸಿದರೆ ಅಪಾಯಕಾರಿಯಾಗುತ್ತದೆ.

ಹೌದು. ಆಯುರ್ವೇದದ ಪ್ರಕಾರ ನಿಂಬೆಹಣ್ಣನ್ನು ಕೆಲವು ಆಹಾರ ಪದಾರ್ಥಗಳ ಜೊತೆ ಸೇರಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಖಾದ್ಯಗಳ ರುಚಿಯನ್ನು ಹೆಚ್ಚಿಸುವ ನಿಂಬೆಯನ್ನು ಕೆಲವೊಮ್ಮೆ ಫುಡ್ ಪಾಯ್ಸನ್‌ಗೂ ಕಾರಣವಾಗಬಹುದು.

ಡೈರಿ ಉತ್ಪನ್ನಗಳು:
ಯಾವುದೇ ರೀತಿಯ ಡೈರಿ ಉತ್ಪನ್ನದೊಂದಿಗೆ ನಿಂಬೆ ಬಳಸಬೇಡಿ. ವಿಶೇಷವಾಗಿ ಹಾಲು ಮತ್ತು ನಿಂಬೆಯನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದರಿಂದಾಗಿ ಎದೆಯಲ್ಲಿ ಉರಿ ಮತ್ತು ವಾಂತಿಯಂತಹ ತೊಂದರೆಗಳು ಉಂಟಾಗಬಹುದು.

ಮಸಾಲೆ ಆಹಾರ:
ಮಸಾಲೆಯುಕ್ತ ಆಹಾರವನ್ನು ಸೇವಿಸುವಾಗ ನಿಂಬೆ ಬಳಸುವುದನ್ನು ತಪ್ಪಿಸಿ. ನಿಂಬೆಹಣ್ಣಿನ ಸೇವನೆಯು ಅಸಿಡಿಟಿ ಸಮಸ್ಯೆಯನ್ನು ಗಂಭೀರವಾಗಿ ಉಲ್ಬಣಗೊಳಿಸುತ್ತದೆ. ಏಕೆಂದರೆ ನಿಂಬೆಯನ್ನು ಮಸಾಲೆ ವರ್ಧಕ ಎಂದೂ ಕರೆಯುತ್ತಾರೆ. ನೀವು ಮಸಾಲೆಯುಕ್ತ ಊಟಕ್ಕೆ ನಿಂಬೆ ಸೇರಿಸಿದರೆ, ಅದು ನಿಮಗೆ ತೊಂದರೆಯುಂಟುಮಾಡಬಹುದು.

ಕೆಂಪು ವೈನ್:
ನಿಂಬೆಯನ್ನು ಕೆಂಪು ವೈನ್ ಜೊತೆಗೆ ಸೇವಿಸಬಾರದು. ನಿಂಬೆಹಣ್ಣುಗಳು ವೈನ್‌ನ ರುಚಿ ಮತ್ತು ಸುವಾಸನೆಯನ್ನು ಹಾಳುಮಾಡಬಹುದು ಮತ್ತು ನಿಮ್ಮ ಆರೋಗ್ಯವನ್ನು ಹಾನಿಗೊಳಿಸಬಹುದು.

ಮೊಸರು ಮತ್ತು ಮಜ್ಜಿಗೆ:
ಆಯುರ್ವೇದದ ಪ್ರಕಾರ, ಹಾಲಿನ ಉತ್ಪನ್ನಗಳಿಗೆ ನಿಂಬೆ ಸೇರಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಮೊಸರು ಮತ್ತು ಮಜ್ಜಿಗೆಯ ರುಚಿಯನ್ನು ಹಾಳು ಮಾಡುತ್ತದೆ ಮತ್ತು ದೇಹದಲ್ಲಿ ಆಮ್ಲೀಯತೆಯನ್ನು ಉಂಟುಮಾಡುತ್ತದೆ.

 

ಇದನ್ನು ಓದಿ: Kumble: ಬಸ್ಸಿನಲ್ಲಿ ಮಗುವನ್ನು ಮರೆತು ಬಿಟ್ಟು, ಇಳಿದ ದಂಪತಿ! ಮುಂದೇನಾಯ್ತು?

Leave A Reply

Your email address will not be published.