Blind Faith: ದೇವಸ್ಥಾನದಲ್ಲಿ ಕತ್ತಿಯಿಂದ ಒಂದೇ ಏಟಿಗೆ ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ ಬಾಲಕಿ; ವೀಡಿಯೋ ವೈರಲ್

madhyapradesh news khargone blind faith temple tongue cut and mata navratri

Blind Faith: ಇದನ್ನು ಭಕ್ತಿ ಎಂದು ಕರೆಯಬೇಕೋ, ಮೂಢನಂಬಿಕೆ (Blind Faith) ಎಂದು ಕರೆಯಬೇಕೋ ನೀವೇ ನಿರ್ಧರಿಸಿ. ಮಧ್ಯಪ್ರದೇಶದ (Madhyapradesh) ಖಾರ್ಗೋನ್‌ನಲ್ಲಿರುವ ಬಾಗೇಶ್ವರಿ ಶಕ್ತಿಧಾಮದಲ್ಲಿ ಹುಡುಗಿಯೊಬ್ಬಳು ತನ್ನ ನಾಲಿಗೆಯನ್ನು ಕತ್ತಿಯಿಂದ ಕತ್ತರಿಸಿ ದೇವರಿಗೆ ಅರ್ಪಿಸಿದ ಘಟನೆಯೊಂದು ನಡೆದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಾಲಕಿ ದೇವಿಯ ಮುಂದೆ ನಿಂತು ಮಾತನಾಡುತ್ತಾ ಬಳಿಕ ಕತ್ತಿಯನ್ನು ಎತ್ತಿಕೊಂಡು ತನ್ನ ನಾಲಿಗೆಯನ್ನು ಒಂದೇ ಹೊಡೆತದಲ್ಲಿ ಕತ್ತರಿಸುತ್ತಾಳೆ. ಈ ಸಂದರ್ಭದಲ್ಲಿ ಜನಸಂದಣಿ ದೇವಸ್ಥಾನದಲ್ಲಿ ಇದ್ದರೂ ಅವರು ಈ ಕೃತ್ಯವನ್ನು ತಡೆಯಲು ಮುಂದಾಗಿಲ್ಲ.

ಖಾರ್ಗೋನ್ ಜಿಲ್ಲೆಯ ಸಾಗೂರ್ ಭಾಗೂರ್ನಲ್ಲಿ ಮಾತಾ ಬಾಧೇಶ್ವರಿ ಶಕ್ತಿ ಧಾಮವಿದೆ. ಇದು ಅತ್ಯಂತ ಪುರಾತನ ಮತ್ತು ಐತಿಹಾಸಿಕ ದೇವಾಲಯ ಎಂದು ಹೇಳಲಾಗುತ್ತದೆ. ಇಲ್ಲಿ ನವರಾತ್ರಿಯ ಮೊದಲ ದಿನ, ಅಮೃತ ಕುಂಡದಲ್ಲಿ ಹುಡುಗಿಯೊಬ್ಬಳು ತನ್ನ ನಾಲಿಗೆಯನ್ನು ಕತ್ತಿಯಿಂದ ಕತ್ತರಿಸಿ ಮಾತೃದೇವತೆಗೆ ಅರ್ಪಿಸಿದಳು. ಕತ್ತಿಯ ದಾಳಿಯಿಂದಾಗಿ ಬಾಲಕಿಯ ಬಾಯಿಯಿಂದ ರಕ್ತ ಬಂದಿರುವುದು ಸ್ಪಷ್ಟವಾಗಿ ವೀಡಿಯೋದಲ್ಲಿ ಕಾಣುತ್ತಿದೆ.
ಹುಡುಗಿ ಕೂಡಲೇ ಪ್ರಜ್ಞೆ ತಪ್ಪಿ ಬಿದ್ದರೂ ಒಬ್ಬ ವ್ಯಕ್ತಿ ಕೂಡಾ ಆಕೆಯನ್ನು ಉಳಿಸುವ ಪ್ರಯತ್ನ ಮಾಡಿಲ್ಲ. ಆ ಬಾಲಕಿಯಲ್ಲಿ ದೇವಿ ನೆಲೆಸಿದ್ದಾಳೆ ಎಂದು ಅಲ್ಲಿದ್ದವರು ಹೇಳಿದ್ದಾರೆ. ಮತ್ತು ಅಲ್ಲಿ ದೇವಿಗೇ ಘೋಷಣೆ ಕೂಗಲಾಗುತ್ತದೆ.

ಇವರಲ್ಲಿ ಒಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಈ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ. ನವರಾತ್ರಿ ಹಬ್ಬವು ಅಕ್ಟೋಬರ್ 15 ರಿಂದ ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಸಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಲ್ಲಿ ಈ ರೀತಿಯ ದುರ್ಘಟನೆ ನಡೆದಿದೆ.

 

ಇದನ್ನು ಓದಿ: SBI ಗ್ರಾಹಕರೇ ಕೂಡಲೇ ಅಲರ್ಟ್ ಆಗಿ – UPI ಪಾವತಿ ಬಗ್ಗೆ ಬಂದಿದೆ ನೋಡಿ ಬಿಗ್ ಅಪ್ಡೇಟ್

Leave A Reply

Your email address will not be published.