Ration Card Update: APL, BPL ಕಾರ್ಡ್ ದಾರರಿಗೆ ಸಂತಸದ ಸುದ್ದಿ- ಮತ್ತೆ ತಿದ್ದುಪಡಿಗೆ ಅವಧಿ ವಿಸ್ತರಣೆ

Karantaka news ration card Update APL BPL Card correction date extended latest news

Ration Card Update: ಬಿಪಿಎಲ್, ಎಪಿಎಲ್ ಸೇರಿ ಪಡಿತರ ಚೀಟಿದಾರರಿಗೆ (Ration Card Holder)ಮತ್ತೊಂದು ಗುಡ್ ನ್ಯೂಸ್!!ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮತ್ತೊಮ್ಮೆ ಅನುವು ಮಾಡಿಕೊಡಲಾಗಿದೆ. ನಿಮ್ಮ ಜಿಲ್ಲೆಗಳಲ್ಲಿ ನಡೆಯೋ `ರೇಷನ್ ಕಾರ್ಡ್’ ಹೆಸರು ಸೇರ್ಪಡೆ- ತಿದ್ದುಪಡಿ (Ration Card upadate)ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!!

ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿ ತಿದ್ದುಪಡಿ ಮತ್ತು ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರಿಸಲು ಆಹಾರ ಇಲಾಖೆ ಮತ್ತೊಮ್ಮೆ ಅನುವು ಮಾಡಿಕೊಟ್ಟಿದೆ. ಹಾಗಿದ್ರೆ, ಪಡಿತರ ತಿದ್ದುಪಡಿಗೆ ಯಾವ ಜಿಲ್ಲೆಯಲ್ಲಿ ಯಾವಾಗ ಅವಕಾಶ ಎಂಬ ಮಾಹಿತಿ ಇಲ್ಲಿದೆ ನೋಡಿ. ಅಕ್ಟೋಬರ್ 16 ರಿಂದ 21 ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ಈ ಹಿಂದೆ ಆಹಾರ ಇಲಾಖೆ ಅ.5 ರಿಂದ 13ರವರೆಗೆ ತಿದ್ದುಪಡಿ ಮಾಡಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮತ್ತೊಮ್ಮೆ ಪಡಿತರ ಚೀಟಿದಾರರಿಗೆ ಹೆಸರು ಸೇರ್ಪಡೆ/ತಿದ್ದುಪಡಿಗೆ ಅನುವು ಮಾಡಿಕೊಟ್ಟಿದೆ.

ಈ ಜಿಲ್ಲೆಗಳಲ್ಲಿ ಅ.16 ರಿಂದ 18 ರವರೆಗೆ ಪಡಿತರ ತಿದ್ದುಪಡಿಗೆ ಅವಕಾಶ:
ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ,ಬಾಗಲಕೋಟೆ, ಬೆಳಗಾವಿ, ಚಾಮರಾಜಪೇಟೆ, ಚಿಕ್ಕಮಗಳೂರು, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ ಅ.16 ರಿಂದ 18 ರವರೆಗೆ ಈ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅನುವು ಮಾಡಿಕೊಡಲಾಗಿದೆ.

ಈ ಜಿಲ್ಲೆಗಳಲ್ಲಿ ಅ. 19 ರಿಂದ 21 ರವರೆಗೆ ಪಡಿತರ ತಿದ್ದುಪಡಿಗೆ ಅವಕಾಶ:
ವಿಜಯನಗರ,ಕೋಲಾರ, ಕೊಪ್ಪಳ, ಬಳ್ಳಾರಿ, ಬಿದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ , ಕಲಬುರಗಿ, , ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ ಜಿಲ್ಲೆಗಳಲ್ಲಿ ಅ. 19 ರಿಂದ 21 ರವರೆಗೆ ಈ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅನುವು ಮಾಡಿಕೊಡಲಾಗಿದೆ.

Leave A Reply

Your email address will not be published.