Health Tips: ನಿತ್ಯವೂ ಕಾಫಿ ಕುಡುದ್ರೆ ಸಣ್ಣ ಆಗ್ತಾರಾ ?! ಏನ್ ಹೇಳುತ್ತೆ ಸೈನ್ಸ್ ?!
Lifestyle health tips one cup of coffee a day may avoid weight gain says study
Coffee: ನಾವು ಎದ್ದ ತಕ್ಷಣ ಕಾಫಿಗೆ (Coffee) ನಮ್ಮ ಮನಸ್ಸು ಹಾತೊರೆಯುತ್ತದೆ. ಕಾಫಿಯ ಗುಣವೇ ಹಾಗೆ ತನ್ನ ಅದ್ಭುತವಾದ ರುಚಿಗೆ ಸುಲಭವಾಗಿ ಜನರ ಮನಸ್ಸನ್ನು ಆಕರ್ಷಿಸಿ ಬಿಡುತ್ತದೆ. ಕಾಫಿಯ ಸೇವನೆ ಬಹುತೇಕರಿಗೆ ಪ್ರಿಯವಾದುದು. ಕಾಫಿ ಪ್ರಪಂಚದ ಅತ್ಯಂತ ಜನಪ್ರಿಯವಾದ ಪಾನೀಯಗಳಲ್ಲಿ ಒಂದಾಗಿದೆ. ಕೆಲವರು ಕಾಫಿಯ ಸೇವೆನೆ ದೇಹಕ್ಕೆ ಉತ್ತಮವಲ್ಲ ಎಂದು ವಾದಿಸಿದರೆ, ಮತ್ತೆ ಕೆಲವರು ಕಾಫಿ ಹಲವಾರು ಆರೋಗ್ಯ (Health Tips) ಸಮಸ್ಯೆಗಳನ್ನು ತಡೆಯುತ್ತದೆ ಎಂದು ವಾದಿಸುತ್ತಾರೆ. ಅಂದಹಾಗೆ, ನಿತ್ಯವೂ ಕಾಫಿ ಕುಡುದ್ರೆ ಸಣ್ಣ ಆಗ್ತಾರಾ ?! ಏನ್ ಹೇಳುತ್ತೆ ಸೈನ್ಸ್ ?!
ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ದೇಹದ ತೂಕ ಹಾಗೂ ಬೊಜ್ಜಿನ ಸಮಸ್ಯೆ ಎನ್ನುವುದು ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಒಮ್ಮೆ ಈ ಸಮಸ್ಯೆಗಳು ಕಾಣಿಸಿಕೊಂಡರೆ, ಮತ್ತೆ ಅದರಿಂದ ಅಷ್ಟು ಬೇಗ ಹೊರಬರಲು ಸಾಧ್ಯವಿಲ್ಲ. ಆದರೆ ಆಗಲ್ಲ ಎಂದು ಕೈಕಟ್ಟಿ ಕೂತರೆ, ಮುಂದಿನ ದಿನಗಳಲ್ಲಿ ತೂಕ ಹಾಗೂ ಬೊಜ್ಜಿನ ಸಮಸ್ಯೆಯಿಂದಾಗಿ ದೀರ್ಘಕಾಲದ ಕಾಯಿಲೆಗಳು ಕೂಡ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅಂದಹಾಗೆ, ತೂಕ ನಷ್ಟಕ್ಕೂ ಹಾಗೂ ಕಾಫಿಗೂ ಬಲವಾದ ಸಂಬಂಧವಿದೆ ಎಂದು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.
ದಿನಾ ಹೆಚ್ಚಾಗಿ ಕಾಫಿ ಕುಡಿಯುವವರು ನಾಲ್ಕು ವರ್ಷಗಳಲ್ಲಿ ನಿರೀಕ್ಷೆಗಿಂತ 0.12 ಕೆ.ಜಿ ಕಡಿಮೆ ಆಗುತ್ತಾರೆ. ಆದರೆ ಇದಕ್ಕೆ ಸಕ್ಕರೆಯನ್ನು ಸೇರಿಸುವುದರಿಂದ 0.09 ಕೆಜಿ ತೂಕ ಹೆಚ್ಚಾಗಿದ್ದಾರೆ. ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವುದು, ಅದರಲ್ಲಿಯೂ ಸಕ್ಕರೆ, ಕೆನೆ ಅಥವಾ ಇನ್ನೇನಾದರೂ ಸೇರಿಸಿ ಕುಡಿಯುವುದರಿಂದ ತೂಕ ಹೆಚ್ಚಾಗುತ್ತಾ ಎಂದು ಅನೇಕ ಸಂಶೋಧಕರ ಗುಂಪು ತನಿಖೆ ನಡೆಸಿದೆ.
ಸಂಶೋಧಕರು 1986 ಮತ್ತು 2010, 1991 ರಿಂದ 2015 ರ ನಡುವಿನ ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ 2.3 ಲಕ್ಷ ಭಾಗವಹಿಸಿದ್ದರು. 1991 ಮತ್ತು 2014 ರ ನಡುವೆ ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಅಧ್ಯಯನದಲ್ಲಿ 50,000 ಪುರುಷ ಭಾಗವಹಿಸುವವರ ಡೇಟಾವನ್ನು ಸಂಯೋಜಿಸಿದ್ದಾರೆ. ಇದರಲ್ಲಿ ಭಾಗವಹಿಸುವವರಿಗೆ ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಯಿತು. ಅದರ ಆಧಾರದ ಮೇಲೆ ಸಂಶೋಧಕರು ಕಾಫಿ ಕುಡಿಯುವ ಅಭ್ಯಾಸ ಮತ್ತು ತೂಕದ ಬಗ್ಗೆ ನಾಲ್ಕು ವರ್ಷಗಳ ಮಧ್ಯಂತರದಲ್ಲಿ ಆದ ಬದಲಾವಣೆಗಳ ಬಗ್ಗೆ ಕೇಳಿದರು.
ಆರೋಗ್ಯ ಕಾರ್ಯಕರ್ತೆಯರ ಮೇಲೆ ನಡೆಸಿದ ಅಧ್ಯಯನದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ತೂಕವು 1.2 ರಿಂದ 1.7 ಕೆಜಿಯಷ್ಟು ಹೆಚ್ಚಿದ್ದರೆ, ಆರೋಗ್ಯ ವೃತ್ತಿಪರರ ಅಧ್ಯಯನದಲ್ಲಿ ಸರಾಸರಿ ತೂಕವು 0.8 ಕೆ.ಜಿ. ದಿನಕ್ಕೆ ಒಂದು ಕಪ್ ಸಿಹಿಗೊಳಿಸದ, ಕೆಫೀನ್ ಅಥವಾ ಕೆಫೀನ್ ರಹಿತ ಕಾಫಿಯನ್ನು ಕುಡಿಯುವುದರಿಂದ ನಾಲ್ಕು ವರ್ಷಗಳಲ್ಲಿ ನಿರೀಕ್ಷೆಗಿಂತ 0.12 ಕೆಜಿ ಕಡಿಮೆ ತೂಕ ಆಗುತ್ತದೆ ಎಂದು ಸಂಶೋಧಕರು ಕಂಡು ಹಿಡಿದಿದ್ದಾರೆ. ಆದರೆ ಹಾಲು ಅಥವಾ ಇತರ ಡೈರಿ ಪದಾರ್ಥಗಳನ್ನು ಸೇರಿಸುವುದರಿಂದ ಅದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಒಂದು ಚಮಚ ಸಕ್ಕರೆಯನ್ನು ಸೇರಿದಿದರೆ ತೂಕವು ನಿರೀಕ್ಷೆಗಿಂತ 0.09 ಕೆಜಿ ಹೆಚ್ಚಾಗಿದೆ.
ಕಾಫಿಯಲ್ಲಿ ಅಧಿಕ ಪ್ರಮಾಣದ ಕೆಫೀನ್ ಅಂಶ ಇರುವುದರಿಂದ, ಈ ಪಾನೀಯವನ್ನು ನಿಯಮಿತ ವಾಗಿ ಸೇವನೆ ಮಾಡಿದರೆ ಒಳ್ಳೆಯದು. ಪ್ರಮುಖವಾಗಿ ಕಾಫಿಯಲ್ಲಿ ಕ್ಯಾಲೋರಿ ಅಂಶಗಳು ತುಂಬಾನೇ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ, ದೇಹದ ತೂಕ ಇಳಿಸುವವರಿಗೆ ಬಹಳ ಒಳ್ಳೆಯ ಪಾನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹೆಚ್ಚಿನ ವಯಸ್ಕರು ದಿನಕ್ಕೆ 400 ಮಿಗ್ರಾಂ ಕೆಫೀನ್ ಅನ್ನು ಸೇವಿಸುತ್ತಾರೆ. ಇದು ಎರಡು ಎಸ್ಪ್ರೆಸೊಗಳು ಅಥವಾ ನಾಲ್ಕು ಕಪ್ ತ್ವರಿತ ಕಾಫಿ ಅಥವಾ ಎಂಟು ಕಪ್ ಚಹಾಕ್ಕೆ ಸಮನಾಗಿರುತ್ತದೆ. ಒಬ್ಬ ವ್ಯಕ್ತಿಯು ತನ್ನ ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ತೂಕವನ್ನು ಕಳೆದುಕೊಳ್ಳಲು ಆಹಾರ ತಜ್ಞರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ: Marriage: ಹುಡುಗಿಯರೇ.. ಮದುವೆ ನಂತರ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ !