Marriage: ಹುಡುಗಿಯರೇ.. ಮದುವೆ ನಂತರ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ !

Lifestyle relationship tips women should not do these mistake after marriage

Marriage: ಹುಟ್ಟು, ಸಾವು, ಮದುವೆ (Marriage), ಮೂರು ದೇವರ ಇಚ್ಛೆ ಎಂಬ ಮಾತಿದೆ. ಆದ್ದರಿಂದ ಮದುವೆಯು ಬಹುಮಟ್ಟಿಗೆ ಪೂರ್ವನಿರ್ಧರಿತವಾದ ಸಂಬಂಧವಾಗಿದೆ ಎಂದು ಭಾವಿಸಲಾಗಿದೆ. ಮದುವೆ ಒಂದು ಅದ್ಭುತವಾದ ಬಂಧ. ಈ ಸಂಬಂಧವು ಎರಡು ಜೀವಗಳನ್ನು ಒಟ್ಟಿಗೆ ಬೆಸೆಯುತ್ತದೆ. ಇದು ಜೀವನದ ಅತ್ಯಂತ ಮಹತ್ವದ ನಿರ್ಧಾರ ಕೂಡ ಹೌದು. ಆದರೆ, ಹುಡುಗಿಯರೇ, ಮದುವೆ ನಂತರ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ !

ಹಲವು ಹುಡುಗಿಯರು ಮದುವೆಯ ನಂತರ ತನ್ನ ಗಂಡನ ಕುಟುಂಬದೊಂದಿಗೆ ಸಮಯ ಕಳೆಯುತ್ತಾ ಹೆತ್ತವರನ್ನು ಮರೆತು ಬಿಡುತ್ತಾರೆ. ಅವರಿಗೆ ತಮ್ಮ ಹೆತ್ತವರೊಂದಿಗೆ ಮಾತನಾಡಲು ಸಹ ಸಾಧ್ಯವಾಗುವುದಿಲ್ಲ. ಆದರೆ, ನೆನಪಿರಲಿ ಅಷ್ಟು ವರ್ಷ ಬಾಕಿ ಸಲಹಿದ ಹೆತ್ತವರು ನಿಮಗೆ ಮದುವೆಯಾದ ಮೇಲೆ ನಿಮ್ಮನ್ನು ತುಂಬಾ ಮಿಸ್ ಮಾಡುತ್ತಿರುತ್ತಾರೆ. ಹಾಗಾಗಿ ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಲೇ ಇರಬೇಕು. ಹೆತ್ತವರನ್ನು ಮರೆಯಬೇಡಿ.

ಹೆಚ್ಚಿನ ಹುಡುಗಿಯರು ಮದುವೆಗೂ ಮುನ್ನ ಕೆಲಸ ಮಾಡಿರಲ್ಲ. ಅಲ್ಪ ಸ್ವಲ್ಪ ಕೆಲಸ ಮಾಡಿರುತ್ತಾರೆ. ಮದುವೆಗೆ ಮೊದಲು, ಎಲ್ಲಾ ಕೆಲಸಗಳನ್ನು ನಿಮ್ಮ ತಾಯಿ ಮಾಡುತ್ತಾರೆ. ಮದುವೆಯ ನಂತರ ಎಲ್ಲವೂ ಬದಲಾಗುತ್ತದೆ. ನೀವು ಕೆಲಸ ಮಾಡುತ್ತಿದ್ದರೆ ಮತ್ತು ಹೆಚ್ಚು ಸಮಯವಿಲ್ಲದಿದ್ದರೆ, ಸಣ್ಣ ಪುಟ್ಟ ಕೆಲಸದಲ್ಲಾದರೂ ಮನೆಯವರಿಗೆ ಸಹಾಯ ಮಾಡೋದನ್ನು ಮರೆಯಬೇಡಿ.

ಮದುವೆಗೂ ಮುನ್ನ ಮೋಜು ಮಸ್ತಿ ಮಾಡಿರಬಹುದು. ಆದರೆ, ಮದುವೆಯಾದ ನಂತರ ಈ ರೀತಿಯ ವರ್ತನೆ ಒಳಿತಲ್ಲ. ಮದುವೆಯ ನಂತರ ನೀವು ತಡರಾತ್ರಿ (late night) ಮನೆಗೆ ಬರುವುದು. ಮದ್ಯಪಾನ, ಸ್ನೇಹಿತರೊಂದಿಗೆ ಸುತ್ತಾಟ ಇವೆಲ್ಲವನ್ನೂ ಮಾಡಬೇಡಿ. ಇದರಿಂದ ದೂರವಿರಿ. ಯಾಕೆಂದರೆ ಇದು ಅತ್ತೆ ಮಾವ ಹಾಗೂ ಗಂಡನಿಗೆ ಇಷ್ಟವಾಗದಿರಬಹುದು.

ಮದುವೆಗೂ ಮುನ್ನ ನಿಮ್ಮ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲಿ (family function) ನೀವು ಭಾಗಿಯಾಗಿರಬಹುದು. ಅಥವಾ ಭಾಗಿಯಾಗದೇ ಇರಬಹುದು. ಆದರೆ, ಮದುವೆಯಾದ ಬಳಿಕ ಸಹ ಗಂಡನ ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ. ಇದರಿಂದ ಸಂಬಂಧ ಚೆನ್ನಾಗಿರುತ್ತದೆ.

ಇದನ್ನೂ ಓದಿ: Viral Tweet: ಈ ನಟಿ ಜೊತೆ ನಟರು ಮಾತ್ರ ಅಲ್ಲ.. ಅಂಬಾನಿಗೂ ರಾತ್ರಿ ಕಳೆಯೋಕೆ ಇಷ್ಟವಂತೆ !! ಭಾರೀ ವೈರಲ್ ಆಯ್ತು ಟ್ವೀಟ್ !

Leave A Reply

Your email address will not be published.