KSRTC: ಈ ಬಸ್ಸುಗಳಲ್ಲಿ ಮಹಿಳೆಯರು ಕೂಡ ಇಷ್ಟು ಹಣ ನೀಡಿ ಪ್ರಯಾಣಿಸಬೇಕು !!

Karnataka news even Women also have to pay in these KSRTC buses

KSRTC: ರಾಜ್ಯ ಸರ್ಕಾರವು ಶಕ್ತಿ ಯೋಜನೆಯನ್ನು ಜಾರಿಗೊಳಿಸಿ ರಾಜ್ಯಾದ್ಯಂತ ಮಹಿಳೆಯರಿಗೆ ಕೆಂಪು ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿಕೊಟ್ಟಿದೆ. ಮಹಿಳೆಯರೂ ಶಕ್ತಿ ಮೀರಿ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದೀಗ KSRTC ಯು ಮಹಿಳೆರಿಗೆ ಮತ್ತೊಂದು ವಿಶಿಷ್ಟವಾದಂತಹ ಆಫರ್ ಅನ್ನು ನೀಡಿದೆ.

ಹೌದು, ಕರ್ನಾಟಕದಾದ್ಯಂತ ದಸರ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬವನ್ನು ಸಂಭ್ರಮಿಸಲು ನಗರದಲ್ಲಿರೋ ಜನರೆಲ್ಲರೂ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ರಶ್ ಆಗುವ ಸಾಧ್ಯತೆ ಹೆಚ್ಚಿರೋದ್ರಿಂದ KSRTC ಜನರಿಗೆ ಅನುಕೂಲ ಮಾಡಿಕೊಡಲು 2,000 ಕ್ಕೂ ಅಧಿಕ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿ ಆರಾಮದಾಯಕ ಪ್ರಯಾಣ ಕಲ್ಪಿಸಿದೆ. ಇದರೊಂದಿಗೆ ಮಹಿಳೆಯರಿಗೆ ಇನ್ನೂ ಭರ್ಜರಿ ಆಫರ್ ಅನ್ನು ಸಂಸ್ಥೆಯು ನೀಡಿದೆ.

ಅದೇನೆಂದರೆ ಕರ್ನಾಟಕ ಸರ್ಕಾರವು ‘ಶಕ್ತಿ ಯೋಜನೆ’ ಪ್ರಯುಕ್ತ ಮಹಿಳೆಯರು ರಾಜ್ಯದಲ್ಲಿ ಮಾತ್ರ ಉಚಿತವಾಗಿ ಸಂಚರಿಸಲು ಅನು ಮಾಡಿಕೊಟ್ಟಿದೆ. ಹೊರರಾಜ್ಯಕ್ಕೆ ಹೋಗುವುದಾದರೆ ಅಥವಾ ಅಲ್ಲಿಂದ ಬರುವುದಾದರೆ ಅವರು ಸಂಪೂರ್ಣವಾಗಿ ಹಣವನ್ನು ಪಾವತಿಸಿ ಪ್ರಯಾಣಿಸಬೇಕು. ಆದರೆ ಇದೀಗ ದಸರಾ ಪ್ರಯುಕ್ತ ಕೆಎಸ್ಆರ್ಟಿಸಿ ಹೊರರಾಜ್ಯದಿಂದಲೂ ಮಹಿಳೆಯರು ರಾಜ್ಯಕ್ಕೆ ಪ್ರಯಾಣ ಬೆಳೆಸುವುದಾದರೆ ಅವರಿಗೆ ರಿಯಾಯಿತಿ ದರದಲ್ಲಿ ಟಿಕೇಟನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಮೂಲಕ ಮಹಿಳೆಯರಿಗೆ ಸಂಸ್ಥೆಯು ಭರ್ಜರಿ ಸುದ್ದಿ ನೀಡಿದೆ.

ಇನ್ನು ಪುರುಷರು ಯಾವಾಗಲೂ ಪೂರ್ತಿ ಹಣವನ್ನು ಪಾವತಿಸಿ ಪ್ರಯಾಣಿಸಬೇಕು. ಆದರೆ ಅವರಿಗೂ ಕೂಡ ದಸರಾ ಪ್ರಯುಕ್ತ ಹೊರರಾಜ್ಯದಿಂದ ರಾಜ್ಯಕ್ಕೆ ಬರಲು ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲು ಸಂಸ್ಥೆಯು ತೀರ್ಮಾನಿಸಿದೆ. ಈ ಮೂಲಕ ಮಹಿಳೆ ಹಾಗೂ ಪುರುಷರಿಬ್ಬರಿಗೂ ಗುಡ್ ನ್ಯೂಸ್ ಕೊಟ್ಟಿದೆ.

ಯಾವ ರಿಯಾಯಿತಿ ಇದೆ? ಎಲ್ಲಿಯವರೆಗೂ ಇದೆ?
ದಸರಾ ಹಬ್ಬಕ್ಕೆ ಕೇವಲ ರಾಜ್ಯ ಮಾತ್ರವಲ್ಲದೇ ಚೆನ್ನೈ, ಊಟಿ, ಕೊಡೈಕನಾಲ್, ಮಧುರೈ, ಪಣಜಿ ಸೇರಿದ ಅಂತರ್ ರಾಜ್ಯದಿಂದಲೂ ಹೆಚ್ಚುವರಿ ಬಸ್ ಸೇವೆ ಒದಗಿಸುವುದಾಗಿ ಕೆಎಸ್​​ಆರ್​ಟಿಸಿ ನಿಗಮ ಹೇಳಿದೆ. ಈ ವೇಳೆ ಪುರುಷರಾಗಲಿ, ಮಹಿಳೆಯರಾಗಲಿ ಒಂದೇ ಬಾರಿಗೆ 4ಕ್ಕಿಂತ ಹೆಚ್ಚಿನ ಟಿಕೆಟ್ ಖರೀದಿಸಿದರೆ 5% ರಿಯಾಯಿತಿ ಘೋಷಣೆ ಮಾಡಿದೆ. ಇನ್ನೂ ಖುಷಿಯ ವಿಚಾರ ಏನಪ್ಪಾ ಅಂದ್ರೆ ಇನ್ನು, ಹೋಗುವ ಮತ್ತು ಬರುವ ಟಿಕೆಟ್ ಒಟ್ಟಿಗೆ ಕಾಯ್ದಿರಿಸಿದರೆ ಶೇಕಡಾ 10 ರಿಯಾಯಿತಿಯನ್ನು KSRTC ನೀಡಲಿದ್ದು, ಅಕ್ಟೋಬರ್ 20ರಿಂದ 26ರವರೆಗೆ ನಿಗಮದಿಂದ ಹೆಚ್ಚುವರಿ ಬಸ್ ಸೇವೆಗಳ ಕಾರ್ಯಾಚರಣೆ ಇರಲಿದೆ ಎಂದು ಸಂಸ್ಥೆಯು ತಿಳಿಸಿದೆ.

ಇದನ್ನೂ ಓದಿ: Hardhik pandya: ದೇವರ ಬೇಡಿ ಬಾಲ್ ಎಸೆದ ಹಾರ್ದಿಕ್ – ಎಗರಿ ಎಗರಿ ಬಿತ್ತು ಎದುರಾಳಿಯ ವಿಕೆಟ್, ವೈರಲ್ ಆಯ್ತು ವಿಡಿಯೋ !

Leave A Reply

Your email address will not be published.