Interesting: ಎಲ್ಲಾದರೂ ವಾಹನ ಆಕ್ಸಿಡೆಂಟ್ ಆದ್ರೆ ನೀವು ತಕ್ಷಣ ಏನು ಗಮನಿಸ್ತೀರಿ ?! ಅದೊಂದನ್ನು ನೀವು ನೋಡಲೇ ಬೇಕು……!!!
Interesting news What do you immediately notice if there is a vehicle accident
Interesting news: ನೀವು ದಿನನಿತ್ಯ ಹಲವಾರು ವಾಹನ ಆಕ್ಸಿಡೆಂಟ್ ಗಳನ್ನು ನೋಡುತ್ತಲೇ ಇದ್ದೀರಿ. ಮೊಬೈಲ್, ಟಿವಿ ಮತ್ತು ಪತ್ರಿಕೆಗಳಲ್ಲಿ ಸಣ್ಣ ಪುಟ್ಟ ಆಕ್ಸಿಡೆಂಟ್ ನಿಂದ ಹಿಡಿದು ಭೀಕರ ಅಪಘಾತಗಳ ಸುದ್ದಿಯನ್ನು ಓದುತ್ತಿರುತ್ತೇವೆ. ಆದ್ರೆ ನೀವು ಯಾರಾದ್ರೂ ಹಾಗೆ ಆಕ್ಸಿಡೆಂಟ್ ಆದಾಗ ಒಂದು ವಿಶೇಷ ಅಂಶವನ್ನು ಗಮನಿಸ್ತೀರಾ ? ನಾನಂತೂ ಎಲ್ಲೇ ಅಪಘಾತ ಆಗಲಿ, ಅಪಘಾತ ಎಲ್ಲಿ ನಡೆಯಿತು, ಏನಾಯಿತು, ಯಾರಿಗೆ ಗಾಯ ಆಯಿತು, ಸಾವು ನೋವು ಆಯ್ತಾ ಎಂದು ಸಹಜವಾಗಿ ತಿಳಿದುಕೊಳ್ಳುವ ಜತೆಗೆ ಇನ್ನೊಂದು ವಿಶೇಷ ಅಂಶವನ್ನು ಮರೆಯದೆ ನೋಡುತ್ತೇನೆ. ಅದರ ಬಗ್ಗೆ ಒಂದಷ್ಟು ತಕ್ಷಣ ರೀಸರ್ಚ್ ಮಾಡುತ್ತೇನೆ. ಬಹುಶಃ ನಿಮ್ಮಲ್ಲೂ ಕೆಲವರು ಹಾಗೆ ಮಾಡುತ್ತಿರಬಹುದು. ಹಾಗಾದ್ರೆ ಏನಾ ವಿಷ್ಯ ಎಂದು ತಿಳಿದುಕೊಳ್ಳುವ ಸಮಯವಿದು(Interesting news).
ನಾನು ಆಕ್ಸಿಡೆಂಟ್ ಆದಾಗ ಅದೊಂದನ್ನು ಮರೆಯದೆ ಗಮನಿಸ್ತೇನೆ. ಆಕ್ಸಿಡೆಂಟ್ ಆಗಿರುವ, ಅಪಘಾತಕ್ಕೆ ಈಡಾಗಿ ನುಜ್ಜುಗುಜ್ಜಾಗಿರುವ ವಾಹನದ ಫೋಟೋಗಳನ್ನು ಮೊಬೈಲ್ ನಲ್ಲಿ ಎನ್ಲಾರ್ಜ್ ಮಾಡಿ ನೋಡುತ್ತೇನೆ. ಅಲ್ಲಿ ಆಕ್ಸಿಡೆಂಟ್ ಆದ ವಾಹನ ಯಾವುದು ಎಂದು ನೋಡೋದು ನನ್ನ ಮೊದಲ ಉದ್ದೇಶ. ಒಂದು ಬಾರಿ ಯಾವ ವಾಹನ ಅಂತ ತಿಳಿದುಕೊಂಡ ನಂತರ ಆಕ್ಸಿಡೆಂಟ್ ಹೇಗಾಯಿತು ಯಾಕಾಯಿತು ಎಂಬ ವಿವರಗಳನ್ನು ಪತ್ರಿಕೆಗಳಲ್ಲಿ ಹುಡುಕಲು ಹೊರಡುತ್ತೇನೆ. ಉದಾಹರಣೆಗೆ ಮುಖಾಮುಖಿ ಡಿಕ್ಕಿ ಅಂತ ಇತ್ತು ಅಂತ ಅಂದುಕೊಳ್ಳೋಣ. ಈ ರೀತಿ ಎರಡು ವಾಹನಗಳು ಪರಸ್ಪರ ಎದುರು ಬದುರು ಡಿಕ್ಕಿ ಹೊಡೆದ ವಾಹನಗಳು ಯಾವುದು ಎಂದು ನೋಡಿದ ನಂತರ ಆ ಎರಡೂ ವಾಹನಗಳಿಗೆ ಎಷ್ಟು ಡ್ಯಾಮೇಜ್ ಆಗಿದೆ ಎಂದು ಗಮನಿಸಲು ತೊಡಗುತ್ತೇನೆ.
ಯಾವ ವಾಹನಕ್ಕೆ ಹೇಗೆ ಡ್ಯಾಮೇಜ್ ಆಗಿದೆ, ಸತ್ತವರು ಯಾವ ವಾಹನದಲ್ಲಿ ಇದ್ದವರು, ಯಾವ ವಾಹನ ಜಾಸ್ತಿ ಡ್ಯಾಮೇಜ್ ಆಗಿದೆ ? ಯಾವ ವೆಹಿಕಲ್ ಸಂಪೂರ್ಣ ಕಬ್ಬಿಣದ ಮುದ್ದೆಯ ಥರ ಆಗಿದೆ – ಇತ್ಯಾದಿಗಳನ್ನು ನಾನು ಗಮನಿಸುತ್ತೇನೆ. ಇದೆಲ್ಲ ಅಪಘಾತ ತನಿಖೆಯ ಒಂದು ಭಾಗ. ಇದೆಲ್ಲಾ ತನಿಖೆ ಮಾಡೋದು ಯಾವ ವಾಹನ ಜನರಿಗೆ ಸೇಫ್ಟಿ ಎಂದು ತಿಳಿದುಕೊಳ್ಳುವ ಕುತೂಹಲದಿಂದ. ನೀವೇ ಗಮನಿಸಿ, ಮಾರುತಿ ಸುಜುಕಿ ಕಂಪನಿಯ ವಾಹನಗಳು ಅಪಘಾತಗಳು ಸಂಭವಿಸಿದಾಗ ಪದೇ ಪದೇ ದೊಡ್ಡ ಮಟ್ಟದ ಡ್ಯಾಮೇಜ್ ಆಗುತ್ತವೆ. ಈ ಕಂಪನಿಯ ಕಾರುಗಳು ಆಕ್ಸಿಡೆಂಟ್ ಆದಾಗ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸುತ್ತದೆ. ಅದಕ್ಕೆ ಕಾರಣಗಳು ಕೂಡಾ ಸಿಗುತ್ತದೆ.
ಮಾರುತಿ ಸುಜುಕಿ ಕಾರುಗಳು ಅದ್ಭುತ ಫೀಚರ್ ಗಳಿಂದ ತುಂಬಿಕೊಂಡಿದ್ದು, ಆಕರ್ಷಕ ಬೆಲೆಯಲ್ಲಿ ದೊರೆಯುತ್ತವೆ. ಅದರ ಮೈಲೇಜ್ ಅಂತೂ ಅತ್ಯದ್ಭುತ. ಆದರೆ ಒಟ್ಟಾರೆ ಬಿಲ್ಡ್ ಕ್ವಾಲಿಟಿ ಪೂರ್ ಆಗಿದೆ. ಜತೆಗೆ ಸೇಫ್ಟಿ ಫೀಚರ್ ಗಳು ಆತ್ಯಂತ ಕೆಲ ಮಟ್ಟದಲ್ಲಿದೆ. ಈಗ ಹೊಸ ಮತ್ತು ದೊಡ್ಡ ಶ್ರೇಣಿಯ ಕಾರುಗಳಲ್ಲಿ ಸೇಫ್ಟಿ ಫೀಚರ್ ಚೆನ್ನಾಗಿ ಬರುತ್ತಿದ್ದರೂ, ಬಿಲ್ಡ್ ಕ್ವಾಲಿಟಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಕಾಣುತ್ತಿಲ್ಲ. ಹೀಗಾಗಿ, ನೀವೂ ಕೂಡಾ ಯಾವುದೇ ಆಕ್ಸಿಡೆಂಟ್ ನಡೆದಾಗ ತಕ್ಷಣ ಫೋಟೋ ಝೂಮ್ ಮಾಡಿ ಅಲ್ಲಿ ಆದ ಘಟನೆ ಮತ್ತು ವಾಹನದ ಬಗ್ಗೆ ನಿಮ್ಮದೇ ಇನ್ವೆಸ್ಟಿಗೇಷನ್ ಗೆ ಹೊರಡಿ. ಕೆಲವೇ ದಿನಗಳಲ್ಲಿ ನಿಮಗೇ ಪ್ರಾಕ್ಟಿಕಲ್ ಆಗಿ ಗೊತ್ತಾಗತ್ತೆ, ಯಾವ ವಾಹನ ನಿಮ್ಮ ಪ್ರಯಾಣಕ್ಕೆ ಸೇಫ್ ಎಂದು. ಅಂತಹ ಸುರಕ್ಷ ವಾಹನಗಳಲ್ಲಿ ನೀವು ಖರೀದಿಸಲು ಮತ್ತು ಪ್ರಯಾಣಿಸಲು ಆಯ್ಕೆ ಮಾಡಿಕೊಳ್ಳಿ. ಇದರ ಜತೆಗೆ ಸುರಕ್ಷತಾ ವಾಹನಗಳ ಬಗ್ಗೆ ವ್ಯಾಪಕ ಸಾಹಿತ್ಯ ಇಂಟರ್ನೆಟ್ ನಲ್ಲಿ ಲಭ್ಯವಿದೆ. ಅವುಗಳ ಬಗ್ಗೆ ಸದ್ಯದಲ್ಲಿಯೇ ವಿವರವಾದ ಲೇಖನದ ಮೂಲಕ ತಿಳಿಸಿ ಕೊಡಲಿದ್ದೇವೆ.
ಇದನ್ನೂ ಓದಿ: Hardhik pandya: ದೇವರ ಬೇಡಿ ಬಾಲ್ ಎಸೆದ ಹಾರ್ದಿಕ್ – ಎಗರಿ ಎಗರಿ ಬಿತ್ತು ಎದುರಾಳಿಯ ವಿಕೆಟ್, ವೈರಲ್ ಆಯ್ತು ವಿಡಿಯೋ !