DBT for Anna Bhagya scheme: ‘ರೇಷನ್ ಕಾರ್ಡ್’ದಾರರಿಗೆ ಮಹತ್ವದ ಮಾಹಿತಿ – ಕೂಡಲೇ ಈ ಕೆಲಸ ಮಾಡಿ, ಕುಳಿತಲ್ಲೇ ‘ಅನ್ನ ಭಾಗ್ಯದ’ ಹಣ ಪಡೆಯಿರಿ

Karnataka news Congress guarantee do this work immediately and get Anna Bhagya Yojana money

DBT for Anna Bhagya Yojana:
ಕರ್ನಾಟಕ ಸರ್ಕಾರವು ಅನ್ನ ಭಾಗ್ಯ ಯೋಜನೆಗಾಗಿ ನೇರ ಲಾಭ ವರ್ಗಾವಣೆ (DBT)ಯೋಜನೆಯನ್ನು ಪ್ರಾರಂಭಿಸಿದ್ದು, ಇದು ಬಿಪಿಎಲ್ ಕಾರ್ಡುದಾರರಿಗೆ(Bpl card Holders)ಹೆಚ್ಚುವರಿ 5 ಕೆಜಿ ಅಕ್ಕಿಯ ಹಣವನ್ನು ನೀಡುತ್ತಿದೆ. ಅಂದರೆ ಈ ಹಣವನ್ನು ಅವರ ಆಧಾರ್ ಸಂಖ್ಯೆಗಳಿಗೆ (Aadhaar Number) ಲಿಂಕ್ ಮಾಡಿದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.

ರಾಜ್ಯ ಅನ್ನಭಾಗ್ಯ ಯೋಜನೆಯಡಿ(Anna Bhagya Yojana money) ಹೆಚ್ಚುವರಿ 5 ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಸದ್ಯ ಪಡಿತರ ಚೀಟಿದಾರರ ಖಾತೆಗೆ ಸೆಪ್ಟೆಂಬರ್ ತಿಂಗಳ ಹಣ ಕೆಲವರಿಗೆ ವರ್ಗಾವಣೆ ಆಗಿದ್ದು ಮತ್ತೆ ಕೆಲವರಿಗೆ ಇನ್ನೂ ಹಣ ವರ್ಗಾವಣೆಯಾಗಿಲ್ಲ. ಈ ನಡುವೆ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೆ ಇರುವ ಹಿನ್ನೆಲೆ ಅನ್ನಭಾಗ್ಯದ ಹಣ ಇನ್ನೂ ಕೆಲವು ಮಂದಿಗೆ ತಲುಪಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ಖಾತೆಗೂ ಆಧಾರ್ ಜೋಡಣೆ ಮಾಡಿಸಬೇಕಾಗಿದ್ದು, ಹೀಗಾಗಿ ಇಕೆವೈಸಿ ಆಗದೆ ಇರುವ ಫಲಾನುಭವಿಗಳಿಗೆ ಡಿಬಿಟಿ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪಡಿತರ ಚೀಟಿದಾರರು ತಪ್ಪದೇ ಈ ಕೆಲಸ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದು, ಬ್ಯಾಂಕ್ ಮಾತ್ರವಲ್ಲದೆ ಅಂಚೆ ಕಚೇರಿಯಲ್ಲಿಯೂ ಕೂಡ ಖಾತೆ ಆರಂಭಿಸಬಹುದು. ಈ ಖಾತೆಗೆ ಆಧಾರ್ ಲಿಂಕ್ ಮಾಡಿಸಿದ್ದಲ್ಲಿ ಹಣ ಡಿಬಿಟಿ ಆಗಲಿದೆ.

ಹಣ ಬಂದಿದೆಯೇ ಎಂಬುದನ್ನು ಹೀಗೆ ತಿಳಿಯಿರಿ!
* ಆಹಾರ ಇಲಾಖೆಯ ವೆಬ್ ಸೈಟ್ https://ahara.kar.nic.in/ ಲಾಗಿನ್ ಆಗಿ.
* ಲಾಗಿನ್ ಆದ ಬಳಿಕ ನಿಮಗೆ ಸ್ಟೇಟಸ್ ಆಫ್ ಡಿಬಿಟಿ ಎನ್ನುವ ಆಯ್ಕೆ ಕಾಣಿಸಲಿದ್ದು, ಅದನ್ನು ಆಯ್ಕೆ ಮಾಡಿಕೊಳ್ಳಿ.
* ಆ ಬಳಿಕ ನಿಗದಿತ ಕಾಲಂ ನಲ್ಲಿ ರೇಷನ್ ಕಾರ್ಡ್ ನ ನಂಬರ್ ಅಥವಾ ಆರ್ ಸಿ ನಂಬರ್ ಭರ್ತಿ ಮಾಡಿ.
* ನಿಮ್ಮ ರೇಷನ್ ಕಾರ್ಡ್ ನ ಮೇಲ್ಬಾಗದಲ್ಲಿ ಕಾಣಿಸುವ ಆರ್ ಸಿ ನಂಬರ್ ಅನ್ನು ಇಲ್ಲಿ ನಮೂದಿಸಿಕೊಂಡು ಮುಂದುವರೆಯಿರಿ ಎಂಬ ಆಯ್ಕೆಯನ್ನು ಕ್ಕಿಕ್ಕಿಸಿ.
* ಮುಂದಿನ ಪುಟದ ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನು ತಿಳಿಯಬಹುದು.
* ಒಂದು ವೇಳೆ, ನಿಮ್ಮ ಖಾತೆಗೆ ಹಣ ಜಮೆ ಆಗದಿದ್ದರೆ, ಅದು ಯಾವ ಕಾರಣದಿಂದ ಜಮೆ ಆಗಿಲ್ಲ ಎಂಬ ಮಾಹಿತಿ ಕೂಡ ನಿಮಗೆ ದೊರೆಯಲಿದೆ.

ಇದನ್ನೂ ಓದಿ : Ujjwala yojana(PMUY):`BPL’ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಬೊಂಬಾಟ್ ಸುದ್ದಿ- ಉಚಿತ ಗ್ಯಾಸ್ ಸಿಲಿಂಡರ್ ಬೇಕಂದ್ರೆ ಈ ಕೂಡಲೇ, ಹೀಗೆ ಅರ್ಜಿ ಸಲ್ಲಿಸಿ

Leave A Reply

Your email address will not be published.