Israel-Gaza conflict: ಇಸ್ರೇಲ್ ರೀತಿ ಭಾರತದ ಮೇಲೂ ದಾಳಿ ?! ಅರೆ… ಏನಿದು ಶಾಕಿಂಗ್ ನ್ಯೂಸ್ ?!

World news Israel-Gaza conflict Terrorist shares a video of Attack on India like Israel

Share the Article

Israel-Gaza conflict : ಭಾರತೀಯ ಸರಕಾರ ಪಂಜಾಬ್‌ ಮೇಲೆ ತನ್ನ ಅಧಿಪತ್ಯವನ್ನು ಇದೆ ರೀತಿ ಮುಂದುವರೆಸಿದರೆ ಇಸ್ರೇಲ್‌ ಮೇಲೆ ನಡೆದ ಹಮಾಸ್‌(Israel-Gaza conflict) ಉಗ್ರರ ದಾಳಿ ಮಾದರಿಯಲ್ಲಿ ಭಾರತದ ಮೇಲೆ ಕೂಡ ದಾಳಿ ನಡೆಸಲಾಗುವುದು” ಎಂದು ಖಲಿಸ್ತಾನಿ ಬೆಂಬಲಿತ ನಿಷೇಧಿತ ಉಗ್ರಗಾಮಿ ಸಂಘಟನೆ ‘ಸಿಖ್‌ ಫಾರ್‌ ಜಸ್ಟೀಸ್‌’ (Sikhs for Justice)ಸಂಘಟನೆ ಬೆದರಿಕೆ ಹಾಕಿದೆ.

Israel-Gaza conflict

ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆ ‘ಲಿಬರೇಷನ್‌ ಆಫ್‌ ಪಂಜಾಬ್‌’ (Liberation Of Punjab)ಸ್ಥಾಪನೆಗೆ ಹೋರಾಟ ನಡೆಸುತ್ತಿದ್ದು, ಇದಕ್ಕಾಗಿ ಜನಮತಗಣನೆ ನಡೆಸುವಂತೆ ದೀರ್ಘಕಾಲದಿಂದ ಆಗ್ರಹ ಮಾಡುತ್ತಿದೆ. ಈ ನಡುವೆ ಭಾರತ ಸರಕಾರ (Indian government)’ಮತದಾನ ಬೇಕೋ ಇಲ್ಲವೇ ಬುಲೆಟ್‌ ಬೇಕೋ’ (ಬುಲೆಟ್‌ ಅಥವಾ ಬ್ಯಾಲೆಟ್‌) ಎಂಬುದನ್ನು ಆಯ್ಕೆ ಮಾಡಿಕೊಳ್ಳಲಿ,” ಎಂದು ವಿಡಿಯೋದಲ್ಲಿ ಪನ್ನು ಎಚ್ಚರಿಕೆಯ ಕರೆ ನೀಡಿದ್ದಾನೆ.

“ಪಂಜಾಬ್‌ನಿಂದ ಪ್ಯಾಲೆಸ್ತೀನ್‌ವರೆಗೆ ಅಕ್ರಮ ಅತಿಕ್ರಮಣದ ಅಡಿಯಲ್ಲಿರುವ ಜನರು ಪ್ರತಿಕ್ರಯಿಸುತ್ತಾರೆ. ಹಿಂಸಾಚಾರವು ಹಿಂಸೆಯ ರೂಪವನ್ನೇ ಪ್ರತಿದ್ವನಿಸುತ್ತದೆ. ಒಂದು ವೇಳೆ, ಭಾರತ ನಮ್ಮ ಮಾತೃಭೂಮಿ ಪಂಜಾಬ್‌ ಮೇಲೆ ಅತಿಕ್ರಮಣ ಮಾಡುವ ಪ್ರವೃತ್ತಿಯನ್ನು ನಿಲ್ಲಿಸದೆ ಮುಂದುವರಿಸುತ್ತಾ ಹೋದಲ್ಲಿ ಹಮಾಸ್‌ ದಾಳಿಯ ರೀತಿಯಲ್ಲೇ ತಕ್ಕ ಶಾಸ್ತಿ ಮಾಡುವುದು ಖಚಿತ. ಇದಕ್ಕೆ ನೇರವಾಗಿ ಪ್ರಧಾನಿ ಮೋದಿಯೇ ಹೊಣೆ ಹೊರಬೇಕಾಗುತ್ತದೆ,” ಎಂದು ವಿಡಿಯೋದಲ್ಲಿ ಉಗ್ರ ಗುರು ಪತ್ವಂತ್ ಸಿಂಗ್‌ ಪನ್ನು ಬೆದರಿಕೆಯೊಡ್ಡಿದ್ದಾನೆ.

ಸಾಮಾಜಿಕ ಜಾಲ ತಾಣದಲ್ಲಿ ಬೆದರಿಕೆ ಹಾಕಿರುವ ವಿಡಿಯೋ ಹಂಚಿಕೊಂಡಿರುವ ಎಸ್‌ಎಫ್‌ಜೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್‌ ಪನ್ನು, “ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧದಿಂದ ಪ್ರಧಾನಿ ಮೋದಿ ಪಾಠ ಕಲಿಯಬೇಕಾಗಿದೆ. ಪಂಜಾಬ್‌ ಮೇಲೆ ದೌರ್ಜನ್ಯ ಮುಂದುವರಿಸಿದರೆ ಮುಂದೊಂದು ದಿನ ಇದೇ ಘಟನೆ ಭಾರತದಲ್ಲೂ ಘಟಿಸಲಿದೆ ಎನ್ನುವ ಮೂಲಕ ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾನೆ.

ಇದನ್ನೂ ಓದಿ: Mangaluru Crime: ಮಂಗಳೂರು ಉದ್ಯಮಿ ಆತ್ಮಹತ್ಯೆ ಪ್ರಕರಣ : ಮಹತ್ವದ ವಿಚಾರ ಪತ್ತೆ ಹಚ್ಚಿದ ಪೊಲೀಸರು!!! ಆತ್ಮಹತ್ಯೆ ಹಿಂದೆ ಇದೆ ಹಲವು ಕಾರಣ

Leave A Reply