Laptop: ಯಬ್ಬೋ.. ಮನೆಯವರು ಲ್ಯಾಪ್ ಟಾಪ್ ಕೊಡ್ಲಿಲ್ಲ ಎಂದು ತಾನೇ ಹೊಸ ಲ್ಯಾಪ್ ತಯಾರಿಸೋದ ಈ ಪುಟ್ಟ ಪೋರಿ !! ವೈರಲ್ ಆಯ್ತು ಅಚ್ಚರಿಯ ವಿಡಿಯೋ

What did this little girl do when her family didn't give her a laptop

Laptop: ಮಕ್ಕಳು ಸಾಧಕ ಅಥವಾ ಬಾಧಕ ಮಾಡಿದರು ಅದಕ್ಕೆ ಪೋಷಕರೇ ಒಂದು ರೀತಿಯಲ್ಲಿ ಕಾರಣ ಆಗಿರುತ್ತಾರೆ. ಇನ್ನು ಮಕ್ಕಳ ಆಸೆಯನ್ನು ಈಡೇರಿಸುವುದು ಹೆತ್ತವರ ಕರ್ತವ್ಯ. ಹಾಗಂತ ಅತಿಯಾಗಿ ಮುದ್ದು ಮಾಡಿ ಬೆಳೆಸಿದರೆ ಮಕ್ಕಳು ಹೇಳಿದಂತೆ ಹೆತ್ತವರು ಕುಣಿಯಬೇಕಾಗಬಹುದು.

ಈಗಿನ ಸ್ಮಾರ್ಟ್ ಯುಗದಲ್ಲಿ ಬಯಲಿನಲ್ಲಿ ಆಟ ಆಡಲು ಮಕ್ಕಳು ಸುತಾರಾಮ್ ಇಷ್ಟ ಪಡುವುದಿಲ್ಲ. ಅದರ ಹೊರತು ಮಕ್ಕಳು ಆಟವಾಡಲು ಸ್ಮಾರ್ಟ್‌ಫೋನ್ (Smartphone), ಲ್ಯಾಪ್‌ಟಾಪ್‌ಗಳಂತಹ (Laptop) ಸಾಧನಗಳನ್ನು ಹೆಚ್ಚಾಗಿ ಕೇಳುತ್ತಾರೆ. ಕೆಲವು ಪೋಷಕರು ತಮ್ಮ ಮಕ್ಕಳಿಗೆ ಆಟವಾಡಲು ಈ ಸಾಧನವನ್ನು ನೀಡಿದರೆ, ಕೆಲವರು ಮಕ್ಕಳ ಕಾಳಜಿಯಿಂದ ಈ ಸಾಧನವನ್ನು ಅವರ ಕೈಗೆ ನೀಡುವುದಿಲ್ಲ.

ಸದ್ಯ, ಮಹಿಳೆಯೊಬ್ಬರು ಬಾಲಕಿಗೆ ಲ್ಯಾಪ್ ಟಾಪ್ ನೀಡದ ಕಾರಣ ಬಾಲಕಿ ಸ್ವತಃ ಲ್ಯಾಪ್ ಟಾಪ್ ತಯಾರಿಸಿದ್ದಾರೆ. ಸಹಜವಾಗಿ, ಈ ಲ್ಯಾಪ್‌ಟಾಪ್ ಆಟಿಕೆಯಾಗಿದ್ದರೂ, ಮಹಿಳೆ ಈ ಲ್ಯಾಪ್‌ಟಾಪ್‌ನ ಫೋಟೋವನ್ನು ಸೋಷಿಯಲ್ ಮೀಡಿಯಾ (Social Media Viral) ಪ್ಲಾಟ್​ಫಾರ್ಮ್ ಆಗಿರುವ ‘X’ ನಲ್ಲಿ ಅಪ್‌ಲೋಡ್ ಮಾಡಿದ್ದು, ಅದು ಎಲ್ಲೆಡೆ ವೈರಲ್ ಆಗುತ್ತಿದೆ.

ಸೋಷಿಯಲ್ ಮೀಡಿಯಾ ಬಳಕೆದಾರರಾದ ನೇಹಾ ಅವರು ತಮ್ಮ ಸೊಸೆ ಕಾರ್ಡ್‌ಬೋರ್ಡ್ ಬಳಸಿ ಮಾಡಿದ ಲ್ಯಾಪ್‌ಟಾಪ್‌ನ ಫೋಟೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಶೇರ್​ ಮಾಡಿಕೊಂಡಿದ್ದು, ‘ನನ್ನ ಸೊಸೆ ನನ್ನ ಲ್ಯಾಪ್‌ಟಾಪ್ ಆಡಲು ಕೇಳಿದಳು. ಆದರೆ ನಾನು ಕೊಡಲು ನಿರಾಕರಿಸಿದ್ದರಿಂದ, ಆಕೆ ಒಬ್ಬಂಟಿ ಯಾಗಿ 3 ಗಂಟೆಗಳಲ್ಲಿ ತಾನೇ ಸ್ವಂತ ಲ್ಯಾಪ್‌ಟಾಪ್ ತಯಾರಿಸಿದ್ದಾಳೆ,’ ಎಂದು ಫೋಟೋ ಸಹಿತ ಶೀರ್ಷಿಕೆ ಹಾಕಿದ್ದಾರೆ.

ವಿಶೇಷ ಅಂದರೆ ಸೋಶಿಯಲ್ ಮೀಡಿಯಾದಲ್ಲಿ ನೇಹಾ ತನ್ನ ಸೊಸೆ ತಯಾರಿಸಿದ ಗೇಮಿಂಗ್ ಲ್ಯಾಪ್‌ಟಾಪ್‌ನ ಫೋಟೋವನ್ನು ಅಪ್‌ಲೋಡ್ ಮಾಡಿದಾಗಿನಿಂದ, ಇತರ ಬಳಕೆದಾರರಿಂದ ‘ಈ ಲ್ಯಾಪ್‌ಟಾಪ್ ಸೂಪರ್ ಆಗಿದೆ ಎಂದು ‘ಎಕ್ಸ್’ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅದರಲ್ಲೂ, ಇನ್ನೊಬ್ಬ ಬಳಕೆದಾರರು ‘ಅವಳ ಕೀಬೋರ್ಡ್ ಹೆಚ್ಚಿನ ಆಯ್ಕೆಗಳನ್ನು ಹೊಂದಿದೆ ಎಂದು ಬರೆದಿದ್ದಾರೆ’ ಒಟ್ಟಿನಲ್ಲಿ ಕಾರ್ಡ್‌ಬೋರ್ಡ್‌ನಿಂದ ಆಟಿಕೆ ಲ್ಯಾಪ್‌ಟಾಪ್ ತಯಾರಿಸಿದ ಹುಡುಗಿಯನ್ನು ಹಲವರು ಪ್ರಶಂಸಿಸಿದ್ದಾರೆ.

https://x.com/LadyPeraltaa/status/1708353776917365039?s=20

ಇದನ್ನು ಓದಿ: Ram Mandir: ಅಯೋಧ್ಯಾ ರಾಮಮಂದಿರ ಅರ್ಚಕರ ವೇತನದಲ್ಲಿ ಭಾರೀ ಹೆಚ್ಚಳ- ಎಷ್ಟೆಂದು ತಿಳಿದ್ರೆ ನೀವೇ ಅಚ್ಚರಿ ಪಡ್ತೀರಾ !!

Leave A Reply

Your email address will not be published.