Home latest Uttar Pradesh: ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ್ಲು ನಾಪತ್ತೆಯಾದ ಹುಡುಗಿ – ಬಾಯಿಗೆ ಕೆಸರು ತುಂಬಿ, ಕಣ್ಣಿಗೆ...

Uttar Pradesh: ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ್ಲು ನಾಪತ್ತೆಯಾದ ಹುಡುಗಿ – ಬಾಯಿಗೆ ಕೆಸರು ತುಂಬಿ, ಕಣ್ಣಿಗೆ ಕಬ್ಬಿನಿಂದ ಚುಚ್ಚಿ ಬರ್ಬರವಾಗಿ ಕೊಂದ ಪಾಪಿಗಳು

Uttar Pradesh

Hindu neighbor gifts plot of land

Hindu neighbour gifts land to Muslim journalist

Uttar pradesh : ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಇದೀಗ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅಕೆಯ ಬಾಯಿಗೆ ಕೆಸರು ತುಂಬಿ, ಕಬ್ಬಿನಿಂದ ಕಣ್ಣಿಗೆ ಚುಚ್ಚಿ ಕೊಂದಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಕಳೆದ ಭಾನುವಾರದಂದು ಉತ್ತರಪ್ರದೇಶದಲ್ಲಿ(Uttar pradesh) ಸ್ಥಳೀಯ ಮದರಸಾದಿಂದ ಹಿಂತಿರುಗುವಾಗ 13 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಇದೀಗ ಕ ಪುಟ್ಟ ಕಂದಳ ವಿರೂಪಗೊಂಡ ಶವ ಲಖಿಂಪುರ ಖೇರಿ ಜಿಲ್ಲೆಯ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದು ಆಕೆಯನ್ನು ಪಾಪಿಗಳು ಬರ್ಬರವಾಗಿ ಕೊಂದುಹಾಕಿದ್ದಾರೆ.

ಅಂದಹಾಗೆ ವೈದ್ಯರ ತಂಡ ಶವಪರೀಕ್ಷೆ ಮಾಡಿದ್ದು, ವರದಿಯ ಪ್ರಕಾರ ಬಾಲಕಿಯ ಬಾಯಲ್ಲಿ ಕೆಸರು ತುಂಬಿದ್ದು ಅವಳನ್ನು ಹಿಂಸಿಸಿ ಸಾಯಿಸುವ ಮೊದಲು ಅವಳ ಕಣ್ಣುಗಳನ್ನು ಕಬ್ಬಿನಿಂದ ಚುಚ್ಚಲಾಗಿದೆ. ಇದೀಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾನುವಾರ ತಡರಾತ್ರಿಯಾದರೂ ಆಕೆ ವಾಪಸ್‌ ಬಾರದೆ ಇರುವುದರಿಂದ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಮರುದಿನ ಬೆಳಿಗ್ಗೆ ಗ್ರಾಮಸ್ಥರು ಬಾಲಕಿಯ ಛಿದ್ರಗೊಂಡ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಸದ್ಯ ಸಂತ್ರಸ್ತೆಯ ಕುಟುಂಬದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದೀಗ ಫೊರೆನ್ಸಿಕ್ ತಂಡವು ಸಾಕ್ಯ್ಗಗಳನ್ನು ಸಂಗ್ರಹಿಸುತ್ತಿದೆ. ಆಕೆಯ ಖಾಸಗಿ ಅಂಗಗಳ ಬಳಿ ಏಟುಗಳು ಕಂಡುಬಂದಿದ್ದು, ಲೈಂಗಿಕ ದೌರ್ಜನ್ಯದ ದೃಢೀಕರಣಕ್ಕಾಗಿ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Israel-Palestinian war: ಉಗ್ರರು ಕೊಲೆಗೈದ ಪುಟ್ಟ ಕಂದಮ್ಮಗಳ ಫೋಟೋ ಹಂಚಿಕೊಂಡ ಇಸ್ರೇಲ್ – ಭೀಕರ ದೃಶ್ಯ ಕಂಡು ಉಸಿರುಗಟ್ಟಿದ ಜಗತ್ತು