Beggar Purchased iPhone with Coins: ಚಿಲ್ಲರೆ ನೀಡಿ ಐಫೋನ್ 15 ಖರೀದಿಗೆ ಮುಂದಾದ ಭಿಕ್ಷುಕ: ಅಂಗಡಿ ಮಾಲೀಕನಿಗೆ ಕಾದಿತ್ತು ಶಾಕ್!

Hyderabad intresting news Beggar Purchased iPhone 15 through giving Coins latest news

Beggar Purchased iPhone with Coins: ಮೊಬೈಲ್ ಎಂಬ ಮಾಯಾವಿ ಇಂದು ಎಲ್ಲರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಐಫೋನ್(iPhone )ಖರೀದಿ ಮಾಡಬೇಕೆಂದು ಹೆಚ್ಚಿನವರು ಬಯಸುವುದು ಸಹಜ. ಆದರೆ , ಐಫೋನ್ ಖರೀದಿ ಮಾಡುವುದು ಸುಲಭದ ಮಾತಲ್ಲ. ಜೇಬು ತುಂಬಾ ಝಣ ಝಣ ಕಾಂಚಾಣವಿದ್ದರೆ ಮಾತ್ರ ಐಫೋನ್ ಖರೀದಿಯ ಕನಸು ನನಸಾಗುತ್ತದೆ.ಆದರೆ ಇಲ್ಲೊಬ್ಬ ಭಿಕ್ಷುಕ(Beggar)ಐಫೋನ್ ಖರೀದಿ ಮಾಡುವುದಕ್ಕೆ ಹೋದಾಗ ಏನಾಯ್ತು ಗೊತ್ತಾ?

ಭಿಕ್ಷುಕನೊಬ್ಬ ಜೋಧ್‌ಪುರದ ರಸ್ತೆ ಬಳಿ ಇರುವ ಕೆಲವು ಮೊಬೈಲ್ ಶೋರೂಮ್‌ಗಳಿಗೆ ಭೇಟಿ ನೀಡಿ ಚಿಲ್ಲರೆ ಹಣ ನೀಡಿ ಐಫೋನ್ ಖರೀದಿ(Beggar Purchased iPhone with Coins)ಮಾಡಲು ಮುಂದಾಗಿದ್ದಾನೆ. ಆದರೆ,ಕೆಲ ಮೊಬೈಲ್ ಮಳಿಗೆಯವರು ಆತನನ್ನು ಅಂಗಡಿಯ ಒಳ ಪ್ರವೇಶಿಸಲು ಅವಕಾಶ ನೀಡಿಲ್ಲ. ಇನ್ನೂ ಕೆಲ ಮೊಬೈಲ್ ಮಳಿಗೆಯವರು ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.ಆದರೆ, ಅದೃಷ್ಟವಶಾತ್ ಅಂಗಡಿ ಮಾಲೀಕನೊಬ್ಬ ನಾಣ್ಯಗಳನ್ನು ತೆಗೆದುಕೊಂಡು ಐಫೋನ್ ಪ್ರೊ ಮ್ಯಾಕ್ಸ್ ನೀಡಿದ್ದಾರೆ. ಇಡೀ ಪ್ರಕ್ರಿಯೆ ಮುಗಿದ ಬಳಿಕ ಭಿಕ್ಷುಕ ತಾನು ನಿಜವಾದ ಭಿಕ್ಷುಕನಲ್ಲ ಆದರೆ ತಾನು ತಮಾಷೆ ಮಾಡಿದ್ದಾಗಿ ಬಹಿರಂಗಪಡಿಸಿದ ಸಂದರ್ಭ ಅಂಗಡಿ ಮಾಲೀಕ ಅಚ್ಚರಿಗೊಂಡಿದ್ದಾರೆ.

ಭಿಕ್ಷುಕನೊಬ್ಬ ಮೊಬೈಲ್ ಅಂಗಡಿಗೆ ಪ್ರವೇಶಿಸಿದರೆ ಅಂಗಡಿಯ ವ್ಯವಸ್ಥಾಪಕರು ಹೇಗೆ ಪ್ರತಿಕ್ರಿಯಿಸುತ್ತಾರೆ? ಅವರು ತಮ್ಮ ಮಳಿಗೆಗಳ ಒಳಗೆ ಭಿಕ್ಷುಕನನ್ನು ಅನುಮತಿ ನೀಡುತ್ತಾರಾ? ನಗದು ಬದಲಿಗೆ ನಾಣ್ಯಗಳನ್ನು( Coins)ತೆಗೆದುಕೊಳ್ಳಲು ಅಂಗಡಿಯವರು ಒಪ್ಪುತ್ತಾರಾ? ಎಂಬುದನ್ನು ಪರೀಕ್ಷಿಸುವ ಸಲುವಾಗಿ ಯುವಕನೊಬ್ಬ ಭಿಕ್ಷುಕನ ವೇಷ ತೊಟ್ಟು ಮೊಬೈಲ್ ಅಂಗಡಿ ಮಾಲೀಕರನ್ನು ಮಂಗ ಮಾಡಿದ್ದಾನೆ. ಸದ್ಯ, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ. ಯುವಕ ತಾನು ಅಂಗಡಿಯ ಮಾಲೀಕರಿಗೆ ಚೇಷ್ಟೆ ಮಾಡಿದ್ದಾಗಿ ಹೇಳಿದ ಸಂದರ್ಭ ಅಂಗಡಿ ಮಾಲೀಕರು ತಮಾಷೆಯಾಗಿಯೇ ಸ್ವೀಕರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಈ ವೀಡಿಯೋಗೆ ತರಹೇವಾರಿ ಕಾಮೆಂಟ್ಸ್ ಬರುತ್ತಿದೆ.

https://twitter.com/i/status/1711342790767165596

ಇದನ್ನು ಓದಿ: ಹೆಚ್ಚಾಗಿ ಬಿಸಿನೀರು ಸೇವನೆ ದೇಹಕ್ಕೆ ಹಾನಿಯೇ ?! ಏನು ಹೇಳ್ತಾರೆ ತಜ್ಞರು

Leave A Reply

Your email address will not be published.