Health tips: ಖಾಲಿ ಹೊಟ್ಟೆಗೆ ಈ ತರಕಾರಿಯ ರಸ ಕುಡಿಯಿರಿ, ಒಂದೇ ವಾರದಲ್ಲಿ ಹೊಟ್ಟೆ ಬೊಜ್ಜು ಹೇಗ್ ಕರಗುತ್ತೆ ನೋಡಿ !
Helath Tips: ಹೊಟ್ಟೆಯ ಬೊಜ್ಜು (obesity) ಕರಗಿಸೋದು ಒಂದು ಸವಾಲೇ ಸರಿ. ಡೊಳ್ಳು ಹೊಟ್ಟೆಯನ್ನು ಕರಗಿಸಲು ಅನೇಕ ಜನರು ವಿವಿಧ ರೀತಿಯ ವ್ಯಾಯಾಮಗಳು, ಯೋಗಾಸನ ಹಾಗೂ ವರ್ಕ್ಔಟ್ಗಳನ್ನು ಮಾಡುತ್ತಾರೆ. ಆದರೆ ಹೊಟ್ಟೆ ಮಾತ್ರ ಸ್ವಲ್ಪವೂ ಕರಗಿದಂತೆ ಕಾಣೋದೆ ಇಲ್ಲ. ನೀವು ಖಾಲಿ ಹೊಟ್ಟೆಗೆ ಈ ತರಕಾರಿಯ ರಸ ಕುಡಿಯಿರಿ. ಒಂದೇ ವಾರದಲ್ಲಿ ಹೊಟ್ಟೆ ಬೊಜ್ಜು ಹೇಗ್ ಕರಗುತ್ತೆ ನೋಡಿ ! (Helath Tips)
ಸೌತೆಕಾಯಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದರಲ್ಲಿ ನೀರಿನಂಶ ಹೇರಳವಾಗಿದ್ದು, ಅದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಇದು ಅನೇಕ ಇತರ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಸೌತೆಕಾಯಿ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಮಲಬದ್ಧತೆ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ಇದರೊಂದಿಗೆ ಅಸಿಡಿಟಿ, ಹೊಟ್ಟೆ ಉಬ್ಬರ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಸೌತೆಕಾಯಿಯ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅನೇಕ ರೀತಿಯ ಸೋಂಕುಗಳು ಮತ್ತು ವೈರಲ್ ಜ್ವರದಿಂದ ಜನರನ್ನು ಇದು ರಕ್ಷಿಸುತ್ತದೆ. ರಕ್ತದೊತ್ತಡ ರೋಗಿಗಳಿಗೆ ಇದು ಬೆಸ್ಟ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಕಂಡುಬರುವ ಮೆಗ್ನೀಸಿಯಮ್ ದೇಹಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಬೆಳಿಗ್ಗೆ ಸೌತೆಕಾಯಿ ರಸವನ್ನು ಕುಡಿದರೆ ತುಂಬಾ ಪ್ರಯೋಜನವಿದೆ.
ನೀವು ಅರ್ಧ ಇಂಚಿನ ಶುಂಠಿ, ನಿಂಬೆರಸ, ಒಂದು ಹಿಡಿಯಷ್ಟು ಕೊತ್ತಂಬರಿ ಸೊಪ್ಪು, ಒಂದು ಹಿಡಿಯಷ್ಟು ಪುದೀನಾ, ರುಚಿಗೆ ತಕ್ಕಂತೆ ಉಪ್ಪು, ಒಂದು ಚಮಚ ಜೇನುತುಪ್ಪ ಮತ್ತು ಎರಡು ಕಪ್ ನೀರು ಸೇರಿಸಿ ಮಿಕ್ಸ್ ಮಾಡಬೇಕು. ಸರ್ವಿಂಗ್ ಬೌಲ್’ನಲ್ಲಿ ಜ್ಯೂಸ್ ತೆಗೆದು ಫಿಲ್ಟರ್ ಮಾಡಿ ಕುಡಿಯಿರಿ.
ಆರೋಗ್ಯಕರ ಸೌತೆಕಾಯಿ ಜ್ಯೂಸ್ ಅನ್ನು ಕುಡಿದರೆ ನಿಮ್ಮ ಆರೋಗ್ಯದಲ್ಲಿ ಉತ್ತಮ ಲಾಭವನ್ನು ಕಾಣಬಹುದು. ಇದರಿಂದ ದೇಹವು ಹೈಡ್ರೇಟ್ ಆಗಿ ಉಳಿಯುತ್ತದೆ ಮತ್ತು ನಿಮ್ಮ ಚರ್ಮವೂ ಹೊಳೆಯುತ್ತದೆ. ಸೌತೆಕಾಯಿಯ ಜ್ಯೂಸ್ ನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ದೃಢವಾಗಿಸಲು ನೆರವಾಗುವ ಜೊತೆಗೇ ದೇಹದಲ್ಲಿ ರಸದೂತಗಳ ಮಟ್ಟಗಳನ್ನೂ ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಈ ಮೂಲಕ ವಿಶೇಷವಾಗಿ ಪಿಟ್ಯುಟರಿ ಮತ್ತು ಥೈರಾಯ್ಡ್ ಗ್ರಂಥಿಗಳ ಕಾರ್ಯಕ್ಷಮತೆ ಉತ್ತಮವಾಗಿರಲು ನೆರವಾಗುತ್ತದೆ.