Aadhar card: ಆಧಾರ್ ಕಾರ್ಡ್ ಹೊಂದಿರೋ ದೇಶದ ಎಲ್ಲಾ ಮಹಿಳೆಯರಿಗೆ ಭರ್ಜರಿ ಸುದ್ದಿ- ಇನ್ಮುಂದೆ ಈ ಕೆಲಸ ಬಹಳ ಸುಲಭ !

Aadhaar Card : ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಆಧಾರ್ ಕಾರ್ಡ್​ ಅನ್ನು ವ್ಯಕ್ತಿಯ ಗುರುತನ್ನು ಸಂಕೇತಿಸುವ ಮೂಲ ದಾಖಲೆಯಾಗಿ ಕೂಡ ಪರಿಗಣಿಸಲಾಗುತ್ತದೆ.
ಸದ್ಯ ಆಧಾರ್ ಕಾರ್ಡ್ ಹೊಂದಿರೋ ದೇಶದ ಎಲ್ಲಾ ಮಹಿಳೆಯರಿಗೆ ಬೊಂಬಾಟ್ ಸುದ್ದಿ ಇಲ್ಲಿದೆ. ಇನ್ಮುಂದೆ ಈ ಕೆಲಸ ಬಹಳ ಸುಲಭ !

ಇದೀಗ ಮದುವೆಯಾಗಿರುವ ಮಹಿಳೆಯರಿಗೆ ಆಧಾರ್ ಸಂಬಂಧಿತ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಸಾಮಾನ್ಯವಾಗಿ ಮದುವೆಗೂ ಮುನ್ನ ಮಹಿಳೆಯರು ಆಧಾರ್ ನಲ್ಲಿ ತಮ್ಮ ಹೆಸರನ್ನು ಮಾತ್ರ ನೋಂದಾಯಿಸುತ್ತಾರೆ. ಮದುವೆಯಾದ ಬಳಿಕ ಮಹಿಳೆಯರು ಆಧಾರ್ ನಲ್ಲಿ ತಮ್ಮ ಹೆಸರಿನೊಂದಿಗೆ ತಮ್ಮ ಗಂಡನ ಹೆಸರನ್ನು ಸೇರಿಸಲು ಬಯಸುತ್ತಾರೆ. ನೀವು ನಿಮ್ಮ ಆಧಾರ್ ನಲ್ಲಿ ನಿಮ್ಮ ಗಂಡನ ಉಪನಾಮವನ್ನು ಸೇರಿಸಲು ಬಯಸಿದರೆ ಇಲ್ಲಿದೆ ಮಾಹಿತಿ.

ಆಧಾರ್ ನಲ್ಲಿ ಉಪನಾಮ ಬದಲಾವಣೆ ಹೇಗೆ?!

• ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ನಿಮ್ಮ ಪತಿಯ ಜೊತೆ ಭೇಟಿ ನೀಡಿ.
• ತಿದ್ದುಪಡಿ ಫಾರ್ಮ್ ಅನ್ನು ಭರ್ತಿಮಾಡಿ ಅದರಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್‌ನಲ್ಲಿ ನೀವು ಬದಲಾಯಿಸಲು ಬಯಸುವ ಆಧಾರ್ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ನೀಡಬೇಕು.
• ನಿಮ್ಮ ಗಂಡನ ಆಧಾರ್ ಕಾರ್ಡ್ ಮತ್ತು ಮದುವೆಯ ಪ್ರಮಾಣಪತ್ರವನ್ನು ಒಳಗೊಂಡಿರುವ ದಾಖಲೆಗಳು ನಿಮಗೆ ಬೇಕಾಗಬಹುದು.
• ಈ ಭರ್ತಿಮಾಡಿದ ಫಾರ್ಮ್‌ನೊಂದಿಗೆ ಕೆಲವು ಸಂಬಂಧಿತ ದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕು.
• ನಂತರ ನಿಮ್ಮ ಫೋಟೋ ಕ್ಲಿಕ್ ಮಾಡಲಾಗುತ್ತದೆ ಬಳಿಕ ನಿಮ್ಮ ಬಯೋಮೆಟ್ರಿಕ್ ತೆಗೆದುಕೊಳ್ಳಲಾಗುತ್ತದೆ.
• ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ಅಧಿಕಾರಿಯಿಂದ ನವೀಕರಿಸಲಾಗುತ್ತದೆ.
• ನಿಗದಿತ ಶುಲ್ಕವನ್ನು ಪಾವತಿಸಿದರೆ ನಿಮ್ಮ ಉಪನಾಮ ಸೇರ್ಪಡೆ ಮುಗಿಯುತ್ತದೆ.

Leave A Reply

Your email address will not be published.