Bigg boss -10: ಏಕಾಏಕಿ ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟ ಗನ್‌ಮ್ಯಾನ್‌ಗಳು !! ಅರೆ.. ಏನಾಯ್ತು ಮನೆಯೊಳಗೆ ?!

Gunmen have suddenly entered the Bigg Boss house

Bigg boss-10: ಕನ್ನಡದ ದೊಡ್ಮನೆ ಆಟ ಜೋರಾಗಿದೆ. ಅಚ್ಚರಿಯಂತೆ ಎಂಟ್ರಿಕೊಟ್ಟಿರೋ ಸ್ಪರ್ಧಿಗಳು, ಯುವ ನಾಯಕರು ಎಲ್ಲರೂ ಈಗಾಗಲೇ ನಾಡಿನ ಜನರನ್ನು ರಂಜಿಸಲು ಶುರುಮಾಡಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಯೊಳಗೆ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಬಿಗ್ ಬಾಸ್ ಮನೆಯೊಳಗೆ ಏಕಾಏಕಿ ಗನ್ ಮ್ಯಾನ್ ಗಳು ಎಂಟ್ರಿ ಕೊಟ್ಟಿದ್ದಾರೆ.

ಹೌದು, ಕನ್ನಡ ಬಿಗ್ಬಾಸ್ ಸೀಸನ್ 10ರ ಆಟ ಆರಂಭದಲ್ಲಿಯೇ ಸಖತ್ ಜೋರಾಗಿದೆ. ದಿನದಿಂದ ದಿನಕ್ಕೆ ಮನೆಯ ರಂಗು ಬದಲಾಗುತ್ತಿದೆ. ಈಗ ಮನೆಯ ಅಸಲಿ ಆಟ ಶುರುವಾಗಿದ್ದು ಬಿಗ್ ಮನೆಗೆ ಗನ್‌ಮ್ಯಾನ್‌ಗಳು ದಿಢೀರ್ ಎಂದು ಎಂಟ್ರಿ ಕೊಟ್ಟಿದ್ದಾರೆ. ಗನ್ ಮ್ಯಾನ್‌ಗಳ ಎಂಟ್ರಿ ನೋಡಿ ಮನೆಮಂದಿ ಶಾಕ್ ಆಗಿದ್ದಾರೆ. ಆದರೆ ನಂತರದಲ್ಲಿ ವಿಚಾರ ತಿಳಿದಿದೆ.

ಅಂದಹಾಗೆ ಬಿಗ್ ಬಾಸ್ ಮನೆಗೆ(Bigg Boss House) 8 ಜನ ಗನ್ ಮ್ಯಾನ್‌ಗಳ (Gun Man) ಆಗಮನವಾಗಿದೆ. ಸಡನ್ ಆಗಿ ಗನ್ ಮ್ಯಾನ್‌ಗಳು ಎಂಟ್ರಿ ಕೊಟ್ಟಿರೋದು ನೋಡಿ ಮನೆ ಮಂದಿ ಒಮ್ಮೆ ಸೈಲೆಂಟ್ ಆಗಿದ್ದಾರೆ. ಬಳಿಕ ಚಪ್ಪಾಳೆ ಹೊಡೆದು ಸ್ಪರ್ಧಿಗಳು ಸ್ವಾಗತ ಕೋರಿದ್ದಾರೆ. ಅವರ ಮುಖದಲ್ಲಿರೋ ಮಂದಹಾಸ ನೋಡಿ ಮನೆಗೆ ಹೊಸ ಸೆಲೆಬ್ರಿಟಿ ಎಂಟ್ರಿ ಕೊಡ್ತಿದ್ದಾರಾ ಎಂಬ ಅನುಮಾನ ಮೂಡಿದೆ.

ಪ್ರದೀಪ್ ಈಶ್ವರ್ ರೀತಿಯಲ್ಲಿ ಯಾರಾದರೂ ಹೊಸ ಸೆಲೆಬ್ರಿಟಿ ಮನೆಗೆ ಎಂಟ್ರಿ ಕೊಡ್ತಾರಾ? ಎಂದು ಸ್ಪರ್ಧಿಗಳೆಲ್ಲಾ ಕಾತರರಾಗಿದ್ದಾರೆ. ಆದರೆ ಬಿಗ್ ಬಾಸ್ ಇನ್ನೂ ಗನ್ ಮ್ಯಾನ್ ಎಂಟ್ರಿ ಯಾಕೆಂದು ಪ್ರೇಕ್ಷಕರಿಗೆ ತೋರಿಸಿಲ್ಲ. ಮುಂದಿನ ಎಪಿಸೋಡ್ ನಲ್ಲಿ ಕಾದು ನೋಡಬೇಕಿದೆ.

Leave A Reply

Your email address will not be published.